
ಬೆಂಗಳೂರು: ಮಹಾತ್ಮ ಗಾಂಧಿ ಅವರು ದೇಶಕ್ಕೆ ಮೊದಲ ಸ್ವತಂತ್ರ ಕೊಟ್ಟರೆ ಜಯಪ್ರಕಾಶ ನಾರಾಯಣ ಮತ್ತೊಂದು ಹಂತದ ಸ್ವತಂತ್ರ ತಂದುಕೊಟ್ಟರು. ಈಗ ಜೆಪಿ ಅವರು ತಂದು ಕೊಟ್ಟ ಮತ್ತೊಂದು ಸ್ವತಂತ್ರ ಕೂಡ ನಶಿಸಿ ಹೋಗುತ್ತಿದೆ ಎಂದು ದೇವೇಗೌಡ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಜೆಪಿ ಭವನದಲ್ಲಿ ನಡೆದ ಜಯಪ್ರಕಾಶ್ ನಾರಾಯಣ ಅವರ 119 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಮಾತನಾಡಿದ ಅವರು ಈಗಿನ ಹಾಗೂ ಆಗ ಇದ್ದ ರಾಜಕೀಯದ ಬಗ್ಗೆ ತುಲನೆ ಮಾಡಿದ್ದೇನೆ. ಗಾಂಧೀಜಿ ಮತ್ತು ಜೆಪಿ ತಂದುಕೊಟ್ಟ ಸ್ವಾತಂತ್ರ್ಯ ನಶಿಸಿಹೋಗುತ್ತಿದೆ ಎಂದು ವಿಷಾದ ವ್ಯಕ್ತ ಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಗುಜರಾತ್ ಗೆ ಆಹ್ವಾನಿಸಿದ್ದರು..ನಾನು ಬಿಜೆಪಿ, ಆರ್‌ಎಸ್‌ಎಸ್‌ಗೆ ಸೇರಿದವನಲ್ಲ. ಆರ್‌ಎಸ್‌ಎಸ್ ಬಗ್ಗೆ ಟೀಕೆ ಮಾಡಲ್ಲ, ನಾನು ಸತ್ಯ ಹೇಳುತ್ತೇನೆ, ತುರ್ತು ಪರಿಸ್ಥಿತಿ ಹೇರಿದ ಸಂಸ್ಥೆಗೆ ಕ್ಷಮೆಯಾಚಿಸುವ ಪತ್ರಗಳನ್ನು ಸಲ್ಲಿಸುವ ಮೂಲಕ ಕೆಲವು ಆರ್‌ಎಸ್‌ಎಸ್ ವ್ಯಕ್ತಿಗಳು ಶರಣಾಗಿದ್ದರು ಎಂಬುದು ಸತ್ಯ ಎಂದಿದ್ದಾರೆ.
1957 ರಲ್ಲಿ ಜಯಪ್ರಕಾಶ ನಾರಾಯಣ ಅವರನ್ನು ಮೊದಲ ಬಾರಿಗೆ ನೋಡಿದೆ. ಆಗ ಅವರು ಸಕ್ರೀಯ ರಾಜಕಾರಣದಲ್ಲಿ ಇದ್ದರು. ವೈ. ವೀರಪ್ಪ ಎಂಬುವರ ಪರವಾಗಿ ಭಾಷಣ ಮಾಡಲು ನಮ್ಮ ಊರಿಗೆ ಬಂದಿದ್ದರು. ಅಧಿಕಾರಕ್ಕೆ ಹಾತೊರೆಯುವ ಈ ವ್ಯವಸ್ಥೆಯಲ್ಲಿ ನಾನು ಜೆಪಿ ಹೆಸರು ಈ ಕಟ್ಟಡಕ್ಕೆ ಇಟ್ಟಿದ್ದೀನಿ. ಇನ್ನು ಮುಂದಾದರು ನಾವೆಲ್ಲ ಯುವ ಪೀಳಿಗೆಗೆ ಜೆಪಿ ಅವರ ನಾಯಕತ್ವದ ಬಗ್ಗೆ ತಿಳಿಸಿ ಅವರ ಹಾದಿಯಲ್ಲಿ ನಡೆಯುವಂತೆ ಕಾರ್ಯಕ್ರಮಗಳನ್ನ ರೂಪಿಸಬೇಕು ಎಂದು ದೇವೇಗೌಡ ತಿಳಿಸಿದರು.
Advertisement