ದರ್ಪ- ದಾಷ್ಟ್ಯ ಬಿಟ್ಟ ಆ್ಯಂಗ್ರಿ ಯಂಗ್ ಮ್ಯಾನ್: ರಾಜತಾಂತ್ರಿಕ ಮಾರ್ಗದಲ್ಲಿ ಕನಕಪುರ 'ಬಂಡೆ'; ಡಿಕೆಶಿ 'ಪ್ಯಾನ್ ಕರ್ನಾಟಕ ಲೀಡರ್'!

ಮಾತಿನಲ್ಲೇ ದರ್ಪ ದಾಷ್ಟ್ಯ ತೋರುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬದಲಾಗಿದ್ದಾರೆ.  ತಮ್ಮ ರಾಜತಾಂತ್ರಿಕ ನಿಲುನಿವಿನೊಂದಿಗೆ ತಮ್ಮ ವ್ಯಕ್ತಿತ್ವದಲ್ಲಿ ಪರಿವರ್ತನೆಗೊಂಡಿರುವ ಡಿಕೆಶಿ ಪಕ್ಷದಲ್ಲಿ ತಮ್ಮ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ.
ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

ಬೆಂಗಳೂರು: ಮಾತಿನಲ್ಲೇ ದರ್ಪ ದಾಷ್ಟ್ಯ ತೋರುತ್ತಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬದಲಾಗಿದ್ದಾರೆ.  ತಮ್ಮ ರಾಜತಾಂತ್ರಿಕ ನಿಲುನಿವಿನೊಂದಿಗೆ ತಮ್ಮ ವ್ಯಕ್ತಿತ್ವದಲ್ಲಿ ಪರಿವರ್ತನೆಗೊಂಡಿರುವ ಡಿಕೆಶಿ ಪಕ್ಷದಲ್ಲಿ ತಮ್ಮ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಿದ್ದಾರೆ.

ಕಾಂಗ್ರೆಸ್ ಮುಖಂಡ ಡಿಕೆ ಶಿವಕುಮಾರ್ ಹೊಸ ಇಮೇಜ್ ಕಟ್ಟಿಕೊಂಡಿದ್ದು, ಪಕ್ಷದೊಳಗಿನ ನಾಯಕರ ಜೊತೆಗೆ ಸಂಬಂಧವನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಹಿರಿಯ ನಾಯಕ ಎಂ ಬಿ ಪಾಟೀಲ್ ಅವರೊಂದಿಗಿರುವ ಫೋಟೋಗಳನ್ನು ಟ್ವಿಟರ್‌ನಲ್ಲಿ ಶಿವಕುಮಾರ್ ಹಂಚಿಕೊಂಡಿದ್ದರು,  ಈ ಫೋಟೋ ಇಮೇಜ್ ಮೇಕ್ ಓವರ್‌ಗೆ ಸಾಕ್ಷಿಯಾಗಿದೆ.

ಡಿಕೆ ಶಿವಕುಮಾರ್ ಉತ್ತರ ಕರ್ನಾಟಕದ ಕಾಂಗ್ರೆಸ್ ನಾಯಕರನ್ನು ಅದರಲ್ಲೂ ವಿಶೇಷವಾಗಿ ಮಾಜಿ ಸಚಿವ ಎಂಬಿ ಪಾಟೀಲ್ ಅವರಿಗೆ ಹತ್ತಿರವಾಗಲು ಬೆಳಗಾವಿ ಅಧಿವೇಶನವನ್ನು ಬಳಸಿಕೊಂಡಿದ್ದಾರೆ,   ಡಿಕೆ ಶಿವಕುಮಾರ್ ಮತ್ತು ಎಂಬಿ ಪಾಟೀಲ್ ನಡುವಿನ ಬಾಂಧವ್ಯದ ಪಕ್ಷದ ಕಾರ್ಯಕರ್ತರಿಗೆ ಸಮಾಧಾನ ತಂದಿದೆ. ಶಿವಕುಮಾರ್  ಪ್ಯಾನ್-ಕರ್ನಾಟಕ ನಾಯಕರಾಗಿ ಬೇರೂರಲು ಪ್ರಜ್ಞಾಪೂರ್ವಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅಭಿಪ್ರಾಯ ಪಟ್ಟಿದ್ದಾರೆ.

ಇದರ ಜೊತೆಜೊತೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜೊತೆಗಿನ ಶೀತಲ ಸಮರಕ್ಕೆ ತೆರೆ ಎಳೆಯಲು ಬಯಸಿರುವ ಡಿಕೆಶಿ ಉತ್ತಮ ಭಾಂದವ್ಯ  ಹೊಂದಲು ಮುಂದಾಗಿದ್ದಾರೆ, ಪ್ರಮುಖ ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಮೊದಲು ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿ ಸಲಹೆ ಪಡೆಯುತ್ತಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ತಿಳಿಸಿದ್ದಾರೆ.

ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರೊಂದಿಗಿನ ಸಂಬಂಧ, ಸಿದ್ದರಾಮಯ್ಯ ಅವರ ನಿಕಟವರ್ತಿ, ಎಂಎಲ್‌ಸಿ ಸಿಎಂ ಇಬ್ರಾಹಿಂ ಅವರ ಮನೆಗೆ ಭೇಟಿ, ಕೆಪಿಸಿಸಿ ಕಾರ್ಯನಿರತ ನಿವಾಸಿ ಸತೀಶ್ ಜಾರಕಿಹೊಳಿ ಅವರೊಂದಿಗೆ ಉತ್ತಮ ಸಂಬಂಧದ ಪ್ರಯತ್ನಗಳು ಸಹ ಬದಲಾವಣೆಯ ಸಂಕೇತಗಳಾಗಿವೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಆ್ಯಂಗ್ರಿ ಯಂಗ್ ಮ್ಯಾನ್ ಲುಕ್ ಕಣ್ಮರೆಯಾಗಿದೆ, ಅವರ ಮಾತಿನ ಕಠಿಣತೆ ಕಡಿಮೆಯಾಗಿದ್ದು ರಾಜ್ಯ ರಾಜಕಾರಣದಲ್ಲಿ ಎಚ್ಚರಿಕೆಯ ಹೆಜ್ಜೆ ಇಡುತ್ತಿದ್ದಾರೆ ಎಂದು  ರಾಜಕೀಯ ತಜ್ಞ ಹರೀಶ್ ಬಿಜೂರು ಅಭಿಪ್ರಾಯ ಪಟ್ಟಿದ್ದಾರೆ.

ಪ್ರತಿ ಕೆಲಸದಲ್ಲಿ ಆಲೋಚನೆ ಮಾಡಿ ಮುಂದಡಿ ಇಡುತ್ತಿರುವ ಡಿಕೆ ಶಿವಕುಮಾರ್ ಪ್ರತಿ ವಯೋಮಾನದ ಕಾಂಗ್ರೆಸ್ ನಾಯಕರ ಜೊತೆ ಒಟ್ಟಾಗಿ ಕೆಲಸ ಮಾಡುವ ಮನಸ್ಥಿಯಲ್ಲಿದ್ದಾರೆ, ಡಿಕೆಶಿ ಅವರ ಈ ನಿರ್ಧಾರ ಸಮಯೋಚಿತವಾಗಿದೆ, ಏಕೆಂದರೇ ಕರ್ನಾಟಕ ಕಾಂಗ್ರೆಸ್ ನ ಮುಂದಿನ ಪ್ರಶ್ನಾತೀತ ನಾಯಕರಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com