17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತ್ತಾಪ ಇಲ್ಲವೇ?

ಬೆಡ್ ಬ್ಲಾಕಿಂಗ್ ಹಗರಣ ಬೆಳಕಿಗೆ ತಂದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹರಿಹಾಯ್ದಿದೆ.
ತೇಜಸ್ವಿ ಸೂರ್ಯ
ತೇಜಸ್ವಿ ಸೂರ್ಯ

ಬೆಂಗಳೂರು: ಬೆಡ್ ಬ್ಲಾಕಿಂಗ್ ಹಗರಣ ಬೆಳಕಿಗೆ ತಂದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹರಿಹಾಯ್ದಿದೆ. 

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್ ತಮ್ಮ ಹಗರಣ ಮುಚ್ಚಿಕೊಳ್ಳಲು ಅಮಾಯಕ ವಾರ್ ರೂಮ್ ಸಿಬ್ಬಂದಿಗಳ ಹೆಸರನ್ನು ಬಳಸಿ ಕೋಮು ಬಣ್ಣ ನೀಡಲು ಮುಂದಾಗಿದ್ದ ಸಂಸದ ತೇಜಸ್ವಿ ಸೂರ್ಯ ಈಗ ಎಲ್ಲಿ ಅಡಗಿದ್ದಾರೆ? ಎಂದು ಪ್ರಶ್ನಿಸಿದೆ.

17 ಸಿಬ್ಬಂದಿಗಳ ಉದ್ಯೋಗ, ಆತ್ಮಗೌರವ, ಮರ್ಯಾದೆಯನ್ನು ಕಿತ್ತುಕೊಂಡ ಎಳೆ ಸಂಸದನಿಗೆ ಪಶ್ಚಾತ್ತಾಪ ಇಲ್ಲವೇ? ಅವರಿಗಾದ ನಷ್ಟಕ್ಕೆ ಪರಿಹಾರ ದೊರಕಿಸಿಕೊಡುವ ಕೆಲಸ ಮಾಡುವರಾ ಈಗ? ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದೆ.

ಕರ್ನಾಟಕ ಬಿಜೆಪಿ ಕೇವಲ ಬೆಡ್ ಬ್ಲಾಕಿಂಗ್ ಒಂದೇ ಅಲ್ಲ, ಆಕ್ಸಿಜನ್ ಬ್ಲಾಕಿಂಗ್, ವ್ಯಾಕ್ಸಿನ್ ಬ್ಲಾಕಿಂಗ್, ರೆಮಿಡಿಸಿವಿರ್ ಬ್ಲಾಕಿಂಗ್‌ ಅನ್ನೂ ನಡೆಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಲಸಿಕೆ ನೀಡುವಿಕೆಯಲ್ಲಿ ಖಾಸಗಿ ಆಸ್ಪತ್ರೆಯೊಂದಿಗೆ ಸೇರಿದ ತೇಜಸ್ವಿ ಸೂರ್ಯ ವ್ಯಾಕ್ಸಿನ್ ಬ್ಲಾಕಿಂಗ್ ದಂಧೆ ನಡೆಸಿದ್ದಾರೆ ಎಂದು ಆರೋಪಿಸಿದೆ.

ಬೆಡ್ ಬ್ಲಾಕಿಂಗ್ ಹಗರಣದ ಬಿಜೆಪಿಯ 'ಮೆಡಿಕಲ್ ಭಯೋತ್ಪಾದನೆ' ಸತೀಶ್ ರೆಡ್ಡಿ ಆಪ್ತನ ಬಂಧನದಿಂದ ಸಾಬೀತಾಗಿದೆ. ತನ್ನ ಬೆಂಬಲಿಗರ ಮೂಲಕ ವಾರ್ ರೂಮ್‌ ಸಿಬ್ಬಂದಿಗಳನ್ನು ಬೆದರಿಸಿ, ನಿಯಂತ್ರಿಸಿ ದಂಧೆ ನಡೆಸುತ್ತಿದ್ದ ಕಿಂಗ್ ಪಿನ್ ಸತೀಶ್ ರೆಡ್ಡಿಯ ಬಂಧನದಿಂದ ಮಾತ್ರ ಪ್ರಕರಣ ಪೂರ್ಣ ಬಯಲಾಗಲು ಸಾಧ್ಯ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com