ನಗರ ಸ್ಥಳೀಯ ಸಂಸ್ಥೆ ಚುನಾವಣೆ: ಗದಗದ 'ಚಾಯ್‌ವಾಲಾ ಮೋದಿ'ಗೆ ಬಿಜೆಪಿ ಟಿಕೆಟ್

'ಚಾಯ್‌ವಾಲಾ ಮೋದಿ’ ಎಂದೇ ಖ್ಯಾತರಾಗಿರುವ ಗದಗದ ಟೀ ಮಾರಾಟಗಾರರೊಬ್ಬರು ಗದಗ-ಬೆಟಗೇರಿ ಪಟ್ಟಣದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಗದಗ: 'ಚಾಯ್‌ವಾಲಾ ಮೋದಿ’ ಎಂದೇ ಖ್ಯಾತರಾಗಿರುವ ಗದಗದ ಟೀ ಮಾರಾಟಗಾರರೊಬ್ಬರು ಗದಗ-ಬೆಟಗೇರಿ ಪಟ್ಟಣದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ.

ಬಿಜೆಪಿ ಟಿಕೆಟ್ ಗಾಗಿ ಪಕ್ಷದ ಹಲವು ಕಾರ್ಯಕರ್ತರು ಮತ್ತು ಉದ್ಯಮಿಗಳು ಯತ್ನಿಸಿದ್ದರು, ಆದರೆ 23 ನೇ ವಾರ್ಡ್ ನ ಚೆನ್ನಪ್ಪ ದ್ಯಾಮಪುರ್ ಅವರಿಗೆ ಟಿಕೆಟ್ ಸಿಕ್ಕಿದೆ.  ಹೀಗಾಗಿ ಸ್ಥಳೀಯ ನಿವಾಸಿಗಳಿಗೆ ಅವರು ಅಭಿನಂದನೆ ಸಲ್ಲಿಸಿದ್ದಾರೆ.

<strong>ಚೆನ್ನಪ್ಪ ದ್ಯಾಮಪುರ್</strong>
ಚೆನ್ನಪ್ಪ ದ್ಯಾಮಪುರ್

ಚುನಾವಣಾ ಪ್ರಚಾರಕ್ಕೆ ಖರ್ಚು ಮಾಡಲು ಅವರ ಚಾಯ್‌ವಾಲಾ ಬಳಿ ಹಣವಿಲ್ಲ, ಆದರೆ ಅವರು ಮತದಾರರನ್ನು ಭೇಟಿ ಮಾಡಿ ಬಿಸಿ  ಬಿಸಿ ಚಹಾ ನೀಡುತ್ತಿದ್ದಾರೆ, ಜೊತಗೆ ತನಗೆ ಮತ ನೀಡುವಂತೆ ಮನವಿ ಮಾಡುತ್ತಿದ್ದಾರೆ.

ಚೆನ್ನಪ್ಪ ಸ್ನೇಹಿತರು ಮತ್ತು ಕುಟುಂಬದವರು ಕೆಲವು ಖರ್ಚುಗಳನ್ನು ಪೂರೈಸಲು ಸಹಾಯ ಮಾಡುತ್ತಿದ್ದಾರೆ. ಚೆನ್ನಪ್ಪ ಅವರು ಕಳೆದ 25 ವರ್ಷಗಳಿಂದ ಗದಗಿನ ಮುಳಗುಂದ ನಾಕಾ ಮತ್ತು ರಾಚೋಟೇಶ್ವರನಗರ ಬಳಿ ಚಹಾ ಮಾರಾಟ ಮಾಡುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಚಿಕ್ಕ ವಯಸ್ಸಿನಲ್ಲಿ  ಚಹಾ ಮಾರುವ ಸುದ್ದಿ ಹರಡಿದ ನಂತರ, ಜನರು ಚೆನ್ನಪ್ಪನನ್ನು 'ಮೋದಿ' ಎಂದು ಕರೆಯಲು ಪ್ರಾರಂಭಿಸಿದರಂತೆ. ಎರಡು ವಾರಗಳ ಹಿಂದೆ, ಮುಂಬರುವ ವಾರ್ಡ್ ಚುನಾವಣೆಯಲ್ಲಿ ತಮ್ಮ ನಾಯಕನನ್ನು ಆಯ್ಕೆ ಮಾಡಲು ವಾರ್ಡ್ 23 ರ ನಿವಾಸಿಗಳು ಸಭೆ ಕರೆದರು, ಆಗ ಚೆನ್ನಪ್ಪ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸ್ಥಳೀಯ ನಿವಾಸಿಗಳೇ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು, ಅವರೇ ನಮ್ಮ ಕ್ಷೇತ್ರದ ಮೋದಿ ಎಂದು ನಿವಾಸಿ ಸಿದ್ದಲಿಂಗೇಶ್ವರ ಅರಳಿ ಹೇಳಿದ್ದಾರೆ ರಾಜಕೀಯ ಸೇರುವ ಯೋಚನೆಯೇ ಇರಲಿಲ್ಲ. ಆದರೆ ಜನರು ನನ್ನ ಮೇಲೆ ನಂಬಿಕೆ ಇಟ್ಟಿದ್ದು, ಅವರ ಪರ ಕೆಲಸ ಮಾಡುತ್ತೇನೆ ಎಂದು ಚೆನ್ನಪ್ಪ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com