ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ; ಉಪಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗಳು: ಜೆಡಿಎಸ್ ರಣತಂತ್ರದ ಮರ್ಮವೇನು?

ಅಕ್ಟೋಬರ್ 30 ರಂದು ನಡೆಯುವ ಉಪಚುನಾವಣೆಗಾಗಿ ಜೆಡಿಎಸ್ ತನ್ನ ಕಾರ್ಯತಂತ್ರ ರೂಪಿಸಿದೆ, ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ.
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ
Updated on

ಬೆಂಗಳೂರು: ಅಕ್ಟೋಬರ್ 30 ರಂದು ನಡೆಯುವ ಉಪಚುನಾವಣೆಗಾಗಿ ಜೆಡಿಎಸ್ ತನ್ನ ಕಾರ್ಯತಂತ್ರ ರೂಪಿಸಿದೆ, ಹಾನಗಲ್ ಮತ್ತು ಸಿಂದಗಿ ವಿಧಾನಸಭೆ ಉಪ ಚುನಾವಣೆಗೆ ಮುಸ್ಲಿಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಈ ಮೂಲಕ ಕಾಂಗ್ರೆಸ್ ಜೊತೆಗಿರುವ ಸಾಂಪ್ರಾದಾಯಿಕ ಅಲ್ಪ ಸಂಖ್ಯಾತರ ಮತಗಳನ್ನು ತನ್ನತ್ತ ಸೆಳೆಯುವ ಉಪಾಯ ಮಾಡಿದೆ.

ಜಾತ್ಯಾತೀತತೆಯ ಇಮೇಜ್ ಅನ್ನು ಮರಳಿ ಪಡೆಯುವ ಪ್ರಯತ್ನ ಇದಾಗಿದೆ. ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗಿತ್ತು. ಹೀಗಾಗಿ ಮುಸ್ಲಿಮರನ್ನು ಓಲೈಕೆ ಮಾಡಲು ಮುಂದಾಗಿದೆ ಎನ್ನಲಾಗಿದೆ. ಇದರ ಜೊತೆಗೆ ಬಿಜೆಪಿಗೆ ಅನುಕೂಲ ಮಾಡಿಕೊಡಲು ಜೆಡಿಎಸ್ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಹೀಗಾಗಿ ಇದು ಮುಸ್ಲಿಂ ಮತಗಳ ಮೇಲೆ ಪರಿಣಾಮ ಬೀರಬಹುದು ಎಂಬುದನ್ನು ಅರಿತ ಜೆಡಿಎಸ್ ತನ್ನ ತಪ್ಪನ್ನು ತಿದ್ದಿಕೊಳ್ಳಲು ಮುಂದಾಗಿದೆ.

ಇದರ ಜೊತೆಗೆ ಟ್ವಿಟ್ಟರ್ ನಲ್ಲಿ ಆರ್ ಎಸ್ ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದು ಇದೇ ಕಾರಣಕ್ಕೆ ಎಂಬುದು ಎಲ್ಲರಿಗೂ ತಿಳಿದ ಬಹಿರಂಗ ಸತ್ಯವಾಗಿದೆ.

ಜೆಡಿಎಸ್‌ನ ಇತ್ತೀಚಿನ ಏಳು ದಿನಗಳ ಕಾರ್ಯಾಗಾರವು ಇದಕ್ಕೆ ಹೊರತಾಗಿರಲಿಲ್ಲ, ಏಕೆಂದರೆ ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳು ಮತ್ತು ಎಸ್‌ಸಿ ಸಮುದಾಯದ ಪ್ರತ್ಯೇಕ ಸಭೆಗಳು ಜಾತ್ಯತೀತತೆಯ ಇಮೇಜ್ ಗೆ ಪುಷ್ಠಿ ನೀಡಿದೆ. ಜೆಡಿಎಸ್ ಮುಸ್ಲಿಮರನ್ನು ಬಹಿರಂಗವಾಗಿ ಸಮಾಧಾನಪಡಿಸುತ್ತಿದ್ದರೂ, ಅಕ್ಟೋಬರ್ 30 ರಂದು ನಡೆಯುವ ಉಪಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆಯಿಲ್ಲ,  35,000 ಕ್ಕಿಂತ ಹೆಚ್ಚು ಮುಸ್ಲಿಂ ಮತಗಳ ಮೇಲೆ ಕಣ್ಣಿಟ್ಟಿರುವ ಪಕ್ಷವು ಸಿಂದಗಿಗೆ ನಾಜಿಯಾ ಶಕೀಲ್ ಅಹ್ಮದ್ ಅಂಗಡಿ ಮತ್ತ ಹಾನಗಲ್‌ಗೆ ನಿಯಾಜ್ ಶೇಖ್ ಎಂಬ ಜನಪ್ರಿಯವಲ್ಲದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ.

2021ರ ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಅನುಸರಿಸಿದ ನೀತಿಯನ್ನೇ ಜೆಡಿಎಸ್ ಮತ್ತೆ ಪುನಾರಾವರ್ತಿಸುತ್ತಿದೆ, ಅಲ್ಪಸಂಖ್ಯಾತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ ಕಾಂಗ್ರೆಸ್ ಗೆ ಎದಿರೇಟು ನೀಡಲು ನಿರ್ಧರಿಸಿದೆ, ಈ ಮೂಲಕ ಬಿಜೆಪಿ ಗೆಲುವಿಗೆ ನೆರವಾಗುತ್ತಿದೆ. ನವೆಂಬರ್ 2018 ರ ಲೋಕಸಭಾ ಉಪಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಗೆದ್ದಾಗ ಸಾಂಪ್ರದಾಯಿಕ ಎದುರಾಳಿಗಳು ಯಶಸ್ಸಿನ ರುಚಿ ಕಂಡರು.

ಕಾಂಗ್ರೆಸ್ ನ ವಿ ಎಸ್ ಉಗ್ರಪ್ಪ ಬಳ್ಳಾರಿ ಮತ್ತು ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ ಮಂಡ್ಯ ಲೋಕಸಭೆಯಲ್ಲಿ ಗೆಲುವು ಕಂಡರು. ವಿಧಾನಸಭೆ ಉಪಚುನಾವಣೆಯಲ್ಲೂ ಮೈತ್ರಿ ಕೆಲಸ ಮಾಡಿತು, ಅನಿತಾ ಕುಮಾರಸ್ವಾಮಿ ರಾಮನಗರದಲ್ಲಿ ಜಯಗಳಿಸಿದರು, ಆನಂದ್ ನ್ಯಾಮಗೌಡ ಅವರು ಕಾಂಗ್ರೆಸ್‌ಗಾಗಿ ಜಮಖಂಡಿಯನ್ನು ಉಳಿಸಿಕೊಂಡರು. ಮೈತ್ರಿ ಸರ್ಕಾರದ ಪತನದ ನಂತರ ಈ ಬಾಂಡಿಂಗ್ ಮುಂದುವರಿಯಲಿಲ್ಲ.

ಬೆಳಗಾವಿ, ಕಲಬುರಗಿ ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಇತ್ತೀಚೆಗೆ ನಡೆದ ನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಮ್ ಆದ್ಮಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಇದು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ಪ್ರತಿಷ್ಠೆಯ ವಿಷಯವಾಗಿದೆ, ಹೀಗಾಗಿ ಅವರು ದೊಡ್ಡ ಮೊತ್ತದಲ್ಲಿ ಹಣ ಖರ್ಚು ಮಾಡುತ್ತಾರೆ. ಅವರ ಆಟದಲ್ಲಿ ನಾವು ಪಗಡೆಗಳಾಗಲು ಬಯಸುವುದಿಲ್ಲ, ಎಂದು ಬಿಎಸ್‌ಪಿ ರಾಜ್ಯಾಧ್ಯಕ್ಷ ಡಾ. ಕೃಷ್ಣಮೂರ್ತಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com