ಕೇಂದ್ರ ಸಂಪುಟದಲ್ಲಿ ದಲಿತರಿಗೆ ಸ್ಥಾನ: ಮೋದಿ 'ಸಾಮಾಜಿಕ ನ್ಯಾಯ' ದಿಂದ ಕಾಂಗ್ರೆಸ್ ಗೆ ಶಾಕ್!

ಕರ್ನಾಟಕದ ಎಸ್ ಸಿ (ಎಡ) ಸುಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದೆ. 
ಮೋದಿ ಸಂಪುಟಕ್ಕೆ ನೂತನ ಸಚಿವರ ಸೇರ್ಪಡೆ
ಮೋದಿ ಸಂಪುಟಕ್ಕೆ ನೂತನ ಸಚಿವರ ಸೇರ್ಪಡೆ

ತುಮಕೂರು: ಕರ್ನಾಟಕದ ಎಸ್ ಸಿ (ಎಡ) ಸುಮುದಾಯದ ಮತಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಚಿತ್ರದುರ್ಗ ಸಂಸದ ಆನೇಕಲ್ ನಾರಾಯಣಸ್ವಾಮಿ ಅವರಿಗೆ ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದೆ. 

2018ರ ವಿಧಾನಸಭೆ ಮತ್ತು 2019ರ ಲೋಕಸಭೆ ಚುನಾವಣೆಯಲ್ಲಿ ಈ ಸಮುದಾಯ ಬಿಜೆಪಿ ಪರವಾಗಿ ಅಧಿಕ ಮತ ಚಲಾಯಿಸಿತ್ತು. ಎಸ್ ಸಿ (ಎಡ) ಸಮುದಾಯಕ್ಕೆ ಸೇರಿದ ಗೋವಿಂದ ಕಾರಜೋಳ ಅವರನ್ನು ಈಗಾಗಲೇ ರಾಜ್ಯದ ಉಪ ಮುಖ್ಯಮಂತ್ರಿ ಮಾಡಲಾಗಿದೆ. 

ಇದರ ಜೊತೆಗೆ ಮೋದಿ ಸರ್ಕಾರದಲ್ಲಿ ಇದೇ ಸಮುದಾಯದ ಮತ್ತೊಬ್ಬ ನಾಯಕನಿಗೆ ಅವಕಾಶ ನೀಡಲಾಗಿದೆ. ಶಿರಾ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವಿಗೆ ಕಾರಜೋಳ ಮತ್ತು ನಾರಾಯಣಸ್ವಾಮಿ ಶ್ರಮಿಸಿದ್ದರು. ಪ್ರಮುಖವಾಗಿ ತಮ್ಮ ಸಮುದಾಯದ ಮತದಾರರನ್ನು ಓಲೈಸಿದ್ದರು.

ಇನ್ನೂ ಕರ್ನಾಟಕದ ರಾಜ್ಯಪಾಲರಾಗಿ ನೇಮಕವಾಗಿರುವ ತಾವರ್ ಚಂದ್ ಗೆಹ್ಲೋಟ್ ಕೂಡ ಎಸ್ ಸಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಮತ್ತೊಂದು ಅಚ್ಚರಿ ವಿಷಯವೆಂದರೇ ತಾವರ್ ಚಂದ್ ನೇಮಕದಿಂದ ಕಾಂಗ್ರೆಸ್ ನ ಒಂದು ವರ್ಗದ ನಾಯಕರು ಖುಷಿಯಾಗಿದ್ದಾರೆ, ಅವರೊಬ್ಬ ಪ್ರಮುಖ ಎಸ್ ಸಿ ನಾಯಕ, ವಿದ್ಯಾವಂತ, ಜೊತೆಗೆ ಸಮರ್ಥ ಕೇಂದ್ರ ಸಚಿವ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ.

ಕೇಂದ್ರ ಸಂಪುಟದಲ್ಲಿ ಎಸ್ ಸಿ ಸಮುದಾಯಕ್ಕೆ ಸ್ಥಾನ ನೀಡಿರುವುದು ಕರ್ನಾಟಕ ರಾಜಕೀಯದಲ್ಲಿ ಸುದೀರ್ಘ ಕಾಲದವರೆಗೆ ಪರಿಣಾಮವಿರುತ್ತದೆ,ಇದಕ್ಕೆ ವ್ಯತಿರಿಕ್ತವಾಗಿ, ಎಸ್‌ಸಿ (ಎಡ) ಸದಸ್ಯರಿಗೆ ಸಂಘಟನೆಯಲ್ಲಿಯೂ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ವಿಫಲವಾಗಿದೆ.

ಈಗ ಕೇಂದ್ರ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಅವರಂತಹ ನಾಯಕರು ಕೆಪಿಸಿಸಿಯಲ್ಲಿ ಸೂಕ್ತ ಪ್ರಾತಿನಿಧ್ಯಕ್ಕಾಗಿ ಒತ್ತಾಯಿಸಬಹುದು. ಮೂಲಗಳ ಪ್ರಕಾರ, ಅವರ ಮಗಳು ಮತ್ತು ಕೆಜಿಎಫ್ ಶಾಸಕ ರೂಪಕಲಾ ಅವರನ್ನು ಕೆಪಿಸಿಸಿ ಮಹಿಳಾ ವಿಭಾಗದ ಅಧ್ಯಕ್ಷ ಸ್ಥಾನಕ್ಕೆ ನೇಮಿಸಲಾಗುವುದು ಎಂದು ತಿಳಿದು ಬಂದಿದೆ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಪ್ರಮುಖ ಯುಪಿಎ-1 ಮತ್ತು ಯುಪಿಎ- 2ನೇ ಸರ್ಕಾರದಲ್ಲಿ ಮುನಿಯಪ್ಪ ಅವರು ಕೇಂದ್ರ ಸಚಿವರಾಗಿದ್ದರು, ಆದರೆ ಈಗ ಬಿಜೆಪಿ ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡುವ ಮೂಲಕ ಒಂದು ಹೆಜ್ಜೆ ಮುಂದಿದೆ.

ವಿಶೇಷವೆಂದರೆ, ಅಲ್ಪಸಂಖ್ಯಾತರನ್ನು ಹೊರತುಪಡಿಸಿ, ಮೋದಿ ಸರ್ಕಾರವು ಈಗ ಎಸ್‌ಸಿ (12), ಎಸ್‌ಟಿ (8) ಮತ್ತು ಒಬಿಸಿ (27) ಸಮುದಾಯಗಳ 57 ಮಂತ್ರಿಗಳನ್ನು ಹೊಂದಿದ್ದು, ಸಾಮಾಜಿಕ ಸಮತೋಲನವನ್ನು ಸಾಧಿಸಿದೆ ಮತ್ತು ಐದು ರಾಜ್ಯಗಳಿಗೆ, ವಿಶೇಷವಾಗಿ ಉತ್ತರ ಪ್ರದೇಶಕ್ಕೆ ಮತದಾನದ ಮೊದಲು ಸಂದೇಶವನ್ನು ರವಾನಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com