
ಮಸ್ಕಿ: ಮಸ್ಕಿ ವಿಧಾನಸಭೆ ಚುನಾವಣೆ ಮತದಾನ ಆರಂಭವಾಗಿದ್ದು, 305 ಬೂತ್ ಗಳಲ್ಲಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ.
ಇದೇ ಮೊದಲ ಬಾರಿಗೆ ಕೊರೋನಾ ಕಾರಣದಿಂದಾಗಿ 12 ಗಂಟೆ ಸಮಯ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿದೆ.ಪ್ರತಾಪ್ ಗೌಡ ಪಾಟೀಲ್, ಬಸನಗೌಡ ತುರುವಿಹಾಳ್ ಪಾಟೀಲ್ ಸೇರಿದಂತೆ 8 ಮಂದಿ ಕಣದಲ್ಲಿದ್ದಾರೆ.
ಬಿಜೆಪಿಯ ಪ್ರತಾಪ್ ಗೌಡ ಮತ್ತು ಕಾಂಗ್ರೆಸ್ ನ ಬಸನಗೌಡ ಪಾಟೀಲ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್ - ಮತ್ತು ಬಿಜೆಪಿ ಎರಡು ಪಕ್ಷಗಳು ಮಸ್ಕಿ ವಿಧಾನಸಭೆ ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿವೆ.
Advertisement