'ಸುಸೂತ್ರವಾಗಿ ನಡೆಯುತ್ತಿದ್ದ ಸರ್ಕಾರ ಬೀಳಿಸಿದ್ದಕ್ಕೆ, ಆಪರೇಷನ್ ಕಮಲದಂತಹ ಅನೈತಿಕತೆಗೆ ಬಿಜೆಪಿ  ಜನರ ಕ್ಷಮೆ ಕೇಳಲಿ'

ರಾಜ್ಯ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ. ಸುಸೂತ್ರವಾಗಿ ನಡೆಯುತ್ತಿದ್ದ ಸರ್ಕಾರ ಬೀಳಿಸಿದ್ದಕ್ಕೆ, ಆಪರೇಷನ್ ಕಮಲದಂತಹ ಅನೈತಿಕತೆಗೆ ಬಿಜೆಪಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ.
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು: ರಾಜ್ಯ ಬಿಜೆಪಿ ವಿರುದ್ಧ ಕರ್ನಾಟಕ ಕಾಂಗ್ರೆಸ್ ಹರಿಹಾಯ್ದಿದೆ. ಸುಸೂತ್ರವಾಗಿ ನಡೆಯುತ್ತಿದ್ದ ಸರ್ಕಾರ ಬೀಳಿಸಿದ್ದಕ್ಕೆ, ಆಪರೇಷನ್ ಕಮಲದಂತಹ ಅನೈತಿಕತೆಗೆ ಬಿಜೆಪಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದೆ,

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ಸಿಕ್ಕ ಅಧಿಕಾರಾವಧಿಯನ್ನು ಸಂಪುಟ ವಿಸ್ತರಣೆ, ಸಂಪುಟ ರಚನೆ, ನಾಯಕತ್ವ ಬದಲಾವಣೆ, ಆಂತರಿಕ ಕಲಹದಲ್ಲಿಯೇ ಕಳೆದಿದ್ದಕ್ಕೆ.ರಾಜ್ಯವನ್ನು ತನ್ನ ರಾಜಕೀಯ ಪ್ರಯೋಗಶಾಲೆ ಮಾಡಿಕೊಂಡಿದ್ದಕ್ಕೆ ಬಿಜೆಪಿ ರಾಜ್ಯದ ಜನರ ಬಳಿ ಕ್ಷಮೆ ಕೋರಬೇಕೆಂದು ಒತ್ತಾಯಿಸಿದೆ.

ನೆರೆ ಪರಿಹಾರ ಕೊಡದಿದ್ದಕ್ಕೆ, ಕೋವಿಡ್ ನಿರ್ವಹಣೆಯ ವೈಫಲ್ಯಕ್ಕೆ, ಕೇಂದ್ರದಿಂದ ನೆರೆ ಪರಿಹಾರ, ಜಿಎಸ್ ಟಿ ಬಾಕಿ ತರಲಾಗದಿದ್ದಕ್ಕೆ, ಶೈಕ್ಷಣಿಕ ಬಿಕ್ಕಟ್ಟು ಬಗೆಹರಿಸದಿದ್ದಕ್ಕೆ, ಅರಾಜಕತೆ ಸೃಷ್ಟಿಸಿದ್ದಕ್ಕೆ, ಭ್ರಷ್ಟಾಚಾರ ನಡೆಸಿದ್ದಕ್ಕೆ, ಸಮರ್ಪಕ ಸರ್ಕಾರ ನಡೆಸದಿದ್ದಕ್ಕೆ, ಲಸಿಕೆ ಕೊಡಲಾಗದಿದ್ದಕ್ಕೆ ಬಿಜೆಪಿ ಕರ್ನಾಟಕ ರಾಜ್ಯದ ಜನರ ಕ್ಷಮೆ ಕೋರಬೇಕೆಂದು ಹೇಳಿದೆ.

ಇದುವರೆಗೂ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ್ದಕ್ಕೆ ಸ್ಪಷ್ಟ ಕಾರಣವನ್ನು ಅವರೂ ನೀಡಿಲ್ಲ, ಬಿಜೆಪಿಯೂ ನೀಡಿಲ್ಲ. ರಾಜ್ಯದ ಸಿಎಂ ರಾಜೀನಾಮೆ ನೀಡಿದ್ದೇಕೆ ಎಂಬ ಕಾರಣವನ್ನು ತಿಳಿದುಕೊಳ್ಳುವ ಹಕ್ಕು ಪ್ರತಿ ಪ್ರಜೆಗೂ ಇದೆ. ಹೀಗಾಗಿ ಕಾರಣ ಬಹಿರಂಗಪಡಿಸಲಿ ಹಾಗೂ ಸಂಕಷ್ಟದ ನಡುವೆ ರಾಜಕೀಯ ಅಸ್ಥಿರತೆ ಸೃಷ್ಟಿಸಿದ್ದಕ್ಕೆ ಜನರ ಕ್ಷಮೆ ಕೇಳಲಿ ಆಗ್ರಹ ಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com