ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರು ಕೆಳಗಿಳಿಯುವ ಪ್ರಶ್ನೆಯೇ ಇಲ್ಲ: ಡಿಸಿಎಂ ಅಶ್ವಥ ನಾರಾಯಣ

ರಾಜ್ಯ ರಾಜಕೀಯದಲ್ಲಿ ಸಿಎಂ ಯಡಿಯೂರಪ್ಪನವರ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಸರ್ಕಾರದ ಸಚಿವರುಗಳು ಒಬ್ಬೊಬ್ಬರೇ ಹೇಳಿಕೆ ನೀಡುತ್ತಿದ್ದಾರೆ.
ಡಿಸಿಎಂ ಅಶ್ವಥ ನಾರಾಯಣ
ಡಿಸಿಎಂ ಅಶ್ವಥ ನಾರಾಯಣ
Updated on

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸಿಎಂ ಯಡಿಯೂರಪ್ಪನವರ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ. ಸರ್ಕಾರದ ಸಚಿವರುಗಳು ಒಬ್ಬೊಬ್ಬರೇ ಹೇಳಿಕೆ ನೀಡುತ್ತಿದ್ದಾರೆ.

ಮಾಧ್ಯಮಗಳು ಕೇಳಿದ ಪ್ರತಿಕ್ರಿಯೆಗೆ ಉತ್ತರಿಸಿದ ಡಿಸಿಎಂ ಅಶ್ವಥ ನಾರಾಯಣ, ಯಡಿಯೂರಪ್ಪನವರ ಬದಲಾವಣೆಯ ಪ್ರಶ್ನೆಯೇ ಇಲ್ಲ, ಅಂತಹ ಯಾವುದೇ ಮಾತುಕತೆ, ಚರ್ಚೆ ಪಕ್ಷದಲ್ಲಿ ನಡೆಯುತ್ತಿಲ್ಲ, ಪಕ್ಷದ ನಿಷ್ಠಾವಂತ ಸೈನಿಕನಾಗಿ ಹೈಕಮಾಂಡ್ ತೆಗೆದುಕೊಂಡಿರುವ ಯಾವುದೇ ನಿರ್ಧಾರಗಳಿಗೆ ಬದ್ಧನಾಗಿರಲು ಸಿದ್ಧ ಎಂದು ಹೇಳಿದ್ದಾರಷ್ಟೆ. ಅವರ ಹೇಳಿಕೆಗೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ಯಡಿಯೂರಪ್ಪ ಯಾವ ಸಂದರ್ಭದಲ್ಲಿ ಏನು ಹೇಳಿದ್ದರೋ ಗೊತ್ತಿಲ್ಲ. ಆದರೆ ಅವರೇ ನಮ್ಮ ನಾಯಕರು. ಅವರೇ ನಮ್ಮ ಸಿಎಂ ಎಂದರು. ಯಡಿಯೂರಪ್ಪ ತಾವು ಕುರ್ಚಿಗೆ ಅಂಟಿಕೊಂಡಿಲ್ಲ.ಶಿಸ್ತಿನ ಸಿಪಾಯಿ ಎಂದು ಹೇಳುವ ಮೂಲಕ ಪ್ರತಿಪಕ್ಷ ಮತ್ತು ಕೆಲವರಿಗೆ ಸಂದೇಶ ರವಾನೆ ಮಾಡಿದ್ದಾರೆ. ಅವರೇ ನಮ್ಮ ಸಿಎಂ, ಅವರೇ ಮುಂದುವರೆಯುತ್ತಾರೆ. ಅವರೇ ನಮ್ಮ ನಾಯಕರು. ಯಾವುದೇ ಗೊಂದಲ ಬೇಡ. ನಮ್ಮ ಪಕ್ಷ ಕೇಡರ್ ಬೇಸ್ಡ್ ಪಾರ್ಟಿ. ನಾವು ಅಧಿಕಾರಕ್ಕಾಗಿ ಅಂಟಿಕೊಂಡಿಲ್ಲ. ಪಕ್ಷವೇ ಮುಖ್ಯ ಎನ್ನುವುದನ್ನು ಯಡಿಯೂರಪ್ಪ ಹೇಳಿದ್ದಾರೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com