ಕೆಲ ಶಾಸಕರ ಬೆಂಬಲ ಕಾಂಗ್ರೆಸ್ ಗೆ, ಕೆಲವರದ್ದು ಬಿಜೆಪಿಗೆ: ಸಹಮತವಿಲ್ಲದೆ ಜೆಡಿಎಸ್ ಶಾಸಕಾಂಗ ಸಭೆ ಅಂತ್ಯ!

ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್, ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯವಾಗಿದೆ.
ದೇವೇಗೌಡ ಮತ್ತು ಕುಮಾರಸ್ವಾಮಿ
ದೇವೇಗೌಡ ಮತ್ತು ಕುಮಾರಸ್ವಾಮಿ
Updated on

ಬೆಂಗಳೂರು: ಕಲಬುರಗಿ ಪಾಲಿಕೆಯಲ್ಲಿ ಬಿಜೆಪಿ ಅಥವಾ ಕಾಂಗ್ರೆಸ್, ಯಾರಿಗೆ ಬೆಂಬಲ ನೀಡಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ ಅಂತ್ಯವಾಗಿದೆ.

ಕೆಲವು ಶಾಸಕರು ಕಾಂಗ್ರೆಸ್ ಗೆ ಮತ್ತೆ ಕೆಲವರು ಬಿಜೆಪಿಗೆ ಬೆಂಬಲ ನೀಡಬೇಕೆಂದು ಹೇಳಿದರು. ಅಂತಿಮವಾಗಿ ಕಲಬುರಗಿಯಲ್ಲಿ ಯಾರಿಗೆ ಬೆಂಬಲ ನೀಡಬೇಕು ಎಂಬ ಸಹಮತಕ್ಕೆ ಬಾರದೆ ಸಭೆ ಅಂತ್ಯವಾಯಿತು, ಹೀಗಾಗಿ 2023ರ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ಎಚ್ ಡಿ ದೇವೇಗೌಡ ಮತ್ತು ಕುಮಾರಸ್ವಾಮಿ ಅವರೇ ಅಂತಿಮ ನಿರ್ಧಾರ ಕೈಗೊಳ್ಳಲು ಸಭೆ ತೀರ್ಮಾನಿಸಿತು.

ಕಲಬುರಗಿ ಪಾಲಿಕೆಯಲ್ಲಿ ಕಾಂಗ್ರೆಸ್ 27 ಮತ್ತು ಬಿಜೆಪಿ 23 ಕೌನ್ಸಿಲರ್ ಗಳನ್ನು ಹೊಂದಿದೆ. ಹೀಗಾಗಿ ಎರಡು ಪಕ್ಷಗಳು ಜೆಡಿಎಸ್ ಬೆಂಬಲ ಕೋರುತ್ತಿವೆ. ಬಿಜೆಪಿ ನಾಯಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಜೆಡಿಎಸ್ ಕೌನ್ಸಿಲರ್ ಗಳಿಗೆ ತಲಾ 1 ಕೋಟಿ ರು ಆಫರ್ ನೀಡಲಾಗಿದ್ದು, ಕುದುರೆ ವ್ಯಾಪಾರದ ಭಯದಿಂದಾಗಿ ಜೆಡಿಎಸ್ ನ 4 ಕೌನ್ಸಿಲರ್ ಗಳನ್ನು ಸುರಕ್ಷಿತ ಸ್ಥಳದಲ್ಲಿರಿಸಲಾಗಿದೆ.

ಜೆಡಿಎಲ್ ಪಿ ಸಭೆಯಲ್ಲಿ, ಕೋಲಾರದ ಶ್ರೀನಿವಾಸಗೌಡ, ಗುಬ್ಬಿಯ ಶ್ರೀನಿವಾಸ್ ಮತ್ತು ಮೈಸೂರಿನ ಜಿಟಿ ದೇವೇಗೌಡ ಅವರ ಗೈರು ಎದ್ದು ಕಾಣುತ್ತಿತ್ತು.

ಜೆಡಿಎಲ್‌ಪಿ ಜಲಸಂಪನ್ಮೂಲಗಳು ಮತ್ತು ಜನರಿಗೆ ಸಂಬಂಧಿಸಿದ ವಿಷಯಗಳ ಕುರಿತು ಪಾದಯಾತ್ರೆ ನಡೆಸಲು ನಿರ್ಧರಿಸಿದೆ. ಇತರ ವಿವರಗಳನ್ನು ಶೀಘ್ರದಲ್ಲೇ ರೂಪಿಸಲಾಗುವುದು. 2023 ಚುನಾವಣೆಗಳಿಗೆ 130 ಅಭ್ಯರ್ಥಿಗಳ ಹೆಸರನ್ನು ಘೋಷಿಸಲು ಮತ್ತು ಸೆಪ್ಟೆಂಬರ್ 28 ಮತ್ತು 29 ರಂದು ಅಭ್ಯರ್ಥಿಗಳಿಗೆ ಎರಡು ದಿನಗಳ ಓರಿಯಂಟೇಶನ್ ಕ್ಲಾಸ್ ನಡೆಸಲು ಜೆಡಿಎಸ್ ನಿರ್ಧರಿಸಿದೆ. ಅವರು ಮುಂದಿನ ವರ್ಷ ಜನವರಿ ವೇಳೆಗೆ 150 ಹೆಸರುಗಳನ್ನು ಸಿದ್ಧಪಡಿಸಲು ಯೋಜಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com