ಮೇಧಾವಿ ಪಂಡಿತರೊಬ್ಬರು ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ? ಟಿಎ, ಡಿಎಗಾಗಿ ಹೋಗಲಾ?
ಸದನಕ್ಕೆ ಗೈರಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಿಎ, ಡಿಎ ಪಡೆಯುವುದಕ್ಕೆ ನಾನು ಸದನಕ್ಕೆ ಹೋಗಲಾ? ಎಂದು ಪ್ರಶ್ನಿಸಿದ್ದಾರೆ.
Published: 21st December 2021 09:29 AM | Last Updated: 21st December 2021 12:57 PM | A+A A-

ಎಚ್.ಡಿ ಕುಮಾರಸ್ವಾಮಿ
ಬೆಂಗಳೂರು: ಸದನಕ್ಕೆ ಗೈರಾಗಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಿಎ, ಡಿಎ ಪಡೆಯುವುದಕ್ಕೆ ನಾನು ಸದನಕ್ಕೆ ಹೋಗಲಾ? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ, 5 ದಿನದ ಅಧಿವೇಶನದಲ್ಲಿ ಏನು ಚರ್ಚೆಯಾಗಿದೆ. ಒಂದು ದಿನ ಭೈರತಿ ಬಸವರಾಜ್ ವಿರುದ್ಧ ಪ್ರತಿಭಟನೆ ಮಾಡಿದರು. ಇನ್ನೊಂದು ದಿನ ತಹಶೀಲ್ದಾರರ ವಿರುದ್ಧ ಪ್ರತಿಭಟನೆ ಮಾಡಿದರು. ಅದನ್ನೆಲ್ಲಾ ನೋಡುವುದಕ್ಕೆ ನಾನು ಅಲ್ಲಿಗೆ ಹೋಗಬೇಕಿತ್ತಾ?
ಇನ್ನು ಮೇಧಾವಿ ಪಂಡಿತರೊಬ್ಬರು (ರಮೇಶ್ ಕುಮಾರ್) ಸದನದಲ್ಲಿ ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ನೀಟ್ ಸೀಟು ಹಂಚಿಕೆ: ಸುಪ್ರೀಂಗೆ ಕೂಡಲೇ ಅರ್ಜಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಎಚ್ ಡಿಕೆ ಒತ್ತಾಯ
ಸೆಷನ್ಗೆ ಹೋಗಿ ನಾನು ಏನು ಮಾಡಲಿ? ಟಿಎ-ಡಿಎ ಕ್ಲೈಮ್ ಮಾಡೋಕೆ ಹೋಗಬೇಕು ಅಷ್ಟೇ. ಸದನದಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಎಷ್ಟು ಚರ್ಚೆ ಆಯ್ತು? ಇದರಿಂದ ಏನು ಸಾಧನೆ ಆಯ್ತು. ಸಮಯ ಸಿಕ್ಕರೆ ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆ ಮಾಡುತ್ತೀನಿ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.