

ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನವದೆಹಲಿಯಿಂದ ಹಿಂದಿರುಗಿದ ಒಂದು ದಿನದ ನಂತರ, ಸ್ಪಷ್ಟತೆಯ ಕೊರತೆ ಬಿಜೆಪಿಯ ಕಾರ್ಯಕರ್ತರು ಮತ್ತು ಶಾಸಕರಿಗೆ ಕಾಡುತ್ತಿದೆ. ಪಕ್ಷದ ಕೇಂದ್ರ ನಾಯಕತ್ವ- ಕರ್ನಾಟಕದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸೇರಿದಂತೆ- ಯಡಿಯೂರಪ್ಪ ಅವರ ರಾಜೀನಾಮೆ ಸನ್ನಿಹಿತ ಎನ್ನುವ ಬಗ್ಗೆ ಊಹಾಪೋಹಗಳನ್ನು ನಿರಾಕರಿಸಲು ಒಪ್ಪುತ್ತಿಲ್ಲವಾದ ಕಾರಣ, 78 ವರ್ಷದ ಮುಖ್ಯಮಂತ್ರಿಯ ಬೆಂಬಲಿಗರು ತಾವು ಕಡಿಮೆ ಮಾತನಾಡಲು ನಿರ್ಧರಿಸಿದ್ದಾರೆ ಅಲ್ಲದೆ ಎಚ್ಚರಿಕೆಯಿಂದ ನಡೆಯನ್ನಿಡಲು ತೀರ್ಮಾನಿಸಿದ್ದಾರೆ.ಬಸನಗೌಡ ಪಾಟೀಲ್ ಯತ್ನಾಳ್ ಅವರಂತಹ ಭಿನ್ನ ಧ್ವನಿಯ ನಾಯಕರು ಸಿಎಂ ಮತ್ತು ಅವರ ಕುಟುಂಬದ ಕುರಿತು ಒಂದು ಮಾತನಾಡಲು ಸಿಕ್ಕ ಅವಕಾಶ ಬಿಡದವರೂ ಮೌನಕ್ಕೆ ಜಾರಿದ್ದಾರೆ.
ಯಡಿಯೂರಪ್ಪ ಅವರ ಪಾಳಯದಲ್ಲಿಯೂ ಆತ್ಮವಿಶ್ವಾಸ ಕ್ಷೀಣಿಸುತ್ತಿದೆ. ಹೊಡಿಯಲ್ಲಿ ಶಾಸಕ ಮತ್ತು ಅವರ ರಾಜಕೀಯ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯರಂತಹ ಬೆಂಬಲಿಗರು ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವ ಬಗ್ಗೆ ಬಾಹ್ಯದಲ್ಲಿ ವಿಶ್ವಾಸ ವ್ಯಕ್ತಪಡಿಸುತ್ತಿದ್ದರೆ, ಅಂತರಂಗದಲ್ಲಿ ಅನುಮಾನಗೊಂಡಿದ್ದಾರೆ. "ನಿರ್ಗಮನ ಯೋಜನೆಯನ್ನು ಈಗಾಗಲೇ ತೀರ್ಮಾನಿಸಲಾಗಿದೆ. ಇದು ಸಮಯದ ವಿಷಯವಲ್ಲ. ಅವರು (ಯಡಿಯೂರಪ್ಪ) ಅವರು ಎರಡು ವರ್ಷಗಳ ಅಧಿಕಾರವನ್ನು ಪೂರೈಸಿದ ದಿನದಲ್ಲಿ ಅಧಿಕೃತವಾಗಲಿದೆಯೆ, ಅದಕ್ಕಿಂತ ಮುಂಚೆಯೇ ಅಥವಾ ಆಗಸ್ಟ್ ನಲ್ಲಿಯೆ ಎನ್ನುವುದು ಅವರ ಯ್ಕೆಯಾಗಿದೆ” ಎಂದು ಬಿಜೆಪಿಯ ಹಿರಿಯ ಮುಖಂಡರೊಬ್ಬರು ಹೇಳಿದರು.
ಪಕ್ಷದ ಹಿರಿಯ ಕಾರ್ಯಕಾರಿಣಿ-ಕಿರಿಯ ಶಾಸಕರು ವಿವರಿಸಿದಂತೆ, ಕಾರ್ಯಕರ್ತರು ಮತ್ತು ನಾಯಕರು ಗೊಂದಲಕ್ಕೊಳಗಾಗಿದ್ದಾರೆ. “ಯಡಿಯೂರಪ್ಪ ಅವರ ನಿಲುವಿನಿಂದಾಗಿ ಪ್ರಾದೇಶಿಕ, ಜಾತಿ, ಸಮುದಾಯ ಪ್ರಾತಿನಿಧ್ಯ ಸಮತೋಲನದ ಅಂತರವನ್ನು ತುಂಬಲು ಸಾಧ್ಯವಾಯಿತು. ಬೇರೆ ಯಾರಾದರೂ ಅದನ್ನು ಮಾಡಲು ಸಮರ್ಥರಾಗಿದ್ದಾರೆಂದು ಊಹಿಸುವುದು ಕಷ್ಯ
ಹೈಕಮಾಂಡ್ ಏನು ನಿರ್ಧರಿಸುತ್ತದೆ ಎಂಬುದಕ್ಕೆ ನಾವು ಬದ್ಧರಾಗಿದ್ದೇವೆ... ಆದರೆ ಸ್ಪಷ್ಟತೆಯ ಕೊರತೆಯು ಕಾರ್ಯಕರ್ತರ ಮೇಲೆ ಪರಿಣಾಮ ಬೀರುತ್ತದೆ ಏಕೆಂದರೆ ಬಿಜೆಪಿ 24X7 ಕೆಲಸ ಮಾಡುತ್ತದೆ. ಚುನಾವಣೆಗಳು ಸಮೀಪಿಸಿದಂತೆ ತಳಮಟ್ಟದಲ್ಲು ಕೆಲಸ ಮಾಡಲು ನಾವು ಕಾಯುವುದಿಲ್ಲ. ಆದರೆ ಈ ಬೆಳವಣಿಗೆ ಮನೋಸ್ಥೈರ್ಯವನ್ನು ಅಡ್ಡಿಪಡಿಸುತ್ತದೆ” ಎಂದು ಹೆಸರಿಸಲು ಇಚ್ಚಿಸದ ಬಿಜೆಪಿ ಶಾಸಕ ಹೇಳಿದರು. ಈಗ, ಜುಲೈ 26 ರಂದು ಯಡಿಯೂರಪ್ಪ ಕರೆದಿರುವ ಸಭೆಯತ್ತ ಎಲ್ಲ ಕಣ್ಣುಗಳಿವೆ. ಆದರೆ, ಇದಕ್ಕಾಗಿ ಅಧಿಕೃತ ಆಹ್ವಾನಗಳು ಇನ್ನೂ ಸಿಕ್ಕಿಲ್ಲ.
Advertisement