ಬದಲಾವಣೆಯ ಗಾಳಿ ಬೀಸುವ ನಿರೀಕ್ಷೆಯಲ್ಲಿ ಹಾನಗಲ್ ಕ್ಷೇತ್ರದ ಮತದಾರರು: ಕೃಷಿ, ಕೈಗಾರಿಕೆಗಳ ಉತ್ತೇಜನಕ್ಕೆ ಬೇಡಿಕೆ

ಹಾವೇರಿ ಜಿಲ್ಲೆಯ ಅರೆ ಮಲೆನಾಡು ತಾಲ್ಲೂಕು ಹಾನಗಲ್ ಮಲೆನಾಡು ಮತ್ತು ಬಯಲುಸೀಮೆ ಸಂಸ್ಕೃತಿಯನ್ನು ಹಂಚಿಕೊಂಡಿದೆ. ಆದರೆ ರಾಜಕೀಯವಾಗಿ ಬಂದಾಗ ಮತದಾರರು ಈ ಹಿಂದೆ ಜನತಾ ದಳದಿಂದ ಬಿಜೆಪಿಗೆ ಬಂದ ಸಿ ಎಂ ಉದಾಸಿ ಮತ್ತು ಕಾಂಗ್ರೆಸ್ ನ ಮನೋಹರ್ ತಹಶಿಲ್ದಾರ್ ಅವರಿಗೆ ಅಂಟಿಕೊಂಡಿದ್ದರು.
ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ
ಕ್ಷೇತ್ರದ ಮತದಾರರನ್ನು ಉದ್ದೇಶಿಸಿ ಸಿಎಂ ಬಸವರಾಜ ಬೊಮ್ಮಾಯಿ ಭಾಷಣ

ಹಾನಗಲ್: ಹಾವೇರಿ ಜಿಲ್ಲೆಯ ಅರೆ ಮಲೆನಾಡು ತಾಲ್ಲೂಕು ಹಾನಗಲ್ ಮಲೆನಾಡು ಮತ್ತು ಬಯಲುಸೀಮೆ ಸಂಸ್ಕೃತಿಯನ್ನು ಹಂಚಿಕೊಂಡಿದೆ. ಆದರೆ ರಾಜಕೀಯವಾಗಿ ಬಂದಾಗ ಮತದಾರರು ಈ ಹಿಂದೆ ಜನತಾ ದಳದಿಂದ ಬಿಜೆಪಿಗೆ ಬಂದ ಸಿ ಎಂ ಉದಾಸಿ ಮತ್ತು ಕಾಂಗ್ರೆಸ್ ನ ಮನೋಹರ್ ತಹಶಿಲ್ದಾರ್ ಅವರಿಗೆ ಅಂಟಿಕೊಂಡಿದ್ದರು. ಒಂದು ಬಾರಿ ಉದಾಸಿ ಶಾಸಕರಾದರೆ ಮತ್ತೊಮ್ಮೆ ಮನೋಹರ್ ತಹಶಿಲ್ದಾರ್ ಆಗುತ್ತಿದ್ದರು. ಆದರೆ ಈ ಹಿಂದೆ ಸತತ ಎರಡು ಬಾರಿ ಸಿಎಂ ಉದಾಸಿಯವರೇ ಆಯ್ಕೆಯಾಗಿದ್ದರು.

ತಾಲ್ಲೂಕಿನ ಶೇಕಡಾ 80ರಷ್ಟು ಮಂದಿ ಕೃಷಿಕರು ಅಥವಾ ಕೃಷಿ ಕಾರ್ಮಿಕರಾಗಿದ್ದಾರೆ. ಭತ್ತ, ಕಬ್ಬು, ಹತ್ತಿ, ಮೆಕ್ಕೆಜೋಳ, ಮಾವು ಮತ್ತು ತೋಟಗಾರಿಕೆ ಬೆಳೆಗಳು ಇಲ್ಲಿನ ಪ್ರಮುಖ ಬೆಳೆಗಳು. ಅಲ್ಫೊನ್ಸೊ ಮತ್ತು ಕೆಂಪು ಹವಳಗಳು ಇಲ್ಲಿ ವ್ಯಾಪಕವಾಗಿ ಸಿಗುತ್ತಿದ್ದು, ಮಾವಿನ ತಳಿಗಳನ್ನು ಇತರ ಮೆಟ್ರೋ ನಗರಗಳು ಮತ್ತು ವಿದೇಶಗಳಿಗೂ ಇಲ್ಲಿಂದ ರಫ್ತು ಮಾಡಲಾಗುತ್ತದೆ.

ತಾಲ್ಲೂಕಿನಲ್ಲಿ ಎರಡು ಮುಖ್ಯ ನದಿಗಳಾದ ವರದ ಮತ್ತು ಧರ್ಮ ಹರಿಯುತ್ತದೆ. ಆದರೆ ಎರಡು ನದಿಗಳಿದ್ದರೂ ಅಣೆಕಟ್ಟು ಅಥವಾ ಜಲಾಶಯಗಳಿಲ್ಲದಿರುವುದು ವೈರುಧ್ಯ, ನೀರುಣಿಸಲು ನೀರಾವರಿಯಿಲ್ಲ. ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲ್ಲೂಕಿನ ಧರ್ಮ ಜಲಾಶಯ ಕಾಲುವೆ ಮೂಲಕ ತಾಲ್ಲೂಕಿಗೆ ನೀರುಣಿಸುತ್ತದೆ. ಆದರೆ ಮಳೆ ಅಭಾವ ಬಂದರೆ ಅದೂ ಇರುವುದಿಲ್ಲ. ರೈತರು ನೀರಿಗೆ ಮಳೆಯನ್ನು ಮತ್ತು ನದಿ, ಕೆರೆ, ಅಂತರ್ಜಲಗಳನ್ನು ನಂಬಿಕೊಂಡಿರಬೇಕು.

ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ವರದ ನದಿ ಹರಿಯುತ್ತಿದ್ದು ಉತ್ತರ ಭಾಗ ಒಣಭೂಮಿಯಾಗಿದೆ. ಉತ್ತರ ಭಾಗದಲ್ಲಿ ಕೆರೆಗಳನ್ನು ಭರ್ತಿ ಮಾಡಲು ಏತ ನೀರಾವರಿ ಯೋಜನೆಗೆ ದೀರ್ಘಕಾಲದಿಂದ ಬೇಡಿಕೆಯಿದೆ. ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಬಲಂಬಿಡ್ ಮತ್ತು ಹಿರೆಕೌಂಶಿಯಲ್ಲಿ 280 ಕೆರೆಗಳಿಗೆ ನೀರುಣಿಸಲು ಏತ ನೀರಾವರಿ ಯೋಜನೆಗೆ ಅನುಮೋದನೆ ನೀಡಲಾಗಿತ್ತು. ಅದರ ಕೆಲಸ ಮುಗಿದಿದೆ. ಉಪ ಚುನಾವಣೆ ಬಳಿಕ ಉದ್ಘಾಟನೆಗೊಳ್ಳುವ ನಿರೀಕ್ಷೆಯಿದೆ.

ಇನ್ನು ರಸ್ತೆ ಮತ್ತು ಇತರ ಮೂಲಭೂತ ಸೌಕರ್ಯಗಳ ವಿಚಾರಕ್ಕೆ ಬಂದಾಗ ಹಾವೇರಿ ಜಿಲ್ಲೆಯ ಬೇರೆ ತಾಲ್ಲೂಕುಗಳಿಗೆ ಹೋಲಿಸಿದರೆ ಇಲ್ಲಿ ಉತ್ತಮವಾಗಿದೆ. ಸಿಎಂ ಉದಾಸಿಯವರು ಮಂತ್ರಿಯಾಗಿದ್ದ ಸಂದರ್ಭದಲ್ಲಿ ರಸ್ತೆ ಮತ್ತು ಇತರ ಕಾಮಗಾರಿಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಂಡು ತೀರಾ ಇತ್ತೀಚಿನವರೆಗೂ ಮುಂದುವರಿಸಿದ್ದರು.

ಹಾನಗಲ್ ತಾಲ್ಲೂಕಿನ ರೈತ ಸಿದ್ದಪ್ಪ ಕಣವಳ್ಳಿ, ಇಲ್ಲಿ ಹಲವು ರೈತರು ಟನ್ ಗಟ್ಟಲೆ ಮಾವು ಬೆಳೆಯುತ್ತಾರೆ. ಆದರೆ ರೈತರಿಗೆ ಉತ್ತಮ ಬೆಲೆ ಸಿಗುವವರೆಗೆ ಶೈತ್ಯಾಗಾರ ಘಟಕಗಳಲ್ಲಿ ಶೇಖರಣೆ ಮಾಡಿಡಲು ಅವಕಾಶವಿಲ್ಲ. ಇಲ್ಲಿನ ಜನರು ಶೈತ್ಯಾಗಾರ ಘಟಕ ಮತ್ತು ಸಂಸ್ಕರಣಾ ಘಟಕಗಳಿಗೆ ಬೇಡಿಕೆಯಿಡುತ್ತಾರೆ ಎಂದರು.

ಮನೋಜ್ ಕುಮಾರ್ ಎಂಬ ಎಂಜಿನಿಯರ್ ಡಿಪ್ಲೊಮಾ ಪದವೀಧರ, ಜೀವನೋಪಾಯಕ್ಕೆ ಒಂದೋ ಹುಬ್ಬಳ್ಳಿಯಲ್ಲಿ ಸಣ್ಣ ಉದ್ಯೋಗ ನೋಡಿಕೊಳ್ಳಬೇಕು ಇಲ್ಲವೇ ಉದ್ಯೋಗ ಹುಡುಕಿಕೊಂಡು ಬೆಂಗಳೂರು ಇಲ್ಲವೇ ಬೇರೆ ನಗರಗಳಿಗೆ ವಲಸೆ ಹೋಗಬೇಕು. ಕೃಷಿ ಆಧಾರಿತ ಕೈಗಾರಿಕೆಗಳು ಇಲ್ಲಿ ಸ್ಥಾಪನೆಯಾದರೆ ವಿದ್ಯಾವಂತ ಯುವಕರಿಗೆ ಮತ್ತು ರೈತರಿಗೆ ಉತ್ತಮ ಬೆಲೆ ಸಿಗಲು ಅನುಕೂಲವಾಗಬಹುದು ಎನ್ನುತ್ತಾರೆ.

ಉಪ ಚುನಾವಣೆ ಪ್ರಚಾರ ವೇಳೆ ರಾಜಕೀಯ ನಾಯಕರು ಕೃಷಿಗೆ ಉತ್ತಮ ಬೆಂಬಲ ನೀಡುವುದಾಗಿ ಮತ್ತು ಕೈಗಾರಿಕೆಗಳ ಸ್ಥಾಪನೆ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ನಾಯಕತ್ವ ಬದಲಾವಣೆ ಜೊತೆಗೆ ರೈತರ ಭವಿಷ್ಯ ಬದಲಾಗಬಹುದು ಮತ್ತು ಇತರ ಪರಿಸ್ಥಿತಿಗಳು ಕೂಡ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿ ಕ್ಷೇತ್ರದ ಜನರಿದ್ದಾರೆ. 

ಹಾನಗಲ್ ನ ಪಕ್ಕದ ತಾಲ್ಲೂಕು ಶಿಗ್ಗಾಂವ್ ಕ್ಷೇತ್ರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರದ್ದು. ಸಿಎಂ ಅವರಿಗೆ ಇದು ಪ್ರತಿಷ್ಠೆಯ ಕಣವಾದರೂ ಕೂಡ ಇಲ್ಲಿ ಬಿಜೆಪಿ ಮತ್ತು ವಿರೋಧ ಪಕ್ಷಗಳ ನಡುವೆ ನೇರ ಹಣಾಹಣಿಯಿದೆ. 

ಕ್ಷೇತ್ರದಲ್ಲಿ 98 ಸಾವಿರದ 953 ಮಹಿಳೆಯರು ಹಾಗೂ 3 ಇತರರು ಸೇರಿದಂತೆ 2,04,481 ಮತದಾರರಿದ್ದಾರೆ. 2.04 ಲಕ್ಷ ಮತದಾರರಲ್ಲಿ 73,000 ಲಿಂಗಾಯತರು, 28,000 ಎಸ್‌ಸಿಗಳು, 35,000 ಮುಸ್ಲಿಮರು, 25,000 ಗಂಗಾಮತಸ್ಥರು, 10,660 ಮರಾಠಾ, 10,000 ಎಸ್‌ಟಿ ಮತ್ತು ಇತರ ಮತದಾರರಿದ್ದಾರೆ. ಲಿಂಗಾಯತರು, ಮುಸ್ಲಿಮರು ಮತ್ತು ಎಸ್‌ಸಿಗಳು ನಿರ್ಣಾಯಕ ಮತದಾರರಾಗಿದ್ದಾರೆ. 

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಎರಡನೇ ಬಾರಿಗೆ ಹಾನಗಲ್ ಮತದಾರರನ್ನು ಎದುರಿಸುತ್ತಿದ್ದಾರೆ. 2018ರಲ್ಲಿ ಸಿ ಎಂ ಉದಾಸಿ ವಿರುದ್ಧ ಸ್ಪರ್ಧಿಸಿ 5,000 ಮತಗಳಿಂದ ಸೋತಿದ್ದರು. ಬಿಜೆಪಿ ಅಭ್ಯರ್ಥಿ ಶಿವರಾಜ್ ಸಜ್ಜನರ್ ಅವರಿಗೆ ಇದು ಮೊದಲ ಚುನಾವಣೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com