ಎಂಎಲ್ ಸಿ ಸ್ಥಾನದ ಮೇಲೆ ಗೋಕಾಕ್ ಸಹೋದರರ ಕಣ್ಣು: ಸ್ಥಳೀಯ ಸಂಸ್ಥೆ ಚುನಾವಣೆಗೆ ಲಖನ್ ಜಾರಕಿಹೊಳಿ ಸಿದ್ಧತೆ

ಕುಟುಂಬದಿಂದ ಈಗಾಗಲೇ ಮೂವರು ಶಾಸಕರಿದ್ದರೂ ಜಾರಕಿಹೊಳಿ ಸಹೋದರರು ತಮ್ಮ ಮತ್ತೊಬ್ಬ ಕಿರಿಯ ಸಹೋದರನನ್ನು ಶಾಸಕನಾಗಿಸಲು ಹೊರಟಿದ್ದಾರೆ.
ಲಖನ್ ಜಾರಕಿಹೊಳಿ
ಲಖನ್ ಜಾರಕಿಹೊಳಿ
Updated on

ಬೆಳಗಾವಿ: ಕುಟುಂಬದಿಂದ ಈಗಾಗಲೇ ಮೂವರು ಶಾಸಕರಿದ್ದರೂ ಜಾರಕಿಹೊಳಿ ಸಹೋದರರು ತಮ್ಮ ಮತ್ತೊಬ್ಬ ಕಿರಿಯ ಸಹೋದರನನ್ನು ಶಾಸಕನಾಗಿಸಲು ಹೊರಟಿದ್ದಾರೆ.

2022 ರ ಜನವರಿಯಲ್ಲಿ ನಡೆಯುವ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಲಖನ್ ಜಾರಕಿಹೊಳಿಯನ್ನು ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ.

ಜಾರಕಿಹೊಳಿ ಕುಟುಂಬದ ಮೂವರು ಶಾಸಕರಷ್ಟು ಲಖನ್ ಜನಪ್ರಿಯವಾಗಿಲ್ಲ,  ಹೀಗಾಗಿ ಚುನಾವಣಾ ರಾಜಕಾರಣದ ಮೂಲಕ ಆಯ್ಕೆಯಾಗುವುದು ಕಷ್ಟಕರವಾಗಿದೆ.

ಲಖನ್ ಜಾರಕಿಹೊಳಿ ಬೆಂಬಲ ಕೋರಿ ಬಿಜೆಪಿ ನಾಯಕರು ಗೋಕಾಕ್‌ನಲ್ಲಿ ಅವರನ್ನು ಭೇಟಿಯಾದಾಗಿನಿಂದ, ಜಾರಕಿಹೊಳಿ ಸಹೋದರರು ಕೌನ್ಸಿಲ್ ಚುನಾವಣೆಯಲ್ಲಿ ಬಿಜೆಪಿಯಿಂದ ಅವರನ್ನು ಕಣಕ್ಕಿಳಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಒಂದು ವೇಳೆ ಬಿಜೆಪಿ ಟಿಕೆಟ್ ನಿರಾಕರಿಸಿದರೇ ಸ್ವತಂತ್ರ್ಯವಾಗಿ ಸ್ಪರ್ಧಿಸುವಂತೆ ಹಲವು ನಾಯಕರು ಅವರಿಗೆ ಸಲಹೆ ನೀಡುತ್ತಿದ್ದಾರೆ. ಕೌನ್ಸಿಲ್ ಚುನಾವಣೆ ಜಾರಕಿಹೊಳಿ ಸಹೋದರರಿಗೆ ಹೊಸತಲ್ಲ. ಸದ್ಯ ಶಾಸಕರಾಗಿರುವ ಸತೀಶ್ ಜಾರಕಿಹೊಳಿ  ಈ ಹಿಂದೆ ಎರಡು ಬಾರಿ ಬೆಳಗಾವಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com