ಹುಬ್ಬಳ್ಳಿ-ಧಾರವಾಡ ನಗರ ಪಾಲಿಕೆ ಚುನಾವಣೆ: ಬಿಜೆಪಿ ಆಡಳಿತ ವಿರೋಧಿ ಅಲೆ ಲಾಭ ಪಡೆಯಲು ಕಾಂಗ್ರೆಸ್ ವಿಫಲ!

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಭಾರೀ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಬಂಡವಾಳವಾಗಿಸಿಕೊಳ್ಳಲು ವಿಫಲವಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧದ ಭಾರೀ ಪ್ರಮಾಣದಲ್ಲಿ ಆಡಳಿತ ವಿರೋಧಿ ಅಲೆಯನ್ನು ಕಾಂಗ್ರೆಸ್ ಬಂಡವಾಳವಾಗಿಸಿಕೊಳ್ಳಲು ವಿಫಲವಾಗಿದೆ.

ಕಾಂಗ್ರೆಸ್ ತನ್ನನ್ನು ಪರ್ಯಾಯ ಪಕ್ಷ ಎಂದು ಬಿಂಬಿಸಿಕೊಳ್ಳುವಲ್ಲಿ ವಿಫಲವಾಗಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ. ಹಿಂದಿನ ಎರಡು ಅವಧಿಗಳಲ್ಲಿ ಎಚ್‌ಡಿಎಂಸಿಯಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ ಕಾರಣ, ಅವಳಿ ನಗರಗಳಲ್ಲಿ ಬಹುಪಾಲು ಶಾಸಕರಿದ್ದ ಕಾರಣ ಪಕ್ಷವು ಅಧಿಕಾರವನ್ನು ಉಳಿಸಿಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅಲ್ಲದೆ, ಕಳೆದ ಎರಡು ವರ್ಷಗಳಿಂದ ಬಿಜೆಪಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದು ಈ ಅಂಶವು ನಾಗರಿಕ ಸಂಸ್ಥೆಯ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಬಹುದು ಎಂದು ಭಾವಿಸಲಾಗಿತ್ತು.

ಬಿಜೆಪಿ ತನ್ನ ಅಧಿಕಾರದ ಅವಧಿಯಲ್ಲಿ ಅವಳಿ ನಗರಗಳನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಿತು, ಆದರೂ ರಸ್ತೆಗಳ ಕೆಟ್ಟ ಸ್ಥಿತಿ, ಅನಿಯಮಿತ ಕುಡಿಯುವ ನೀರು ಪೂರೈಕೆ, ಅಪೂರ್ಣ ನಾಗರಿಕ ಕೆಲಸಗಳು ಮತ್ತಿತರ ಸಮಸ್ಯೆಗಳು ಮತದಾರರನ್ನು ಕೆರಳಿಸಿವೆ. ಈ ಸಂಬಂಧ ಸಾರ್ವಜನಿಕವಾಗಿ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಜನರು ಇದರ ಬಗ್ಗೆ ಧ್ವನಿ ಎತ್ತಿದರು.

ಅಭಿವೃದ್ಧಿಗಾಗಿ ಪರ್ಯಾಯ ವಿಚಾರಗಳನ್ನು ರೂಪಿಸಲು ವಿರೋಧ ಪಕ್ಷಗಳಿಗೆ ಉತ್ತಮ ಅವಕಾಶವನ್ನು ಒದಗಿಸಿತು. ಕಾಂಗ್ರೆಸ್‌ಗೆ ಆಡಳಿತ ವಿರೋಧಿ ಅಲೆ ಬಗ್ಗೆ ಚೆನ್ನಾಗಿ ತಿಳಿದಿದ್ದರೂ, ಅದು ತನ್ನ ಪರವಾಗಿ ಕೆಲಸ ಮಾಡಲು ಸಾರ್ವಜನಿಕ ಕೋಪವನ್ನು ಹೊರಹಾಕಲು ಸಾಕಷ್ಟು ಉತ್ಸಾಹವನ್ನು ತೋರಿಸಲಿಲ್ಲ ಎಂದು ರಾಜಕೀಯ ಪಂಡಿತರು ಅಭಿಪ್ರಾಯ ಪಟ್ಟಿದ್ದಾರೆ.  ಅಭ್ಯರ್ಥಿಗಳ ಆಯ್ಕೆಯಿಂದ ಹಿಡಿದು ಪ್ರಚಾರದವರೆಗೆ. ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಒಗ್ಗಟ್ಟಿನ ಶಕ್ತಿಯಾಗಿ ಎಂದಿಗೂ ಎಂದು ಕೆಲಸ ಮಾಡಲಿಲ್ಲ.

ಬಿಜೆಪಿಯೊಂದಿಗೆ ಅತೃಪ್ತಿ ಹೊಂದಿದ್ದ ಬಹುತೇಕ ಮಧ್ಯಮ ವರ್ಗದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಲಿಲ್ಲ,  33 ವಾರ್ಡ್‌ಗಳಲ್ಲಿ ಗೆದ್ದ ಬಿಜೆಪಿ  ತನ್ನ ಪ್ರಮುಖ ಮತದಾರರಿಗೆ ಧನ್ಯವಾದ ತಿಳಿಸಿದೆ. ಪಕ್ಷದ ಉನ್ನತ ನಾಯಕರು ಪ್ರಚಾರ ಮಾಡಿದರೂ, ಸ್ಥಳೀಯ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಲಿಲ್ಲ ಎಂದು  ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ. ಎಐಎಂಐಎಂ ಮತ್ತು ಅಸಾದುದ್ದೀನ್ ಓವೈಸಿ ಅವರ ಭೇಟಿ ಕೂಡ ಚುನಾವಣೆಯ ಸೋಲಿಗೆ ಕಾರಣವಾಗಿದೆ, ಇದು ಕಾಂಗ್ರೆಸ್‌ಗೆ ಎಚ್ಚರಿಕೆಯಾಗಬೇಕು ಎಂದು ತಿಳಿಸಿದ್ದಾರೆ.

ಅಭ್ಯರ್ಥಿಗಳ ಆಯ್ಕೆಯಲ್ಲಿ ತಪ್ಪುಗಳನ್ನು ಮಾಡಲಾಗಿದೆ ಎಂದು ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ, ಆದರೆ ಅವರು ಬಿಜೆಪಿಯ ವೈಫಲ್ಯಗಳನ್ನು ಎತ್ತಿ ತೋರಿಸಲು ಪಕ್ಷವು ಶ್ರಮಿಸಿಲ್ಲ ಎಂಬ ವಾದವನ್ನು  ತಳ್ಳಿ ಹಾಕಿದ್ದಾರೆ. "ನಾವು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ಇಲ್ಲದಿದ್ದರೆ ಪಕ್ಷವು 33 ವಾರ್ಡ್‌ಗಳನ್ನು ಗೆಲ್ಲುತ್ತಿರಲಿಲ್ಲ" ಎಂದು ಅವರು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com