ಕಲಬುರಗಿ ಪಾಲಿಕೆ ಅಧಿಕಾರಕ್ಕಾಗಿ ಕುದುರೆ ವ್ಯಾಪಾರ: ಕೌನ್ಸಿಲರ್ ಗಳ ಬೆಲೆ 75 ಲಕ್ಷದಿಂದ 1 ಕೋಟಿ ರು.!

ಬುಧವಾರ ಪ್ರತಿ ಸೀಟಿಗೆ 75 ಲಕ್ಷವಿದ್ದ ಬೆಲೆ ಗುರುವಾರ 1 ಕೋಟಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ನಾಲ್ವರು ಜೆಡಿಎಸ್ ಕೌನ್ಸಿಲರ್‌ಗಳು ಬೆಂಗಳೂರಿನ ಬಳಿಯ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ.
ಬಿಜೆಪಿ ಕೌನ್ಸಿಲರ್ ಗಳಿಗೆ ಅಭಿನಂದನಾ ಸಮಾರಂಭ
ಬಿಜೆಪಿ ಕೌನ್ಸಿಲರ್ ಗಳಿಗೆ ಅಭಿನಂದನಾ ಸಮಾರಂಭ

ಬೆಂಗಳೂರು: ಕಲಬುರಗಿ ಮಹಾನಗರ ಪಾಲಿಕೆಯ ಪ್ರಮುಖ ನಾಲ್ಕು ಕೌನ್ಸಿಲರ್ ಗಳ ಬೆಲೆ ಏರಿಕೆಯಾಗುತ್ತಲೇ ಇದೆ.

ಬುಧವಾರ ಪ್ರತಿ ಸೀಟಿಗೆ 75 ಲಕ್ಷವಿದ್ದ ಬೆಲೆ ಗುರುವಾರ 1 ಕೋಟಿಗೆ ಏರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಮಧ್ಯೆ ನಾಲ್ವರು ಜೆಡಿಎಸ್ ಕೌನ್ಸಿಲರ್‌ಗಳು ಬೆಂಗಳೂರಿನ ಬಳಿಯ ಸುರಕ್ಷಿತ ಸ್ಥಳದಲ್ಲಿ ಉಳಿದುಕೊಂಡಿದ್ದಾರೆ.

ನಿರ್ಧಾರವನ್ನು ಕೌನ್ಸಿಲರ್ ಗಳಿಗೆ ಬಿಡಲಾಗಿದೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಕಾನ್ಸಿಲರ್ ಗಳ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಖಚಿತ ಪಡಿಸಿದ್ದಾರೆ. ನಾಲ್ಕು ಮಂದಿ ಜೆಡಿಎಸ್ ಕೌನ್ಸಿಲರ್‌ಗಳಲ್ಲಿ ಇಬ್ಬರು ಮಾಜಿ ಕಾಂಗ್ರೆಸ್ಸಿಗರು, ಒಬ್ಬರು ಮಾಜಿ ಬಿಜೆಪಿ ಕಾರ್ಯಕರ್ತರು, ಮತ್ತು ನಾಲ್ಕನೆಯವರು ಜೆಡಿಎಸ್‌ನವರಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಹಿರಿಯ ಬಿಜೆಪಿ ನಾಯಕರು ಕಲಬುರಗಿ ಪಾಲಿಕೆಯಲ್ಲಿ ತಾವು ಅಧಿಕಾರ ಹಿಡಿಯುವುದಾಗಿ ಹೇಳಿದ್ದಾರೆ, ಮತ್ತೊಂದೆಡೆ ಕಾಂಗ್ರೆಸ್ ತನ್ನ ಪ್ರಯತ್ನ ಮಾಡುತ್ತಲೇ ಇದೆ, ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಜೆಡಿಎಸ್ ನಾಯಕ ಎಚ್.ಡಿ ದೇವೇಗೌಡ ಅವರ ಜೊತೆ ಚರ್ಚಿಸಿದ್ದಾರೆ.

ಕೋಮುವಾದಿ ಶಕ್ತಿಗಳನ್ನು ದೂರವಿಡುವ ಸಲುವಾಗಿ ಕುಮಾರಸ್ವಾಮಿ ಅವರ ಜೊತೆ ಮಾತನಾಡಿದ್ದೇವೆ, ಖರ್ಗೆ ತಮ್ಮ ಜೊತೆ ಮಾತನಾಡಿದ್ದಾಗಿ ಸ್ವತಃ ದೇವೇಗೌಡರೇ ತಿಳಿಸಿದ್ದಾರೆ. ನಾವು ಬಿಜೆಪಿಯೊಂದಿಗೆ ರೇಸ್‌ನಲ್ಲಿಲ್ಲ ಕಾನೂನು ಮೂಲಕ ಅನುಮತಿಸುವ ವಿಧಾನದಲ್ಲಿ ನಾವು ಹೋಗುತ್ತೇವೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕಲಬುರಗಿ ಜಿಲ್ಲೆಗೆ ಉತ್ತಮ ಅಭಿವೃದ್ಧಿ ಮಾಡಲು ನಾವು ಬೆಂಬಲ ಕೇಳುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮೇಯರ್ ಚುನಾವಣೆಗೆ ಇನ್ನೂ ದಿನಾಂಕ ಇನ್ನೂ ಘೋಷಣೆಯಾಗಿಲ್ಲ, ಈಗಾಗಲೇ ಬಿಜೆಪಿ ಕಸರತ್ತು ನಡೆಸುತ್ತಿರುವುದನ್ನು ನೋಡಿ ಆಶ್ಚರ್ಯವಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com