ಉಪಚುನಾವಣೆ: ಸಂದಿಗ್ದತೆಯಲ್ಲಿ ಸಿಲುಕಿದ ಬಸವಕಲ್ಯಾಣದ ಮತದಾರ

ಬೀದರ್ ನ ಬಸವಕಲ್ಯಾಣ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ "ಸಹಾನುಭೂತಿಗಾಗಿ ವರ್ಸಸ್ ಜಾತಿಗಾಗಿ" ಎಂಬ ಆಧಾರದ ಮೇಲೆ ಉಪಚುನಾವಣೆ ನಡೆಯುತ್ತಿದೆ. 115 ಗ್ರಾಮಗಳಲ್ಲಿ ಹರಡಿರುವ ಕ್ಷೇತ್ರದ ಜನತೆಯನ್ನು ಸಂಪರ್ಕಿಸಿದಾಗ ಈ ಒಂದು ವಿಚಾರವನ್ನು ಸ್ಪಷ್ಟಪಡಿಸಿದೆ.
ವಿಧವಾ ಪಿಂಚಣಿ ಪಡೆಯಲು ವಿಫಲರಾದ ತೋರುಬಾಯಿ
ವಿಧವಾ ಪಿಂಚಣಿ ಪಡೆಯಲು ವಿಫಲರಾದ ತೋರುಬಾಯಿ
Updated on

ಬಸವಕಲ್ಯಾಣ: ಬೀದರ್ ನ ಬಸವಕಲ್ಯಾಣ ಕ್ಷೇತ್ರದ ಇತಿಹಾಸದಲ್ಲೇ ಮೊದಲ ಬಾರಿಗೆ "ಸಹಾನುಭೂತಿಗಾಗಿ ವರ್ಸಸ್ ಜಾತಿಗಾಗಿ" ಎಂಬ ಆಧಾರದ ಮೇಲೆ ಉಪಚುನಾವಣೆ ನಡೆಯುತ್ತಿದೆ. 115 ಗ್ರಾಮಗಳಲ್ಲಿ ಹರಡಿರುವ ಕ್ಷೇತ್ರದ ಜನತೆಯನ್ನು ಸಂಪರ್ಕಿಸಿದಾಗ ಈ ಒಂದು ವಿಚಾರವನ್ನು ಸ್ಪಷ್ಟಪಡಿಸಿದೆ. ಇಲ್ಲಿ ಗಮನಾರ್ಹ ಸಂಗತಿಯಾಗಿರುವುದು ಮೋದಿ ಅಥವಾ ಕಾಂಗ್ರೆಸ್ ಅಲೆಯಲ್ಲ ಸೆಪ್ಟೆಂಬರ್‌ನಲ್ಲಿ ಕೋವಿಡ್ -19 ರಿಂದ ನಿಧನರಾದ ತಮ್ಮ ಶಾಸಕ ಬಿ ನಾರಾಯಣ ರಾವ್ ಅವರನ್ನು ಗ್ರಾಮಸ್ಥರು ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಅವರು ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿ. ಲಾಕ್ ಡೌನ್ ಸಮಯದಲ್ಲಿ, ಅವರು ಅನೇಕ ಗ್ರಾಮಗಳಿಗೆ ಭೇಟಿ ನೀಡಿದ್ದರು, ಬಡವರಿಗೆ ವೈದ್ಯಕೀಯ ನೆರವು ಮತ್ತು ಆಹಾರ ಧಾನ್ಯಗಳನ್ನು ನೀಡಿದ್ದರು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ. ಅವರ ಪತ್ನಿಈ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.

ಬಿಜೆಪಿಯ ಶರಣು ಸಲಗಾರ ಅವರನ್ನೂ ಗ್ರಾಮಸ್ಥರು ಮೆಚ್ಚಿದ್ದಾರೆ.ಅವರಿಗೂ ಗ್ರಾಮಸ್ಥರು ಆಭಾರಿಯಾಗಿದ್ದಾರೆ. ಕಳೆದ ಏಪ್ರಿಲ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ಈ ಉಪಚುನಾವಣೆ ಬಗ್ಗೆ ಕಲ್ಪನೆ ಇಲ್ಲದಿದ್ದಾಗ್ಯೂ ಸಲಗಾರ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮಸ್ಥರಿಗೆ ಆಹಾರ ಧಾನ್ಯಗಳನ್ನು ವಿತರಿಸಿದರು. "ನಾವು ಯಾರಿಗೆ ಮತ ಹಾಕಬೇಕೆಂಬ ಸಂದಿಗ್ಧತೆಯಲ್ಲಿದ್ದೇವೆ" ಎಂದು ಗ್ರಾಮಸ್ಥರು ಹೇಳುತ್ತಾರೆ.

ಹೆಚ್ಚಿನ ಗ್ರಾಮಸ್ಥರು ಹಣಕ್ಕಾಗಿ ಕಾಯುತ್ತಿದ್ದು  ಚಿಕ್ಕನಗಾಂವ ಗ್ರಾಮದ ಚಮ್ಮಾರ ಪೀರಪ್ಪ, ಹತ್ಯಾಲ್ ಗ್ರಾಮದ ದರ್ಜಿ ಸೂರ್ಯಕಾಂತ್, ಹರಕೋಡ ಗ್ರಾಮದಲ್ಲಿ ಸಣ್ಣ ಹೋಟೆಲ್ ಹೊಂದಿರುವ ಮೆಹಬೂಬಿ ಮತ್ತು ಮುದಾಬಿ ಗ್ರಾಮದ ತರಕಾರಿ ಮಾರಾಟಗಾರ ತೋರುಬಾಯಿ, ರಾವ್ ಮತ್ತು ಸಲಗಾರ ಇಬ್ಬರನ್ನೂ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. “ರಾವ್ ಸ್ವರ್ಗಸ್ಥರಾಗಿದ್ದಾರೆ, ಅವರು ಆಯ್ಕೆಯಾದರೆ ಅವರ ಪತ್ನಿ ನಮಗೆ ಯಾವ ಬಗೆಯಲ್ಲಿ ಸಹಾಯ ಮಾಡಲಿದ್ದಾರೆ ಎಂದು ನಾವು ತಿಳಿದಿಲ್ಲ, ಸಲಗಾರ ಕ್ಷೇತ್ರಕ್ಕೆ ಹೇಗೆ ಸೇವೆ ಸಲ್ಲಿಸುತ್ತಾರೆಂದು ನಮಗೆ ಊಹಿಸಲು ಸಾಧ್ಯವಿಲ್ಲ.  ನಾವು ಬಡವರು, ಮತ್ತು ಪಕ್ಷಗಳ ಮುಖಂಡರು ನಮ್ಮನ್ನು ಭೇಟಿ ಮಾಡಿದ್ದಾರೆ, ಆದರೆ ಆಶ್ವಾಸನೆಗಳನ್ನು ಹೊರತುಪಡಿಸಿ ನಮಗೆ ಏನನ್ನೂ ನೀಡಿಲ್ಲ. ಯಾರಿಗೆ ಮತ ಹಾಕಬೇಕೆಂದು ನಾವು ಇನ್ನೂ ನಿರ್ಧರಿಸಿಲ್ಲ, ”ಎಂದು ಅವರು ಹೇಳುತ್ತಾರೆ.

ವಿಧವೆಯಾದ ತೋರುಬಾಯಿ ಅವರು ಸರ್ಕಾರದಿಂದ ಸಾಲ ಪಡೆಯಲು ಸಾಧ್ಯವಾಗಲಿಲ್ಲ ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ವಿಧವೆ ಪಿಂಚಣಿ ಪಡೆದಿಲ್ಲ ಎಂದು ಅಳಲು ತೋಡಿಕೊಂಡರು. . "ನಾನು ಯಾರಿಗೆ ಮತ ಹಾಕಬೇಕೆಂದು ಹೇಳಿ, ನಮ್ಮಲ್ಲಿ ಬಿಜೆಪಿ ಸರ್ಕಾರವಿದೆ ಆದರೆ ನಮ್ಮ ಶಾಸಕರು ಕಾಂಗ್ರೆಸ್ ಮೂಲದವರು" ಎಂದು ಅವರು ಹೇಳುತ್ತಾರೆ.

ಸಾಮಾಜಿಕ ಕಾರ್ಯಕರ್ತ ಸೂರ್ಯನಾರಾಯಣ್ ಮಾತನಾಡಿ, ಬಹುತೇಕ ಎಲ್ಲ ಹಳ್ಳಿಗಳಲ್ಲಿ ಶಾಲೆಗಳಿದ್ದರೂ, ಅವುಗಳಲ್ಲಿ ಹಲವು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಹಳ್ಳಿಗಳಿಗೆ ರಸ್ತೆ, ಬೀದಿ ದೀಪಗಳು ಮತ್ತು ನೈರ್ಮಲ್ಯದಂತಹ ಮೂಲಸೌಕರ್ಯಗಳಿಲ್ಲ, ಮತ್ತು ಅನೇಕ ತಾಂಡಾಗಳಿಗೆ ಬಸ್ ಸೌಲಭ್ಯಗಳಿಲ್ಲ. ರಾಜಕೀಯ ವೀಕ್ಷಕರಾದ ಬಸವರಾಜ್, ಜೆಡಿಎಸ್ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಭ್ಯರ್ಥಿ ಸೈಯದ್ ಯಸ್ರಾಬ್ ಅಲಿ ಖಾದ್ರಿಯವರನ್ನು ಅಲ್ಪಸಂಖ್ಯಾತ ಮತಗಳನ್ನು ಪಡೆಯುವಲ್ಲಿ ಯಶಸ್ವಿಯಾಗಬಹುದು ಎಂದು ಹೇಳುತ್ತಾರೆ. ಇದು ಬಿಜೆಪಿಗೆ ಸಹಾಯ ಮಾಡುತ್ತದೆ, ಏಕೆಂದರೆ ಈ ಮತದಾರರು ಕಾಂಗ್ರೆಸ್ ಬೆಂಬಲಿಗರು ಎಂದು ನಂಬಲಾಗಿದೆ.

ಎರಡು ಬಾರಿಯ ಮಾಜಿ ಶಾಸಕ ಮಲ್ಲಿಕಾರ್ಜುನ್ ಖೂಬಾ ಜೆಡಿಎಸ್ ನಲ್ಲಿದ್ದರೂ ಈಗ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದಾರೆ. ಖೂಬಾ ಕಳೆದ ಬಾರಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರಿಂದ ಬಿಜೆಪಿ ಮತಗಳ ಕಡಿತಕ್ಕೆ ಕಾರಣವಾಗಬಹುದು.ಈ ಬಾರಿಯೂ ಪ್ರಬಲ ಸ್ಪರ್ಧಿಯಾಗಿದ್ದಾರೆ. ಇದಲ್ಲದೆ, ಸುಮಾರು 20,000 ಮತದಾರರು ಮುಂಬೈ, ಪುಣೆ ಮತ್ತು ಹೈದರಾಬಾದ್‌ನಂತಹ ನಗರಗಳಿಗೆ ವಲಸೆ ಹೋಗಿ ವಾಪಾಸಾಗಿದ್ದಾರೆ. ಮತವು ಹೇಗೆ ಬದಲಾಗುತ್ತದೆ ಎಂಬುದನ್ನು ನಿರ್ಧರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.

ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಮಾತನಾಡಿ, 30 ವರ್ಷಗಳಿಗಿಂತ ಹೆಚ್ಚು ಸಮಯದ ನಂತರ, ಬಸವಕಲ್ಯಾಣ ಮತದಾರರು 2018 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಆಯ್ಕೆ ಮಾಡಿದ್ದರು, ಆದರೆ ನಾರಾಯಣ ರಾವ್ ಅವರು 30 ತಿಂಗಳೊಳಗೆ ನಿಧನ ಹೊಂದಿದ್ದಾರೆ.ತೆ, ಕ್ಷೇತ್ರದ ಹಿಂದುಳಿದಿರುವಿಕೆಗೆ ಜನರು ಅವರನ್ನು ದೂಷಿಸಲು ಸಾಧ್ಯವಿಲ್ಲ. ಈ ಬಾರಿ ಮತ ಚಲಾಯಿಸಿದರೆ ಕ್ಷೇತ್ರವನ್ನು ಅಭಿವೃದ್ಧಿಪಡಿಸುವ ಜವಾಬ್ದಾರಿಯನ್ನು ಪಕ್ಷ ತೆಗೆದುಕೊಳ್ಳುತ್ತದೆ ಎಂದರು. ಜೆಪಿ ವಕ್ತಾರ ರಾಜ್‌ಕುಮಾರ್ ಪಾಟೀಲ್ ತೆಲ್ಕೂರ್ ಅವರು ಬಸವಕಲ್ಯಾಣಕ್ಕಾಗಿ ಬಿಜೆಪಿ ಕೈಗೊಂಡ ಕಲ್ಯಾಣ ಕ್ರಮಗಳನ್ನು ಪಟ್ಟಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com