ಬಸವರಾಜ್ ಬೊಮ್ಮಾಯಿ
ಬಸವರಾಜ್ ಬೊಮ್ಮಾಯಿ

ಯಡಿಯೂರಪ್ಪನವರ ನಾಯಕತ್ವ ಕುರಿತು ಹೈಕಮಾಂಡ್ ನಲ್ಲಿ ಯಾವುದೇ ಗೊಂದಲ ಇಲ್ಲ: ಬಸವರಾಜ್ ಬೊಮ್ಮಾಯಿ

ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟೇ ಕೆಲಸ ಮಾಡಿದರೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದು, ನಾಯಕತ್ವ ಬದಲಾವಣೆ ಬಗ್ಗೆ ನಿರಂತರ ಗಾಳಿ ಮಾತುಗಳು ಕೇಳಿಬರುತ್ತಲೇ ಇವೆ. ಅವರಿಗೆ ಬಹಳಷ್ಟು ನೋವಾಗಿರಬಹುದು, ಎಲ್ಲಾ ಸಮಯದಲ್ಲಿ ಕೂಡ ಯಡಿಯೂರಪ್ಪನವರು ಕರ್ತವ್ಯಪ್ರಜ್ಞೆ ಮರೆತಿಲ್ಲ ಎಂದರು.

ಬೆಂಗಳೂರು: ಬಿ ಎಸ್ ಯಡಿಯೂರಪ್ಪನವರು ಮುಖ್ಯಮಂತ್ರಿಗಳಾದ ಮೇಲೆ ಎರಡು ಬಾರಿ ಕೋವಿಡ್ ಸೋಂಕಿನ ಅಲೆ ರಾಜ್ಯಕ್ಕೆ ಅಪ್ಪಳಿಸಿದೆ. ಕೋವಿಡ್ ಸಂದರ್ಭದಲ್ಲಿ ಯಾವ, ಯಾವ ಕಾಲಕ್ಕೆ ಯಾವ್ಯಾವ ನಿರ್ಣಯಗಳನ್ನು ಮಾಡಬೇಕೊ ಮಾಡಿದ್ದಾರೆ, ಯಾವುದಕ್ಕೂ ಕೊರತೆಯಾಗದಂತೆ ನೋಡಿಕೊಂಡಿದ್ದಾರೆ, ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸಗಳು, ಸರ್ಕಾರಿ ನೌಕರರ ವೇತನ ಕಡಿತವಾಗದಂತೆ ನೋಡಿಕೊಂಡಿದ್ದಾರೆ. ಕೋವಿಡ್ ನಿಂದಾಗಿ ಯಾವುದಕ್ಕೂ ಕುಂದುಕೊರತೆಯಾಗದಂತೆ ನೋಡಿಕೊಂಡಿದ್ದಾರೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪನವರು ಎಷ್ಟೇ ಕೆಲಸ ಮಾಡಿದರೂ ಅವರ ಬಗ್ಗೆ ಹಗುರವಾಗಿ ಮಾತನಾಡುವುದು, ನಾಯಕತ್ವ ಬದಲಾವಣೆ ಬಗ್ಗೆ ನಿರಂತರ ಗಾಳಿ ಮಾತುಗಳು ಕೇಳಿಬರುತ್ತಲೇ ಇವೆ.ಅವರಿಗೆ ಬಹಳಷ್ಟು ನೋವಾಗಿರಬಹುದು, ಎಲ್ಲಾ ಸಮಯದಲ್ಲಿ ಕೂಡ ಯಡಿಯೂರಪ್ಪನವರು ಕರ್ತವ್ಯಪ್ರಜ್ಞೆ ಮರೆತಿಲ್ಲ ಎಂದರು.

ಇವತ್ತು ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪನವರು ಅತ್ಯಂತ ಹಿರಿಯರು, ಹಿರಿಯ ಪಕ್ಷ ಸಂಘಟಕರು ಎಂಬುದನ್ನು ಹೈಕಮಾಂಡ್ ಕೂಡ ಗುರುತಿಸಿದೆ. ಯಾವುದೇ ಗೊಂದಲ ಹೈಕಮಾಂಡ್ ನಲ್ಲಿಲ್ಲ, ಅದು ಪ್ರಹ್ಲಾದ್ ಜೋಷಿ, ಸಿ.ಟಿ.ರವಿಯವರ ಹೇಳಿಕೆಗಳಿಂದ ಬಹಳ ಸ್ಪಷ್ಟವಾಗಿದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com