ರೈತ ಸ್ನೇಹಿ, ಅಭಿವೃದ್ಧಿ ಹರಿಕಾರ ಉದಾಸಿ, ಹಾನಗಲ್ ಕ್ಷೇತ್ರದ ಜನತೆ ಪಾಲಿಗೆ ಶಾಶ್ವತ 'ಸಿಎಂ'

ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಾನಗಲ್ ಕ್ಷೇತ್ರದ ಶಾಸಕ ಸಿಎಂ ಉದಾಸಿ (85) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಸಿಎಂ ಉದಾಸಿ
ಸಿಎಂ ಉದಾಸಿ
Updated on

ಹಾವೇರಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಹಾನಗಲ್ ಕ್ಷೇತ್ರದ ಶಾಸಕ ಸಿಎಂ ಉದಾಸಿ (85) ಬೆಂಗಳೂರಿನಲ್ಲಿನಿಧನರಾಗಿದ್ದಾರೆ.

1980 ರ ದಶಕದಿಂದಲೂ ಕಾಂಗ್ರೆಸ್ ವಿರೋಧಿಯಾಗಿದ್ದ ಉದಾಸಿ ಜನತಾ ಪರಿವಾರದ ಮೂಲಕ ತಮ್ಮ ರಾಜಕೀಯ ಜೀವನಕಟ್ಟಿಕೊಂಡರು. ಯಡಿಯೂರಪ್ಪರಿಗೆ ನಿಷ್ಠರಾಗುವ ಮೂಲಕ ತಮ್ಮ ರಾಜಕೀಯ ಭವಿಷ್ಯ ರೂಪಿಸಿಕೊಂಡರು.

ಉದಾಸಿ ಒಬ್ಬ ಯಶಸ್ವಿ ಉದ್ಯಮಿ, ಜಂಟಲ್ ಮ್ಯಾನ್, ಮೃದು ಸ್ವಭಾವದ ಮನುಷ್ಯ, ಆದರೆ ಕಠಿಣ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿ.  ಎಲ್ಲರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ವ್ಯಕ್ತಿ, ಜನತಾದಳ ಮತ್ತು ಬಿಜೆಪಿ ಎರಡರಲ್ಲೂ ರಾಜಕೀಯ ಬಿಕ್ಕಟ್ಟುಗಳ ಸಂದರ್ಭದಲ್ಲಿ ಅವರಿಗೆ ಬೇಡಿಕೆ ಹೆಚ್ಚಿತ್ತು.ಅವರು ರಾಜಕೀಯಕ್ಕೆ ಬಂದಿದ್ದು ಆಕಸ್ಮಿಕವಾಗಿ, ಪುರಸಭೆಯ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ಆಗಿನ ಶಾಸಕರು ಉದಾಸಿ ಅವರನ್ನು ಅವಮಾನಿಸಿದ್ದರು.

1983ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಗೊಂಡು ಮೊದಲ ಬಾರಿಗೆ ಶಾಸಕರಾದರು. ರಾಮಕೃಷ್ಣ ಹೆಗಡೆ ಅವರ ಸರ್ಕಾರದಲ್ಲಿ ಕರ್ನಾಟಕ ರಾಜ್ಯ ಅರಣ್ಯ ನಿಗಮದ ಅಧ್ಯಕ್ಷರಾಗಿ ನೇಮಕಗೊಂಡರು. 1985ರ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ, ಎರಡನೇ ಬಾರಿಗೆ ಶಾಸಕರಾದರು. 1989ರ ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡರೂ 1994ರ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡು ಜನತಾದಳದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದರು.

1999ರ ಚುನಾವಣೆಯಲ್ಲಿ ಸೋಲುಂಡ ಅವರು, ನಂತರ ಬಿಜೆಪಿಗೆ ಸೇರ್ಪಡೆಗೊಂಡು 2004ರ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡರು. 2008ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿ, ಲೋಕೋಪಯೋಗಿ ಸಚಿವರಾಗಿ ಕಾರ್ಯನಿರ್ವಹಿಸಿದರು. 2013ರಲ್ಲಿ ಸೋಲನ್ನು ಅನುಭವಿಸಿದ ಅವರು 2018ರ ವಿಧಾನಸಭಾ ಚುನಾವಣೆಯಲ್ಲಿ ಪುನಃ ಆಯ್ಕೆಗೊಂಡು ಪ್ರಸ್ತುತ
ಶಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಧಾರವಾಡದಿಂದ ಹಾವೇರಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿಸಲು ಪ್ರಮುಖ ಪಾತ್ರ ನಿರ್ವಹಿಸಿದರು.ರಾಜಕೀಯದ ಹೊರತಾಗಿ ಉದಾಸಿ 7 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಿದ್ದರು, ಉರ್ದು ಬರೆಯಲು ಕಲಿತರು. ಇತ್ತೀಚೆಗೆ ಬೈಪಾಸ್ ಶಸ್ತ್ರಚಿಕಿತ್ಸೆಗೊಳಗಾಗಿದ್ದರು.

ಇನ್ನು ಉದಾಸಿ ಜೊತೆ ತಮ್ಮ ಸಂಬಂಧವನ್ನು ಸ್ಮರಿಸಿರುವ ಸಚಿವ ಬಸವರಾಜ ಬೊಮ್ಮಾಯಿ,  ಉದಾಸಿ ಅವರು ಧಾರವಾಡ ಜಿಲ್ಲೆ ಜನತಾದಳ ಘಟಕದ ಅಧ್ಯಕ್ಷರಾಗಿದ್ದ ವೇಳೆ ಅವರ ಜೊತೆ ಕೆಲಸ ಮಾಡಿದ್ದನ್ನು ನೆನಪಿಸಿಕೊಂಡರು, ರಾಜಕೀಯದಲ್ಲಿ ಉದಾಸಿ ನನ್ನ ಗಾಡ್ ಫಾದರ್, ಹಲವು ವಿಷಯಗಳಲ್ಲಿ ನನಗೆ ಮಾರ್ಗದರ್ಶನ ನೀಡಿದ್ದರು. ರಾಜಕಾರಣದಲ್ಲಿ ನಾವು ಒಬ್ಬ ಮಹಾನ್ ಆಡಳಿತಗಾರ ಮತ್ತು ಮುತ್ಸದ್ದಿಯನ್ನು ಕಳೆದುಕೊಂಡಿದ್ದೇವೆ, ಅವರ ಸ್ಥಾನವನ್ನು ಅವರ ಪುತ್ರ ಸಂಸದ ಶಿವಕುಮಾರ್ ಉದಾಸಿ ತುಂಬಲಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಉದಾಸಿಯನ್ನು ರೈತ ಸ್ನೇಹಿ ರಾಜಕಾರಣಿ ಎಂದೂ ಕರೆಯಲಾಗುತ್ತಿತ್ತು, ಏಕೆಂದರೆ ಅವರು 15 ವರ್ಷಗಳ ಕಾಲ ಬೆಳೆ ವಿಮೆಗಾಗಿ ಹೋರಾಡಿದರು. ಅವರು ಬೆಳೆ ವಿಮಾಪಾಲಿಸಿಯನ್ನು ಸಂಪೂರ್ಣವಾಗಿ ತಿಳಿದಿದ್ದರು ಮತ್ತು ಇದರ ಪರಿಣಾಮವಾಗಿ, ಬೆಳೆ ವಿಮೆಯಲ್ಲಿ ಹಾವೇರಿ ಜಿಲ್ಲೆಗೆ ಗರಿಷ್ಠ ಪಾಲು ಪಡೆದರು.

ಕೃಷಿ ಕುಟುಂಬದಿಂದ ಬಂದ ಉದಾಸಿ ರೈತರ ಸಮಸ್ಯೆ ಅರಿತಿದ್ದರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಉದಾಸಿ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com