ದಾವಣಗೆರೆಯಲ್ಲಿ ಬಿಜೆಪಿ ಕಾರ್ಯಕಾರಿಣಿ: ಚುನಾವಣಾ ಕಾರ್ಯಸೂಚಿ ಚರ್ಚೆ, ನಾಲ್ಕು ತಂಡಗಳಿಂದ ರಾಜ್ಯಾದ್ಯಂತ ಪ್ರವಾಸ 

ರಾಜ್ಯಾದ್ಯಂತ ಪಕ್ಷದ ಸಂಘಟನೆ, ಬಲವರ್ಧನೆ, ಸೇವಾ ಹಿ ಸಂಘಟನ, ಸೇವಾ ಸಮರ್ಪಣ ಅಭಿಯಾನ, ನಮೊ ಮೊಬೈಲ್ ಅಪ್ಲಿಕೇಶನ್ ಒಗ್ಗೂಡಿಸುವಿಕೆ ಸೇರಿದಂತೆ ಹಲವು ವಿಷಯಗಳನ್ನು ದಾವಣಗೆರೆಯಲ್ಲಿ ನಿನ್ನೆ ಆರಂಭವಾಗಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಾಯಕರು ಚರ್ಚಿಸಿದರು.
ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ
ದಾವಣಗೆರೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ

ದಾವಣಗೆರೆ: ರಾಜ್ಯಾದ್ಯಂತ ಪಕ್ಷದ ಸಂಘಟನೆ, ಬಲವರ್ಧನೆ, ಸೇವಾ ಹಿ ಸಂಘಟನ, ಸೇವಾ ಸಮರ್ಪಣ ಅಭಿಯಾನ, ನಮೊ ಮೊಬೈಲ್ ಅಪ್ಲಿಕೇಶನ್ ಒಗ್ಗೂಡಿಸುವಿಕೆ ಸೇರಿದಂತೆ ಹಲವು ವಿಷಯಗಳನ್ನು ದಾವಣಗೆರೆಯಲ್ಲಿ ನಿನ್ನೆ ಆರಂಭವಾಗಿರುವ ಎರಡು ದಿನಗಳ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ನಾಯಕರು ಚರ್ಚಿಸಿದರು.

ನಳಿನ್ ಕುಮಾರ್ ಕಟೀಲು ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಸಭೆಯಾಗಿದೆ.

ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳೇನು?:  ಈ ವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷ ಆರಂಭಕ್ಕೆ ನಡೆಯಲಿರುವ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯತ್ ಚುನಾವಣೆಗೆ ಮೊದಲು ನಾಲ್ಕು ತಂಡಗಳಾಗಿ ರಚಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದು.

ನಂಜನಗೂಡು ತಾಲ್ಲೂಕಿನಲ್ಲಿ ದೇವಸ್ಥಾನ ಕೆಡವಿದ ವಿಚಾರ ಕಾರ್ಯಕಾರಿಣಿಯಲ್ಲಿ ಚರ್ಚೆ, ಕಾರ್ಯಕಾರಿಣಿ ಸಭೆಯಲ್ಲಿ ಪಕ್ಷ ಸಂಘಟನೆ ಮತ್ತು ಬಲವರ್ಧನೆಗೆ ವಿಶೇಷ ಒತ್ತು. 

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯ ಸಭೆಯಲ್ಲಿ ಚರ್ಚೆಗೆ ಬಂದಿದೆಯೇ ಎಂದು ಕೇಳಿದಾಗ ಪಕ್ಷದ ವಕ್ತಾರ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಸರ್ಕಾರ ಇಂತಹ ವಿಷಯಗಳನ್ನು ನಿಭಾಯಿಸುತ್ತಿದ್ದು ನಿನ್ನೆಯ ಬಹುತೇಕ ಚರ್ಚೆ ಪಕ್ಷಕ್ಕೆ ಸಂಬಂಧಿಸಿದ್ದಾಗಿತ್ತು ಎಂದಿದ್ದಾರೆ.

ಇನ್ನು ಪಕ್ಷದ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಜಿಲ್ಲಾ ಮತ್ತು ಪ್ರದೇಶವಾರು ಮುಖ್ಯಸ್ಥರ ಜೊತೆ ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಸೆಪ್ಟೆಂಬರ್ 17ರಿಂದ ಅಕ್ಟೋಬರ್ 17ರವರೆಗೆ ಹಮ್ಮಿಕೊಂಡಿರುವ ಸಾರ್ವಜನಿಕ ಸಂಪರ್ಕ ಕಾರ್ಯಕ್ರಮದ ಬಗ್ಗೆ ಸಭೆ ನಡೆಸಿದರು.

ಇಂದಿನ ಸಭೆಯಲ್ಲಿ ಮೊದಲ ಬಾರಿಗೆ ಪಕ್ಷವು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಕಾರ್ಯಕರ್ತರ ಸಂವಾದ ಸಭೆಯನ್ನು ಆಯೋಜಿಸುತ್ತಿದೆ, ಅಲ್ಲಿ 20 ನಿಮಿಷಗಳ ಸಮಯದಲ್ಲಿ ವಿವಿಧ ಸಮಸ್ಯೆಗಳನ್ನು ಚರ್ಚಿಸಲಾಗುವುದು. ಇದರೊಂದಿಗೆ, ಮುಂಬರುವ ಉಪಚುನಾವಣೆಯನ್ನು ಎರಡು ವಿಧಾನಸಭಾ ವಿಭಾಗಗಳಿಗೆ ನಿಭಾಯಿಸುವ ಮಾರ್ಗಗಳು ಮತ್ತು ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳ ಚುನಾವಣೆಗಳ ಕುರಿತು ಚರ್ಚಿಸಲಾಗುವುದು ಎಂದು ಅರುಣ್ ಕುಮಾರ್ ತಿಳಿಸಿದರು.

ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಪದಾಧಿಕಾರಿಗಳ ವೈಯಕ್ತಿಕ ಉಪಸ್ಥಿತಿಯು ಅವರ ಆತ್ಮವಿಶ್ವಾಸವನ್ನು ದೊಡ್ಡ ರೀತಿಯಲ್ಲಿ ಹೆಚ್ಚಿಸುತ್ತದೆ ಎಂದರು. ಕೋವಿಡ್-19 ವಿಷಯಗಳು ಕೂಡ ಚರ್ಚೆಗೆ ಬಂದವು. ಇಂದು ಸಮಾರೋಪದ ದಿನ, ಎರಡು ನಿರ್ಣಯಗಳನ್ನು ಅಂಗೀಕರಿಸಲಾಗುತ್ತದೆ ಮತ್ತು ಹಿಂದಿನ ನಿರ್ಣಯಗಳನ್ನು ಹೇಗೆ ಕಾರ್ಯಗತಗೊಳಿಸಲಾಗಿದೆ ಎಂಬುದರ ಕುರಿತು ಚರ್ಚೆಯನ್ನು ನಡೆಸಲಾಗುವುದು ಎಂದು ಅವರು ಹೇಳಿದರು.

ಈ ಮಧ್ಯೆ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಮ್ಮ ಇತ್ತೀಚಿನ ಮೈಸೂರು ಭೇಟಿಯೊಂದಿಗೆ ರಾಜ್ಯಾದ್ಯಂತ ಪ್ರವಾಸವನ್ನು ಆರಂಭಿಸಿದ್ದಾರೆ. ಯಡಿಯೂರಪ್ಪ ಅವರು ತಮ್ಮ ರಾಜ್ಯ ಪ್ರವಾಸವು ಬಿಜೆಪಿಯನ್ನು ಬಲಪಡಿಸುವ ಗುರಿಯ ಜೊತೆಗೆ 2023 ರಲ್ಲಿ ಸಂಪೂರ್ಣ ಬಹುಮತದೊಂದಿಗೆ ಸರ್ಕಾರ ರಚಿಸುವ ಗುರಿಯನ್ನು ಕೂಡ ಹೊಂದಿದೆ ಎಂದು ಹೇಳಲಾಗುತ್ತಿದೆ.

ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಮತ್ತು ಒಂದು ದೊಡ್ಡ ಶಕ್ತಿಯೊಂದಿಗೆ ಅಧಿಕಾರಕ್ಕೆ ತರಲು ರಾಜ್ಯದಲ್ಲಿ ಪ್ರವಾಸ ಮಾಡುತ್ತೇನೆ, ಮುಂಬರುವ ಚುನಾವಣೆಯಲ್ಲಿ ಬಿಜೆಪಿ 135ರಿಂದ 140 ಸ್ಥಾನ ಗಳಿಸುವುದು ಖಚಿತ ಎಂದು ಯಡಿಯೂರಪ್ಪ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com