ಶಿವಮೊಗ್ಗ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲು ಪಟ್ಟಿ ಪ್ರಕಟ: ಕಾಂಗ್ರೆಸ್, ಬಿಜೆಪಿ ಅಸಮಾಧಾನ

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲು ಕ್ಷೇತ್ರಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಈ ಪಟ್ಟಿಯನ್ನು ನೋಡಿದ ಕಾಂಗ್ರೆಸ್‌ ನಾಯಕರು ಸಿಡಿಮಿಡಿಗೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಶಿವಮೊಗ್ಗ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗೆ ಮೀಸಲು ಕ್ಷೇತ್ರಗಳ ಪಟ್ಟಿಯನ್ನು ಸರ್ಕಾರ ಬಿಡುಗಡೆಗೊಳಿಸಿದೆ. ಈ ಪಟ್ಟಿಯನ್ನು ನೋಡಿದ ಕಾಂಗ್ರೆಸ್‌ ನಾಯಕರು ಸಿಡಿಮಿಡಿಗೊಂಡಿದ್ದಾರೆ. 

ಜಿಲ್ಲೆಯ 35 ಜಿಲ್ಲಾ ಪಂಚಾಯತ್ ಸ್ಥಾನಗಳು ಮತ್ತು ಏಳು ತಾಲೂಕು ಪಂಚಾಯಿತಿಗಳಿಗೆ ಮೀಸಲಾತಿ ನೀಡಿರುವುದನ್ನು ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿಯಮಾವಳಿಗಳ ಪರಿಪಾಲನೆಯಲ್ಲಿ ಲೋಪವಾದರೆ ಯಾರೇ ಆದರೂ ಆಕ್ಷೇಪಣೆ ಸಲ್ಲಿಸಬಹುದು. ಇದಕ್ಕೆ ಮೊದಲ ಆಕ್ಷೇಪಣೆಯಂತೆ ಕಾಂಗ್ರೆಸ್‌ ಪರಿಶಿಷ್ಟ ಜಾತಿ ಜಿಲ್ಲಾ ವಿಭಾಗದ ಅಧ್ಯಕ್ಷೆ ಪಲ್ಲವಿ. ಜಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಶಿವಮೊಗ್ಗ ಗ್ರಾಮಾಂತರ ವಿಧಾನ ಕ್ಷೇತ್ರವೇ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿದೆ. ಆದರೆ ಇಲ್ಲಿನ ಏಳು ಜಿಲ್ಲಾ ಪಂಚಾಯಿತಿ ಸ್ಥಾನಗಳಲ್ಲಿ ಒಂದರಲ್ಲೂ ಸಹ ಪರಿಶಿಷ್ಟ ಜಾತಿಗೆ ಮೀಸಲು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಶಿವಮೊಗ್ಗ ಜಿಲ್ಲಾಧಿಕಾರಿಗಳ
ಮುಖಾಂತರ ರಾಜ್ಯ ಚುನಾವಣಾ ಆಯೋಗದ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪಲ್ಲವಿ, ಚುನಾವಣಾ ಆಯೋಗದಿಂದ ಶಿವಮೊಗ್ಗ ಜಿಲ್ಲೆಗೆ ಅನುಗುಣವಾಗಿ ಮೀಸಲು ಕರಡು ಪಟ್ಟಿಯನ್ನ ಪ್ರಕಟಿಸಲಾಗಿದೆ. ಈ ಪ್ರಕಟಣೆಯಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಏಳೂ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಒಂದು ಎಸ್‌ಸಿ ಮೀಸಲು ಇಲ್ಲ ಎಂದು ಅಸಮಾಧಾನಪಟ್ಟರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರವೇ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರವಾಗಿದೆ. ಅಧಿಕ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಜನರು ಇಲ್ಲಿದ್ದರೂ ಸಹ ಜಿಲ್ಲಾ ಪಂಚಾಯಿತಿ ಮೀಸಲಲ್ಲಿ ಎಸ್‌ಸಿಗೆ ಸ್ಥಾನ ಇಲ್ಲ. ಈ ಮೂಲಕ ಸರ್ಕಾರ ಹಾಗೂ ಚುನಾವಣಾ ಆಯೋಗ ಪರಿಶಿಷ್ಟ ಜಾತಿಯನ್ನ ಕಡೆಗಣಿಸಿದೆ ಎಂದು ಎಸ್ ಸಿ ಎಸ್ ಟಿ ಒಕ್ಕೂಟದ ಮುಖಂಡ ವೀರಭದ್ರಪ್ಪ ಪೂಜಾರ್ ತಿಳಿಸಿದ್ದಾರೆ.

ಜಿಲ್ಲಾ ಮತ್ತು ತಾಲ್ಲೂಕು ಬಿಜೆಪಿ ನಾಯಕರು ಈ ಸ್ಥಾನಗಳ ಮೀಸಲಾತಿಯನ್ನು “ಅವೈಜ್ಞಾನಿಕ” ಎಂದು ಹೇಳಿದ್ದಾರೆ. ಬಿಜೆಪಿಯ ಹಿರಿಯ ಮುಖಂಡರೊಬ್ಬರು ಚುನಾವಣಾ ಆಯೋಗವು ಮೀಸಲಾತಿ ಘೋಷಿಸುವ ಮೊದಲು ಜಿಲ್ಲಾ ಚುನಾವಣಾ ಕಚೇರಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಎಂಎಲ್ ಸಿ ಅಯನೂರ್ ಮಂಜುನಾಥ್  ಪುತ್ರ ಸಂತೋಷ್, ಮಾಜಿ ಎಂಎಲ್ಸಿ ಎಂ ಬಿ ಭಾನುಪ್ರಕಾಶ್  ಪುತ್ರ ಹರಿರಿಕೃಷ್ಣ, ಮಾಜಿ ಶಾಸಕ ಮತ್ತು ಕಾಂಗ್ರೆಸ್ ವಕ್ತಾರ ಬೇಲೂರು ಗೋಪಾಲಕೃಷ್ಣ ಪತ್ನಿ, ಡಾ. ರಾಜಾನಂದಿನಿ, ಹಿರಿಯ ಕಾಂಗ್ರೆಸ್ ಮುಖಂಡ ಕಾಗೋಡು ತಿಮ್ಮಪ್ಪ ಪುತ್ರಿ ಮತ್ತು ಅನೇಕ ಮಾಜಿ ತಾಲೂಕು ಪಂಚಾಯತ್ ನಾಯಕರು ಮೀಸಲಾತಿ ಪಟ್ಟಿಯಿಂದ ಸ್ಪರ್ಧಿಸಲು ಮುಂದಾಗಿದ್ದರು ಎಂದು ಮೂಲಗಳು ತಿಳಿಸಿವೆ. ಎರಡನೇ ಹಂತದ ಹಲವು ನಾಯಕರು ಸಹ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ, ಇದಕ್ಕಾಗಿ ಅವರು
ಈಗಾಗಲೇ ತಮ್ಮ ಪಕ್ಷದ ಪ್ರಭಾವಿ ನಾಯಕರೊಂದಿಗೆ ಲಾಬಿ ಮಾಡಲು ಪ್ರಾರಂಭಿಸಿದ್ದಾರೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com