ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಾವೇ ಗೆದ್ದಿದ್ದು: ಸ್ವಯಂಘೋಷಣೆಗೆ ಮೂರು ಪಕ್ಷಗಳು ಸಜ್ಜು!

ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ, ರಾಜಕೀಯ ಪಕ್ಷಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಯಶಸ್ಸು ಪಡೆದಿರುವುದಾಗಿ ತೋರಿಸಿಕೊಳ್ಳಲು ಮುಂದಾಗಿವೆ.
ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಬೆಂಬಲಿಗರು
ಚುನಾವಣಾ ಫಲಿತಾಂಶಕ್ಕಾಗಿ ಕಾಯುತ್ತಿದ್ದ ಬೆಂಬಲಿಗರು

ಮೈಸೂರು: ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ, ರಾಜಕೀಯ ಪಕ್ಷಗಳು ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಯಶಸ್ಸು ಪಡೆದಿರುವುದಾಗಿ ತೋರಿಸಿಕೊಳ್ಳಲು ಮುಂದಾಗಿವೆ.

ಪಕ್ಷದ ಸಂಕೇತದಲ್ಲಿ ಅಭ್ಯರ್ಥಿಗಳು ಸ್ಪರ್ಧಿಸದಿದ್ದರು,ರಾಜಕೀಯ ಪಕ್ಷಗಳು ಫೀಡ್ ಬ್ಯಾಕ್ ಆಧಾರದ ಮೇಲೆ ಅಂಕಿ ಅಂಶ ಪಡೆಯುತ್ತಿವೆ.  91,339 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಶೇಕಡಾ 48 ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆದ್ದಿದೆ ಎಂದು ಆಡಳಿತಾರೂಡ ಭಾರತೀಯ ಜನತಾ ಪಕ್ಷ ತಿಳಿಸಿದೆ.

ಸ್ಥಳೀಯ ಸಂಸ್ಥೆಗಳಿಗೆ ಅನುದಾನ ನೀಡಿರುವುದರಿಂದ ಆಡಳಿತ ಪಕ್ಷದ ಈ ಘೋಷಣೆಯನ್ನು ಉತ್ಪ್ರೇಕ್ಷೆ ಮಾಡುವಂತಿಲ್ಲ.ಮುಂದಿನ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಹೋರಾಡಲು ರಾಜಕೀಯ ಪಕ್ಷಗಳಿಗೆ ಗ್ರಾಮ ಪಂಚಾಯಿತಿ ಚುನಾವಣೆಯ ಯಶಸ್ಸು ನಿರ್ಣಾಯಕವಾಗಿದೆ.

ಗ್ರಾಮೀಣ ಒಳನಾಡಿನಲ್ಲಿ ಸೀಮಿತ ವ್ಯಾಪ್ತಿ ಹೊಂದಿರುವ ಬಿಜೆಪಿ ತನ್ನ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಯಶಸ್ಸನ್ನು ಕಟ್ಟಲು ಮುಂದಾಗಿದೆ. ನಗರ ಪ್ರದೇಶಕ್ಕೆ ಬಿಜೆಪಿ ಸೀಮಿತ ಎಂಬ ಹಣೆಪಟ್ಟಿ ತೊಡೆದು ಹಾಕಿರುವ ಬಿಜೆಪಿ ಮೊದಲ ಬಾರಿಗೆ ಗ್ರಾಮೀಣ  ಪ್ರದೇಶಗಳಲ್ಲಿ ತನ್ನ ಛಾಪು ಮೂಡಿಸಿದೆ, ಇದರಿಂದ ಮುಂಬರುಲ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಲ್ಲಿ ಉತ್ತಮ ಪ್ರದರ್ಶನ ತೋರಲು ಸಹಾಯವಾಗುತ್ತದೆ ಎಂದು ಬಿಜೆಪಿ ವಕ್ತಾರ ಜಿ ಮಧೂಸೂದನ್ ತಿಳಿಸಿದ್ದಾರೆ.

ಕಾಂಗ್ರೆಸ್, ಚುನಾವಣೆಗಳು ನಿರ್ಣಾಯಕವಾಗಿದ್ದು, ಬಲವಾದ ಗ್ರಾಮೀಣ ನೆಲೆಯನ್ನು ಹೊಂದಿದೆ ಮತ್ತು ಹಿಂದಿನ ಚುನಾವಣಾ ಅವಧಿಯಲ್ಲಿ ಅತಿ ಹೆಚ್ಚು ಸಂಖ್ಯೆಯನ್ನು  ಹೊಂದಿತ್ತುಆರ್.ಆರ್.ನಗರ ಮತ್ತು ಸಿರಾ ವಿಧಾನಸಭಾ ಉಪಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಪ್ರಬಲ ಪಕ್ಷವಾಗಿ ಮರಳಲು ಬಯಸಿತ್ತು. ಪಕ್ಷದ ಚಿಹ್ನೆಗಳ ಮೇಲೆ ನಡೆಯಲಿರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗೆ ಸಜ್ಜಾಗಲು ಅದು ಬಯಸಿದೆ. ಈ ಚುನಾವಣೆಗಳು ರೈತರಿಗೆ ಬಿಜೆಪಿಗೆ ತನ್ನ ‘ರೈತ ವಿರೋಧಿ
ನೀತಿ’ಗಳಿಗೆ ಪಾಠ ಕಲಿಸಲು ಒಂದು ಉತ್ತಮ ಅವಕಾಶವಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಗ್ರಾಮೀಣ ಭಾರತದ ಹೃದಯಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ಹತಾಶೆಯಿಂದಾಗಿ ಬಿಜೆಪಿ ಹಣ ನೀಡುವ ಮೂಲಕ ಅಥವಾ ಬೆದರಿಕೆ ಹಾಕುವ ಮೂಲಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಆಮಿಷವೊಡ್ಡಲು ಪ್ರಯತ್ನಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಜೆಡಿಎಸ್ ಕೂಡ ತನ್ನ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ತಮ್ಮ ಸಾಂಪ್ರದಾಯಿಕ ಭಾಗದಲ್ಲಿ ಮತ್ತು ಇತರ ಅನೇಕ ಜಿಲ್ಲೆಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಎಂದು  ಜೆಡಿಎಸ್ ಮುಖಂಡ ಸಾ.ರಾ ಮಹೇಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com