ನಾನು ಚಾಮರಾಜಪೇಟೆಯ ಅಳಿಯ ಎಂದ ಸಿದ್ದರಾಮಯ್ಯ: ಅಧಿಕಾರದ ಲಾಲಸೆ ವಲಸೆರಾಮಯ್ಯರಿಗೆ ಪ್ರೇರಣೆ ಎಂದು ಬಿಜೆಪಿ ಲೇವಡಿ!

ಸ್ವ ಕ್ಷೇತ್ರ ಚಾಮುಂಡೇಶ್ವರಿಯ ಜನತೆಗೂ ಸಿದ್ದರಾಮಯ್ಯ ನ್ಯಾಯ ಒದಗಿಸಿಲ್ಲ, ಅತ್ತ ಬಾದಾಮಿ ಕ್ಷೇತ್ರದ ಜನತೆಯನ್ನೂ ಮರೆತು ಬಿಟ್ಟಿದ್ದಾರೆ. ಅಧಿಕಾರದ ಲಾಲಸೆ ಚಾಮರಾಜಪೇಟೆ ವಲಸೆಗೆ ಪ್ರೇರೆಪಿಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಬೆಂಗಳೂರು: ಸ್ವ ಕ್ಷೇತ್ರ ಚಾಮುಂಡೇಶ್ವರಿಯ ಜನತೆಗೂ ಸಿದ್ದರಾಮಯ್ಯ ನ್ಯಾಯ ಒದಗಿಸಿಲ್ಲ, ಅತ್ತ ಬಾದಾಮಿ ಕ್ಷೇತ್ರದ ಜನತೆಯನ್ನೂ ಮರೆತು ಬಿಟ್ಟಿದ್ದಾರೆ. ಅಧಿಕಾರದ ಲಾಲಸೆ ಚಾಮರಾಜಪೇಟೆ ವಲಸೆಗೆ ಪ್ರೇರೆಪಿಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ರಾಜಕೀಯ ಜೀವನವೇ ‌ಅಂತ್ಯವಾಯಿತು ಎನ್ನುವಾಗ ಕೈಹಿಡಿದ ಬಾದಾಮಿ ಕ್ಷೇತ್ರವನ್ನೇ ಮರೆತುಬಿಟ್ಟ ಪಾಪ ನಿಮ್ಮನ್ನು ಕಾಡದೆ ಇರದು. ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಇಷ್ಟು ವರ್ಷ ಬಾರದ ಮಾವನ ಮನೆಯ ನೆನಪು ಇತ್ತೀಚೆಗೆ ಬಾರೀ ಕಾಡುತ್ತಿದೆ. ಮುಖ್ಯಮಂತ್ರಿಯಾಗಿದ್ದಾಗಲೂ ಬಾರದ ನೆನಪು ಈಗ ಬರುತ್ತಿರುವುದರ ಹಿಂದೆ ಸುರಕ್ಷಿತ ಕ್ಷೇತ್ರದಲ್ಲಿ ನೆಲೆಯೂರುವ ತವಕ ಎದ್ದು ಕಾಣುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

ಚಾಮರಾಜಪೇಟೆ ಕಾರ್ಯಕ್ರಮದಲ್ಲಿ ನಾನು ಚಾಮರಾಜಪೇಟೆ ಅಳಿಯ. ಇಲ್ಲಿ ನನ್ನ ಮಾವನ ಮನೆಯಿತ್ತು, ಈಗಲೂ ಇದೆ, ಮನೆಯನ್ನು ಬಾಡಿಗೆಗೆ ಕೊಟ್ಟಿದ್ದಾರೆ, ಹೀಗಾಗಿ ನಾನು ಚಾಮರಾಜಪೇಟೆ ಅಳಿಯ ಎಂದು ಸಿದ್ದರಾಮಯ್ಯ ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com