ಪ್ರತಿದಿನ 1 ಕೋಟಿ ಜನರಿಗೆ ಲಸಿಕೆ ಹಾಕಿ: ಕೇಂದ್ರ ಸರ್ಕಾರಕ್ಕೆ ಕಾಂಗ್ರೆಸ್ ಆಗ್ರಹ

ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನರಿಗೆ ಕೋವಿಡ್‌ ಲಸಿಕೆ ವ್ಯಾಕ್ಸಿನೇಷನ್‌ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲ‌ ವಿ.ಆರ್.ವಾಲಾ ಅವರಿಗೆ ಮನವಿ ಮಾಡಿದೆ.
ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ
ಕಾಂಗ್ರೆಸ್ ನಿಯೋಗದಿಂದ ರಾಜ್ಯಪಾಲರ ಭೇಟಿ
Updated on

ಬೆಂಗಳೂರು: ದೇಶದಲ್ಲಿ ಪ್ರತಿ ದಿನ ಒಂದು ಕೋಟಿ ಜನರಿಗೆ ಕೋವಿಡ್‌ ಲಸಿಕೆ ವ್ಯಾಕ್ಸಿನೇಷನ್‌ ಮಾಡುವಂತೆ ಕೇಂದ್ರ ಸರ್ಕಾರದ ಗಮನಕ್ಕೆ ತರುವಂತೆ ರಾಜ್ಯ ಕಾಂಗ್ರೆಸ್ ನಾಯಕರ ನಿಯೋಗ ರಾಜ್ಯಪಾಲ‌ ವಿ.ಆರ್.ವಾಲಾ ಅವರಿಗೆ ಮನವಿ ಮಾಡಿದೆ.

ರಾಜಭವನಕ್ಕೆ ತೆರಳಿದ ಕಾಂಗ್ರೆಸ್ ನಾಯಕರ ನಿಯೋಗ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಮಾಜಿ ಸಚಿವ ರಾಮಲಿಂಗಾ ರೆಡ್ಡಿ, ಆರ್.ವಿ.ದೇಶಪಾಂಡೆ, ಹೆಚ್.ಕೆ.ಪಾಟೀಲ್ ಸಹಾ ನಿಯೋಗದಲ್ಲಿದ್ದರು. ಪ್ರತಿದಿನ ಒಂದು ಕೋಟಿ ವ್ಯಾಕ್ಸಿನೇಷನ್‌ ದೇಶದಲ್ಲಿ ಆಗಬೇಕು. ಉಚಿತ ವ್ಯಾಕ್ಸಿನೇಷನನ್ನ ಸರ್ಕಾರ ಜನರಿಗೆ ನೀಡಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇದರ ಜವಾಬ್ದಾರಿ ತಗೆದುಕೊಳ್ಳಬೇಕು ಎಂದು ರಾಜ್ಯಪಾಲರಿಗೆ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ‌.

ರಾಜ್ಯಪಾಲರ ಮೂಲಕ, ರಾಷ್ಟ್ರಪತಿ ಗಳಿಗೆ ಮನವಿ ಮಾಡಿದ ಕೈ ನಾಯಕರು ಪ್ರಧಾನಿಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕಾಂಗ್ರೆಸ್ ಪಕ್ಷದ ಶಾಸಕರ ಪಾಲಿನ ಒಂದು ಕೋಟಿ ಪ್ರದೇಶಾಭಿವೃದ್ಧಿ ನಿಧಿ ನಮಗೆ ಕೊಡಿಸಿ ಎಂದು ರಾಜ್ಯಪಾಲರಲ್ಲಿ ಕಾಂಗ್ರೆಸ್ ನಾಯಕರು ಮನವಿ ಮಾಡಿದ್ದಾರೆ.

ಕೇಂದ್ರದ ಪ್ರಕಾರ, ಇದು ಮೇ 3 ರವರೆಗೆ 21.31 ಕೋಟಿ ಪ್ರಮಾಣದ ಲಸಿಕೆಗಳನ್ನು ನೀಡಿದೆ. ಆದರೆ, ಕೇವಲ 4.45 ಪ್ರಮುಖ ಭಾರತೀಯರು ಮಾತ್ರ ಲಸಿಕೆಯ ಎರಡೂ ಪ್ರಮಾಣವನ್ನು ಸ್ವೀಕರಿಸಿದ್ದಾರೆ, ಇದು ಭಾರತದ ಜನಸಂಖ್ಯೆಯ ಶೇಕಡಾ 3.17 ರಷ್ಟಿದೆ ಎಂದು ರಾಜ್ಯಪಾಲರಿಗೆ ಸಲ್ಲಿಸಿರುವ ಮೆಮೋರಂಡಮ್ ನಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆ.

ಕಾಂಗ್ರೆಸ್ ನಾಯಕರಾದ ಕೃಷ್ಣ ಬೈರೆಗೌಡ, ರಿಜ್ವಾನ್ ಅರ್ಷದ್ ಮತ್ತು ಪ್ರಿಯಾಂಕ್ ಖರ್ಗೆ ನಿಧಾನಗತಿಯ ವ್ಯಾಕ್ಸಿನೇಷನ್ ಮತ್ತು ಬೆಲೆ ವ್ಯತ್ಯಾಸದ ಬಗ್ಗೆ ಗಮನಸೆಳೆದಿದ್ದರು.   ಬಡವರು ಮತ್ತು ತಂತ್ರಜ್ಞಾನ ಬಳಕೆ ಗೊತ್ತಿಲ್ಲದವರು ವ್ಯಾಕ್ಸಿನೇಷನ್ ನಿಂದ  ಹೊರಗುಳಿಯುತ್ತಿದ್ದಾರೆ ಎಂದು ಆರೋಪಿಸಿದ್ದರು.

ಎರಡು ತಿಂಗಳಾಗಿದೆ, ಆದರೆ ಲಸಿಕೆ ಸಮಸ್ಯೆಯನ್ನು ಪರಿಹರಿಸಲು ಸರ್ಕಾರಕ್ಕೆ ಸಾಧ್ಯವಾಗಲಿಲ್ಲ. ಸರ್ಕಾರದ ಬಳಿ ಲಸಿಕೆಗಳಿಲ್ಲ ಹೀಗಾಗಿ ಬಡವರು ಮತ್ತು ದುರ್ಬಲರು ತೊಂದರೆ ಅನುಭವಿಸುತ್ತಿದ್ದಾರೆ, ಆದರೆ ಖಾಸಗಿ ಆಸ್ಪತ್ರೆಗಳಲ್ಲಿ ಲಸಿಕೆಗಳನ್ನು ಪ್ರತಿ ಡೋಸ್‌ಗೆ 1,200 ರೂ.ನಿಗದಿ ಪಡಿಸಿದ್ದಾರೆ. ಬಡವರು ಏನು ಮಾಡಬೇಕು? ಅವರ ಜೀವನ ಮುಖ್ಯವಲ್ಲವೇ ಎಂದು ಪ್ರಶ್ನಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com