ಕೇಂದ್ರ ಸಂಪುಟ ಪುನರಚನೆಯತ್ತ ಸಚಿವಾಕಾಂಕ್ಷಿ ರಾಜ್ಯ ಸಂಸದರ ದೃಷ್ಟಿ

ಕಳೆದ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಸತತ ಸಭೆಗಳನ್ನು ನಡೆಸಿದ ನಂತರ ಕೇಂದ್ರ ಸಚಿವ ಸಂಪುಟದ ಪುನರ್ರಚನೆಯ ಸುತ್ತಲಿನ ಚರ್ಚೆಗಳ ನಂತರ ರಾಜ್ಯ ಬಿಜೆಪಿ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದೆನ್ನುವ ಊಹಾಪೋಹಗಳು ರಾಜಕೀಯ ಅಖಾಡದಲ್ಲಿ ಹಬ್ಬಿದೆ.
ನರೇಂದ್ರ ಮೋದಿ
ನರೇಂದ್ರ ಮೋದಿ

ಬೆಂಗಳೂರು: ಕಳೆದ ಎರಡು ದಿನಗಳಿಂದ ಪ್ರಧಾನಿ ನರೇಂದ್ರ ಮೋದಿ ಸತತ ಸಭೆಗಳನ್ನು ನಡೆಸಿದ ನಂತರ ಕೇಂದ್ರ ಸಚಿವ ಸಂಪುಟದ ಪುನರ್ರಚನೆಯ ಸುತ್ತಲಿನ ಚರ್ಚೆಗಳ ನಂತರ ರಾಜ್ಯ ಬಿಜೆಪಿ ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದೆನ್ನುವ ಊಹಾಪೋಹಗಳು ರಾಜಕೀಯ ಅಖಾಡದಲ್ಲಿ ಹಬ್ಬಿದೆ. ಲಿಂಗಾಯತ ಸಮುದಾಯದ ಇಬ್ಬರು ಬಿಜೆಪಿ ಸಂಸದರ ಹೆಸರುಗಳು ಮುಂಚೂಣಿಯಲ್ಲಿದ್ದರೆ ಪಕ್ಷದ ಹಿರಿಯ ಮುಖಂಡರು ಲಿಂಗಾಯತೇತರ ಸಂಸದರೂ ಸಂಪುಟ ಸೇರ್ಪಡೆಯಾಗಬಹುದು ಎಂದಿದ್ದಾರೆ.

ಶುಕ್ರವಾರ ಮೋದಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ಇತರರೊಂದಿಗೆ ಸಭೆ ನಡೆಸಿದರು. ಮೋದಿಯವರು ಕಳೆದ ಕೆಲವು ದಿನಗಳಿಂದ ಕೇಂದ್ರ ಸಚಿವರನ್ನು ಹಂತ ಹಂತವಾಗಿ ಭೇಟಿ ಮಾಡುತ್ತಿದ್ದಾರೆ. ಇದು ಸಂಪುಟ ಪುನರಚನೆಯ ಬಗೆಗೆ ಊಹಾಪೋಹಕ್ಕೆ ಕಾರಣವಾಗಿದೆ. ಕರ್ನಾಟಕದ 28 ಸಂಸದರಲ್ಲಿ 25 ಮಂದಿ ಬಿಜೆಪಿಯವರು. ರೈಲ್ವೆ ಕಾತೆ ರಾಜ್ಯ ಸಚಿವರಾಗಿದ್ದ , ಸುರೇಶ್ ಅಂಗಡಿ ಅವರ ನಿಧನದ ನಂತರ, ಅವರ ಪತ್ನಿ ಮಂಗಳಾ ಅವರು ಬೆಳಗಾವಿಯಲ್ಲಿ ನಡೆದ ಉಪಚುನಾವಣೆಯಲ್ಲಿ ಗೆದ್ದಿದ್ದಾರೆ.

ಬಾಗಲಕೋಟೆ ನಾಲ್ಕು ಬಾರಿಯ ಸಂಸದ, ಪಿ ಸಿ ಗದ್ದಿ ಗೌಡರ್ ಹಾಗೂ ಹಾವೇರುಯ ಶಿವಕುಮಾರ್ ಸಿ ಉದಾಸಿ ಅವರ ಹೆಸರುಗಳು ಪ್ರಸ್ತುತ ಸಂಪುಟ ಸೇರ್ಪಡೆಯಗಲಿದ್ದಾರೆನ್ನುವ ಸಂಸದರ ಹೆಸರುಗಳಲ್ಲಿ ಮುನ್ನೆಲೆಯಲ್ಲಿದೆ. ಇಬ್ಬರೂ ನಾಯಕರು ಲಿಂಗಾಯತ ಸಮುದಾಯದವರು. ಅಂಗಡಿ ಕೂಡ ಲಿಂಗಾಯತ ಸಮುದಾಯಕ್ಕೇ ಸೇರಿದವರು.ಕಾಕತಾಳೀಯವಾಗಿ, ಗದ್ದಿ ಗೌಡರ್ ಈಗ ದೆಹಲಿಯಲ್ಲಿದ್ದಾರೆ. ಪಕ್ಷದ ಮುಖಂಡರು ನೀಡುವ ಯಾವುದೇ ಹುದ್ದೆಯನ್ನು ಸ್ವೀಕರಿಸಲು ಸಿದ್ಧ ಎಂದು ಹೇಳಿದ್ದಾರೆ. ಆದರೆ . ನಾನು ಅವರನ್ನು ಸಂಪರ್ಕಿಸಿಲ್ಲ, ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದರು.

ಗದ್ದಿಗೌಡರ್ ಉದಾಸಿ ಅವರಿಗಿಂತ ಹಿರಿಯರಾಗಿರುವುದರಿಂದ ಅವರು ಉತ್ತಮ ಅವಕಾಶವನ್ನು ಹೊಂದಿದ್ದಾರೆಎಂದು ಮೂಲಗಳು ಸೂಚಿಸಿವೆ. ಆದರೆ, ಬಿಜೆಪಿಯ ಮತ್ತೊಬ್ಬ ಹಿರಿಯ ಮುಖಂಡರು, ಕೇಂದ್ರ ನಾಯಕತ್ವವು ಲಿಂಗಾಯತೇತರ ಸಂಸದರನ್ನು ಕೇಂದ್ರ ಸಚಿವರಾಗಿ ಆಯ್ಕೆ ಮಾಡಿದರೆ ಆಶ್ಚರ್ಯವೇನಿಲ್ಲ ಎಂದು ಹೇಳಿದ್ದಾರೆ.

ಪತ್ರಿಕೆ ಜತೆಗೆ  ಮಾತನಾಡಿದ ಕೇಂದ್ರ ಸಚಿವ ಡಿ ವಿ ಸದಾನಂದ ಗೌಡ ಅವರು, 2014 ರಲ್ಲಿ ಕರ್ನಾಟಕದ ನಾಲ್ವರು ಸಂಸದರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿದೆ - ಸ್ವತಃ ಎಚ್ ಎನ್ ಅನಂತ್ ಕುಮಾರ್, ಜಿ ಎಂ ಸಿದ್ದೇಶ್ವರ ಮತ್ತು ವೆಂಕಯ್ಯ ನಾಯ್ಡು (ರಾಜ್ಯಸಭಾ ಸದಸ್ಯ). 2019 ರಲ್ಲಿ ಪ್ರಹಾದ್ ಜೋಶಿ, ನಿರ್ಮಲಾ ಸೀತಾರಾಮನ್ ಮತ್ತು ಅಂಗಡಿ ಅವರನ್ನು ಸೇರಿಸಿಕೊಳ್ಳಲಾಯಿತು. "ಅವರು ಈ ಬಾರಿ ಕರ್ನಾಟಕದಿಂದ ಒಬ್ಬರನ್ನು ಸೇರಿಸಿಕೊಳ್ಳುತ್ತಾರೆ ಎಂದು ನಾವು ಭಾವಿಸುತ್ತೇವೆ," ಎಂದು ಅವರು ಹೇಳಿದರು. ಕರ್ನಾಟಕದ ಮತ್ತೊಬ್ಬ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಯಾವಾಗ ಮತ್ತು ಯಾರನ್ನು ಸೇರಿಸಿಕೊಳ್ಳಬೇಕೆಂದು ಮೋದಿ ಮತ್ತು ನಡ್ಡಾ ನಿರ್ಧರಿಸುತ್ತಾರೆ ಎಂದು ಹೇಳಿದರು.

ಶಾಸಕ ಬೆಲ್ಲದ ದೆಹಲಿ ಭೇಟಿ 

ಕೇಂದ್ರ ಸಚಿವ ಸಂಪುಟ ಪುನರಚನೆಯ ಮಾತುಕತೆಯ ಮಧ್ಯೆ, ಧಾರವಾಡ-ಪಶ್ಚಿಮ ಶಾಸಕ ಅರವಿಂದ್ ಬೆಲ್ಲದ ಶನಿವಾರ ನವದೆಹಲಿಯಲ್ಲಿದ್ದದ್ದು ಊಹಾಪೋಹಗಳಿಗೆ ಎಡೆ ಮಾಡಿದೆ, ಆದರೆ ಇದು ಖಾಸಗಿ ಭೇಟಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ನಾಯಕರನ್ನು ಭೇಟಿ ಮಾಡಲು ಅಥವಾ ಯಾವುದೇ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಚರ್ಚಿಸಲು ನಾನು ದೆಹಲಿಗೆ ಬಂದಿಲ್ಲ ಎಂದು ಹೇಳಿದರು. ಅವರ ಭೇಟಿಯ ಉದ್ದೇಶದ ಬಗ್ಗೆ ಶನಿವಾರ ಬೆಳಿಗ್ಗೆ ಮಾಧ್ಯಮದಲ್ಲಿ ಬಂದ ವರದಿಗಳು ನಿಜವಲ್ಲ ಎಂದು ಅವರು ಹೇಳಿದರು.

ಸರಕಾರಿ ಭೂಮಿಯನ್ನು ಜೆಎಸ್‌ಡಬ್ಲ್ಯು ಜಿಂದಾಲ್ ಸ್ಟೀಲ್‌ಗೆ ಮಾರಾಟ ಮಾಡುವ ಬಗ್ಗೆ ಬೆಲ್ಲದ ಇತ್ತೀಚೆಗೆ ಬಿಜೆಪಿ ಕೇಂದ್ರ ನಾಯಕತ್ವಕ್ಕೆ ದೂರು ನೀಡಿದ್ದರು. ಹಿಂದಿನ ಭೇಟಿಯಲ್ಲಿ ಬೆಲ್ಲದ ಅವರೊಂದಿಗೆ ದೆಹಲಿಗೆ ತೆರಳಿದ್ದ ಶಾಸಕ ಸಿ ಪಿ ಯೋಗೀಶ್ವರ ಕೂಡ ಸರ್ಕಾರದಲ್ಲಿ ಹಸ್ತಕ್ಷೇಪ ಮಾಡುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಕರ್ನಾಟಕದ ಉಸ್ತುವಾರಿ ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಅವರು ಬುಧವಾರ ಬೆಂಗಳೂರಿಗೆ ಆಗಮಿಸಿ ಮೂರು ದಿನಗಳ ಅವಧಿಯಲ್ಲಿ ಸರಣಿ ಸಭೆ ನಡೆಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com