ಯಡಿಯೂರಪ್ಪ ಹಾದಿಯಲ್ಲೇ ಬೊಮ್ಮಾಯಿ; ಮುಖ್ಯಮಂತ್ರಿ ಸ್ಟೇಟ್ ಟೂರ್; ಮಾಜಿ ಸಿಎಂ ಪ್ರವಾಸ ದುರ್ಬಲಗೊಳಿಸುವ ಯತ್ನ?

ತಮ್ಮ ಗುರು-ಮಾರ್ಗದರ್ಶನ ಯಡಿಯೂರಪ್ಪ ಅವರ ಹಾದಿಯನ್ನೇ ಅನುಸರಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಯಡಿಯೂರಪ್ಪ ಮತ್ತು ಬಸವರಾಜಬೊಮ್ಮಾಯಿ
ಯಡಿಯೂರಪ್ಪ ಮತ್ತು ಬಸವರಾಜಬೊಮ್ಮಾಯಿ

ಬೆಂಗಳೂರು: ತಮ್ಮ ಗುರು-ಮಾರ್ಗದರ್ಶನ ಯಡಿಯೂರಪ್ಪ ಅವರ ಹಾದಿಯನ್ನೇ ಅನುಸರಿಸಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿಯ ಇಬ್ಬರು ದೊಡ್ಡ ನಾಯಕರು ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುತ್ತಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಹಿರಿಯ ನಾಯಕರುಗಳಾದ ಡಿವಿ ಸದಾನಂದಗೌಡ, ಜಗದೀಶ್ ಶೆಟ್ಟರ್ ಹಾಗೂ ನಳಿನ್ ಕುಮಾರ್ ಕಟಟೀಲ್ ಅವರಿಗೆ ವಿಧಾನಸಭೆ ಚುನಾವಣೆಗೂ ಮುನ್ನ ಪಕ್ಷವನ್ನು ಬಲ ಪಡಿಸುವ ಗುರಿಯನ್ನು ಹೊಂದಿದ್ದಾರೆ, ಬೊಮ್ಮಾಯಿ ಅವರು ಎಲ್ಲಾ ಜಿಲ್ಲೆಗಳ ಆಡಳಿತ ವೈಖರಿ ಬಗ್ಗೆ ಗಮನ ಹರಿಸಲಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕರು ಹೇಳಿದ್ದಾರೆ.

ಈಗಾಗಲೇ ಸಿಎಂ ಬೊಮ್ಮಾಯಿ ಮೈಸೂರು, ಉತ್ತರ ಕನ್ನಡ, ಬೆಳಗಾವಿ ಮತ್ತು ಹಾವೇರಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ. ಅವರ ಪ್ರವಾಸ ಕೇವಲ ಆಡಳಿತಾತ್ಮಕವಾಗಿತ್ತು, ಅದು ರಾಜಕೀಯ ಪ್ರವಾಸವಲ್ಲ, ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಪ್ರವಾಸದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ವಿಧಾನಸಭೆ ಅಧಿವೇಶನದ ನಂತರ ಬೊಮ್ಮಾಯಿ ಮತ್ತು ಯಡಿಯೂರಪ್ಪ ಪ್ರವಾಸ ಆರಂಭಿಸಲಿದ್ದಾರೆ. ಆದರೆ ಯಡಿಯೂರಪ್ಪ ಅವರ ಪ್ರವಾಸ ದುರ್ಬಲಗೊಳ್ಳಲಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಮಾಧ್ಯಮಗಳ ಗಮನ ಸಿಎಂ ಬೊಮ್ಮಾಯಿ ಅವರತ್ತ ಸಹಜವಾಗಿ ಹೋಗುತ್ತದೆ ಎಂಬುದು ನಿತ್ಯ ಸತ್ಯ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಹೇಳಿದ್ದಾರೆ.

ಕೇವಲ ಮೋದಿ ಹೆಸರು ಹೇಳಿಕೊಂಡು ಹೋದರೇ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ, ಮುಂಬರುವ ವಿಧಾನ ಪರಿಷತ್ ನ 25 ಸ್ಥಾನಗಳ ಚುನಾವಣೆಯನ್ನು ಗಮನದಲ್ಲಿರಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಯಡಿಯೂರಪ್ಪ ನವರ ಪ್ರವಾಸ ಆಡಳಿತ ಪಕ್ಷಕ್ಕೆ ಸವಾಲಾಗಿರುವುದರಿಂದ ಬೊಮ್ಮಾಯಿ ಅವರ ಆಡಳಿತ ಸಾಮರ್ಥ್ಯಕ್ಕೆ ಅಗ್ನಿಪರೀಕ್ಷೆಯಾಗಿದೆ. ಯಡಿಯೂರಪ್ಪ ಅವರನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುವ ಯೋಜನೆ ಇದೆ ಎಂದು ಹೇಳಲಾಗುತ್ತಿದೆ, ಆದರೆ ಯಡಿಯೂರಪ್ಪ ಅವರನ್ನು ಪಕ್ಷದಿಂದ ದೂರ ಇಡುವ ಯಾವುದೇ ಪ್ರಯತ್ನಗಳಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com