ವಿಧಾನ ಪರಿಷತ್ ಚುನಾವಣೆ: ಮೇಲ್ಮನೆಯಲ್ಲಿ ಸಿಂಹಪಾಲು ಪಡೆಯಲು ಬಿಜೆಪಿ ಕಸರತ್ತು!

ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಇನ್ನೂ ಐದು ತಿಂಗಳ ಸಮಯಾವಕಾಶವಿದೆ. ಒಂದು ವೇಳೆ ಬಿಜೆಪಿ ತನ್ನ ಗೆಲುವಿನ ಹಾದಿಯನ್ನು ಮುಂದುವರಿಸಿದರೇ ಮೇಲ್ಮನೆ ಬಣ್ಣ ಬದಲಾಯಿಸಬಹುದು.
ವಿಧಾನ ಪರಿಷತ್
ವಿಧಾನ ಪರಿಷತ್

ಬೆಂಗಳೂರು: ವಿಧಾನ ಪರಿಷತ್ತಿನ 25 ಸ್ಥಾನಗಳ ಚುನಾವಣೆಗೆ ಇನ್ನೂ ಐದು ತಿಂಗಳ ಸಮಯಾವಕಾಶವಿದೆ. ಒಂದು ವೇಳೆ ಬಿಜೆಪಿ ತನ್ನ ಗೆಲುವಿನ ಹಾದಿಯನ್ನು ಮುಂದುವರಿಸಿದರೇ ಮೇಲ್ಮನೆ ಬಣ್ಣ ಬದಲಾಯಿಸಬಹುದು. ಕಾಂಗ್ರೆಸ್ ನ 4,  ಬಿಜೆಪಿಯ 6 ಮತ್ತು ಜೆಡಿಎಸ್ ನ ಒಂದು ವಿವೇಕ್ ರಾವ್ ಪಾಟೀಲ್ ಸ್ವತಂತ್ರ್ಯ ಸದಸ್ಯರಾಗಿದ್ದಾರೆ.

ಮೇಲ್ಮನೆಯಲ್ಲಿ ಒಟ್ಟು  75 ಸದಸ್ಯರಿದ್ದು, ಬಿಜೆಪಿ 32, ಕಾಂಗ್ರೆಸ್ 29 ಮತ್ತು ಜೆಡಿಎಸ್ ನ 12 ಸದಸ್ಯರಿದ್ದು ಮತ್ತು ಓರ್ವ ಸ್ವತಂತ್ರ್ಯ ಎಂಎಲ್ ಸಿ ಇದ್ದಾರೆ. ಕಾಂಗ್ರೆಸ್ ತನ್ನ ಸ್ಥಾನ ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ, ಸಹಜವಾಗಿಯೇ ಆಡಳಿತಾರೂಡ ಪಕ್ಷದ ಪರವಾಗಿಯೇ ಚುನಾವಣಾ ಫಲಿತಾಂಶವಿರುತ್ತದೆ.

ನಾವು ಚುನಾವಣೆಗೆ ತಯಾರಿ ಆರಂಭಿಸಿದ್ದೇವೆ.  ಗ್ರಾಮ ಪಂಚಾಯಿತಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಸದಸ್ಯರು ಮತದಾರರಾಗಿರುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ.

ಇತ್ತೀಚೆಗೆ ನಡೆದ 10 ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಏಳರಲ್ಲಿ ನಾವು ಉತ್ತಮ ಸಾಧನೆ ಮಾಡಿದ್ದೇವೆ ಎಂದು ಪರಿಗಣಿಸಿ, ಕೌನ್ಸಿಲ್ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.

ಮತ್ತೊಂದೆಡೆ, ಬಿಜೆಪಿ ಈಗಿನ 32 ಸ್ಥಾನಗಳಿಂದ ತನ್ನ ಪ್ರಮಾಣವನ್ನು ಹೆಚ್ಚಿಸುವ ಆಶಯವನ್ನು ಹೊಂದಿದೆ. ಮತ್ತು ಸದನದಲ್ಲಿ ಸರಳ ಬಹುಮತಕ್ಕಾಗಿ 38 ಸ್ಥಾನಗಳ ನಿರ್ಣಾಯಕ ಅರ್ಧದಾರಿಯ ದಾಟಿದೆ. ಪಕ್ಷವು ಇದನ್ನು ನಿರ್ವಹಿಸಿದರೆ, ಮೇಲ್ಮನೆಯಲ್ಲಿ  ಇದೇ ಮೊದಲು ಬಹುಮತ ಪಡೆಯಲಿದೆ.

ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸೇರಿದಂತೆ ಬಿಜೆಪಿಯ ಆರು ಸದಸ್ಯರು ನಿವೃತ್ತರಾಗಲಿದ್ದಾರೆ. ಮಹಾಂತೇಶ್ ಕವಟಗಿ ಮಠ, ಪ್ರದೀಪ್ ಶೆಟ್ಟರ್, ಸುನಿಲ್ ಸುಬ್ರಮಣಿ, ಎಂ.ಕೆ ಪ್ರಾಣೇಶ್, ಬಿಜಿ ಪಾಟೀಲ್, ಬಿಜೆಪಿ ವಕ್ತಾರ ಗಣೇಶ್ ಕಾರ್ಣಿಕ್  ಗೆಲ್ಲುವ ವಿಶ್ವಾಸದಲ್ಲಿದ್ದಾರೆ.

ಸದನದ ಬಲಾಲದ ಅರ್ಧದಷ್ಟು ಸಂಖ್ಯೆ ತಲುಪಿದರೇ ಬಿಜೆಪಿಗೆ ತನ್ನ ಮಸೂದೆಗಳನ್ನು ಪಾಸು ಮಾಡಿಕೊಳ್ಳಲು ಜೆಡಿಎಸ್ ನ ಬೆಂಬಲದ ಅಗತ್ಯವಿರುವುದಿಲ್ಲ.

ಜೆಡಿಎಸ್ ನ 12 ಸದಸ್ಯರಿದ್ದು,  ಮೇಲ್ಮನೆಯಲ್ಲಿ ಮಸೂದೆ ಪಾಸು ಮಾಡುವ ಉದ್ದೇಶದಿಂದ ಜೆಡಿಎಸ್ ನ ಬಸವರಾಜ ಹೊರಟ್ಟಿ ಅವರನ್ನು ಪರಿಷತ್ ನ ಸಭಾಪತಿಯನ್ನಾಗಿ ಮಾಡುವ ಮೂಲಕ ಬಿಜೆಪಿ ಒಪ್ಪಂದ ಮಾಡಿಕೊಂಡಿದೆ.

ಅಪ್ಪಾಜಿ ಗೌಡ, ಸಿ ಆರ್ ಮನೋಹರ್, ಸುನಿಲ್‌ಗೌಡ ಬಿ ಪಾಟೀಲ್ ಮತ್ತು ಸಂದೇಶ್ ನಾಗರಾಜ್ ಅವರಿಗೆ ಮತ್ತೆ ಸ್ಪರ್ಧಿಸಲು ಅವಕಾಶ ಕಲ್ಪಿಸಿರುವುದರಿಂದ ಜೆಡಿಎಸ್ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಉಳಿಸಿಕೊಳ್ಳುವ ವಿಶ್ವಾಸ ಹೊಂದಿದೆ. ವಿಧಾನಸಭಾ ಚುನಾವಣೆಯಲ್ಲಿ ಸೋತ ಅನೇಕ ನಾಯಕರು ಪರಿಷತ್ತಿನಲ್ಲಿ ಪ್ರವೇಶಿಸಲು ಉತ್ಸುಕರಾಗಿರುವುದರಿಂದ 25 ಸ್ಥಾನಗಳಿಗೆ ಪಕ್ಷಗಳೊಳಗೆ ಲಾಬಿ ಪ್ರಾರಂಭವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com