ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡು ಆಣೆಯಾಗಿದೆ: ಕೆ.ಎಸ್. ಈಶ್ವರಪ್ಪ

ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡು ಆಣೆಯಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

Published: 20th April 2021 01:41 PM  |   Last Updated: 20th April 2021 04:23 PM   |  A+A-


Eshwarappa

ಈಶ್ವರಪ್ಪ

Posted By : Shilpa D
Source : Online Desk

ಶಿವಮೊಗ್ಗ: ವಿಪಕ್ಷ ನಾಯಕ ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡು ಆಣೆಯಾಗಿದೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಬಳಿಕ ಈವರೆಗೆ ಜೀವಂತವಾಗಿದ್ದೇನೆ, ವಿಪಕ್ಷ ನಾಯಕನಾಗಿದ್ದೇನೆಂದು ಸಿದ್ದರಾಮಯ್ಯ ಇಂತಹ ಟೀಕೆ ಮಾಡುತ್ತಾರೆ. ರಸ್ತೆಯಲ್ಲಿ ಹೋಗುವ ಕುಡುಕನ ಮಾತಿನಂತಿದೆ ಸಿದ್ದರಾಮಯ್ಯನವರ ಮಾತು ಎಂದು ಆರೋಪಿಸಿದ್ದಾರೆ.

ವಿಪಕ್ಷಗಳು ಇರುವುದೇ ಟೀಕೆ ಮಾಡುವುದಕ್ಕೆ, ವಿಪಕ್ಷಗಳ ಟೀಕೆ ಸರಿಯಿದ್ದರೆ ನಾವು ತಿದ್ದಿಕೊಳ್ಳುತ್ತೇವೆ. ಎಲ್ಲದಕ್ಕೂ ವಿರೋಧ ಮಾಡಿದರೆ ವಿಪಕ್ಷ ಅಂತಾ ಅವರು ಅಂದುಕೊಂಡಿದ್ದಾರೆ ಎಂದು ಹೇಳಿದ ಸಚಿವರು ಕರ್ನಾಟಕದಲ್ಲಿ ಕೊವಿಡ್ ಪರಿಸ್ಥಿತಿ ಮಿತಿ ಮೀರಿದೆ. ರಾಜ್ಯಪಾಲರೇ ಕೊರೊನಾ ತಡೆಗೆ ಮುಂದಾಗಿದ್ದಾರೆ. ರಾಜ್ಯಪಾಲರು ಮುಂದಾಗಿರುವುದು ಅಚ್ಚರಿ ಅನಿಸುತ್ತಿದೆ. ರಾಜ್ಯಪಾಲರು ಸಭೆ ಕರೆದಿರುವುದು ಒಳ್ಳೆಯದು. ಆದರೆ ಹೊಸ ವ್ಯವಸ್ಥೆ ಆಯಿತೆಂದು ನನಗೆ ಅನಿಸುತ್ತಿದೆ ಎಂದಿದ್ದಾರೆ.


Stay up to date on all the latest ರಾಜಕೀಯ news
Poll
lokasbha

ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವ ಸಂಸದರಿಗೆ ದಂಡ ವಿಧಿಸಬೇಕೇ?


Result
ಹೌದು, ಇವರಿಂದ ಸಮಯ ವ್ಯರ್ಥ
ಬೇಡ, ಅವರು ಪ್ರತಿಭಟಿಸಬೇಕು
flipboard facebook twitter whatsapp