ಘಟಾನುಘಟಿಗಳಿದ್ದರೂ ಬೆಳಗಾವಿಯಲ್ಲಿ 'ಮಕಾಡೆ ಮಲಗಿದ 'ಬಿಜೆಪಿ'!: ಹೆಬ್ಬಾಳ್ಕರ್ ವಿರುದ್ಧ ತಿರುಗಿ ಬಿದ್ದಿದ್ದ 'ಸಾಹುಕಾರ್' ಗೆ ಮುಖಭಂಗ!

ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ  ದ್ವಿಸದಸ್ಯ ವಿಧಾನಪರಿಷತ್  ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಬೆಳಗಾವಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇ  ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ.
ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲಖನ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಲಖನ್ ಜಾರಕಿಹೊಳಿ

ಬೆಳಗಾವಿ:  ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ  ದ್ವಿಸದಸ್ಯ ವಿಧಾನಪರಿಷತ್  ಕ್ಷೇತ್ರದಲ್ಲಿ ಬಿಜೆಪಿಗೆ ಭಾರೀ ಮುಖಭಂಗವಾಗಿದೆ. ಬೆಳಗಾವಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಎರಡನೇ  ಪ್ರಾಶಸ್ತ್ಯದಲ್ಲಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಸೋಲಾಗಿದೆ.

ಬೆಳಗಾವಿಯಲ್ಲಿ ಕಾಂಗ್ರೆಸ್ ನ ಚನ್ನರಾಜ ಹಟ್ಟಿಹೊಳಿ, ಬಿಜೆಪಿಯ ಮಹಾಂತೇಶ್ ಕವಟಗಿ ಮಠ ಮತ್ತು ಸ್ವತಂತ್ರ್ಯ ಅಭ್ಯರ್ಥಿ ಲಖನ್ ಜಾರಕಿಹೊಳಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಎರಡು ಬಾರಿ ಬಿಜೆಪಿಯಿಂದ ಗೆದ್ದಿದ್ದ  ಮಹಾಂತೇಶ್ ಕವಟಗಿ ಮಠ ಹ್ಯಾಟ್ರಿಕ್ ಸಾಧಿಸುವಲ್ಲಿ ವಿಫಲರಾಗಿದ್ದಾರೆ.ಬೆಳಗಾವಿ ಫರಿಷತ್ ಫಲಿತಾಂಶದಿಂದ ರಾಜ್ಯ ರಾಜಕಾರಣದಲ್ಲಿ ಪ್ರಭಾವಿ ಕುಟುಂಬ ಎಂದೇ ಪರಿಗಣಿತವಾಗಿರು ಜಾರಕಿಹೊಳಿ ನಾಲ್ಕನೇ ಸಹೋದರ ಕೂಡ ಶಕ್ತಿ ಸೌಧಕ್ಕೆ ಎಂಟ್ರಿ ಪಡೆದಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ 8,875 ಮತಗಳಲ್ಲಿ 3,715 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರು.  ಲಖನ್ 2,526 ಮತಗಳನ್ನು ಪಡೆದರೆ, ಕವಟಗಿಮಠ 2,454 ಮತಗಳನ್ನು ಪಡೆದಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 18 ಶಾಸಕರ ಪೈಕಿ ಬಿಜೆಪಿ 13 ಶಾಸಕರು ಹಾಗೂ 3 ಸಂಸದರನ್ನು ಹೊಂದಿದ್ದರೂ ಚುನಾವಣೆಯಲ್ಲಿ ಸೋತಿರುವುದು ಬಹುದೊಡ್ಡ ಹಿನ್ನಡೆಯಾಗಿದೆ.  

ಲಖನ್ ಪರ ಸಾಫ್ಟ್ ಕಾರ್ನರ್ ಹೊಂದಿದ್ದ ಬಿಜೆಪಿ ಕಾಂಗ್ರೆಸ್ ಸೋಲಿಸಲು ತಂತ್ರ ಹೆಣೆದಿತ್ತು, ಆದರೆ ಬಿಜೆಪಿ ರಣತಂತ್ರ ಉಲ್ಟಾ ಹೊಡೆದಿದೆ. ಚುನಾವಣೆಗೂ ಮುನ್ನ ಬೆಳಗಾವಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿಯ 13 ಶಾಸಕರನ್ನು ಕರೆದು ಕವಟಗಿ ಮಠ ಪರ ಕೆಲಸ ಮಾಡುವಂತೆ ಕಟ್ಟು ನಿಟ್ಟಾಗಿ ಸೂಚಿಸಿದ್ದರರು.

ರಮೇಶ ಜಾರಕಿಹೊಳಿ ಮತ್ತು ಇತರ ಬಿಜೆಪಿ ಶಾಸಕರು ಲಖನ್‌ಗೆ ಎರಡನೇ ಪ್ರಾಶಸ್ತ್ಯದ ಮತ ನೀಡುವಂತೆ ಬಹಿರಂಗ ಪ್ರಚಾರ ನಡೆಸಿದ್ದರಿಂದ ಬಿಜೆಪಿಯಲ್ಲಿ ಗೊಂದಲ ಉಂಟಾಗಿ, ಲೆಕ್ಕಾಚಾರ ತಪ್ಪಾಯಿತು. ಮತ್ತೊಂದೆಡೆ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕಾಂಗ್ರೆಸ್ ಒಗ್ಗಟ್ಟಾಗಿ ಪ್ರಚಾರ ನಡೆಸಿರುವುದು ವರ್ಕ್ ಔಟ್ ಆಗಿದೆ.

ನಿರೀಕ್ಷಿಸಿದಂತೆ, ನಾವು ಗೆಲುವು ಸಾಧಿಸಿದ್ದೇವೆ ಮತ್ತು ಪಕ್ಷದ ಕಾರ್ಯಕರ್ತರು ಒಟ್ಟಾಗಿ ಶ್ರಮಿಸಿದರು. ಸಿಎಂ ಬೊಮ್ಮಾಯಿ ಬಿಜೆಪಿ ಅಭ್ಯರ್ಥಿಗೆ ಗೆಲುವಿಗಾಗಿ ಪ್ರಯತ್ನಿಸಿದರು ಪ್ರಯೋಜನವಾಗಲಿಲ್ಲ . 2023 ರಲ್ಲಿ ನಾವು ದೊಡ್ಡ ಗೆಲುವಿನೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂದು ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com