ಚಾಮರಾಜನಗರ ದುರಂತ ಮರೆ ಮಾಚಲು ಬೆಡ್ ಬ್ಲಾಕಿಂಗ್ ನಾಟಕ: ಎಚ್.ಡಿ. ಕುಮಾರಸ್ವಾಮಿ ಕಟು ಟೀಕೆ
ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ವ್ಯಂಗ್ಯವಾಡಿದರು.
Published: 05th May 2021 04:25 PM | Last Updated: 05th May 2021 04:37 PM | A+A A-
ತೇಜಸ್ವಿ-ಎಚ್ ಡಿಕೆ
ಮಂಡ್ಯ: ಚಾಮರಾಜನಗರ ಘಟನೆ ಮರೆಮಾಚಲು ಬೆಡ್ ಬ್ಲಾಕಿಂಗ್ ದಂಧೆ ಎಂದು ನಾಟಕ ಆರಂಭಿಸಿದ್ದಾರೆ. ಇದೊಂದು ಜನರನ್ನು ಹಾದಿ ತಪ್ಪಿಸುವ ಪರ್ಯಾಯ ಮಾರ್ಗ ಅಷ್ಟೇ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬುಧವಾರ ವ್ಯಂಗ್ಯವಾಡಿದರು.
ಮಂಡ್ಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ಅವ್ಯವಸ್ಥೆ ಬಗ್ಗೆ ಮಾಹಿತಿ ಸಂಗ್ರಹಿಸಿದ ಮಾಜಿ ಸಿ ಎಂ ಕುಮಾರಸ್ವಾಮಿ, ಬೆಂಗಳೂರಿನಲ್ಲಿ ನಿನ್ನೆ ದೊಡ್ಡ ಡ್ರಾಮ ನಡೆಸಿದರು. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ಇಬ್ಬರು ಶಾಸಕರು ವಾರ್ ರೂಂಗೆ ನುಗ್ಗಿ ಡ್ರಾಮ ಮಾಡಿ ಅಗ್ಗದ ಪ್ರಚಾರಕ್ಕೆ ಮುಂದಾಗಿದ್ದಾರೆ.
ಕೆಲವು ಮಾಧ್ಯಮಗಳು ಆತನನ್ನು ಬಾಹುಬಲಿ ಎಂದು ವೈಭವೀಕರಿಸಿದ್ದಾರೆ. ನನ್ನ ಸರ್ಕಾರ ಕಿತ್ತು ಹಾಕುವಲ್ಲಿ ಯಶಸ್ವಿಯಾದ ಕೆಲ ಮಾಧ್ಯಮ ಸಂಪಾದಕರು, ಈಗ ನಿನ್ನೆಯಿಂದ ಕೊಲೆಗಡುಕ ಸರ್ಕಾರ ಎಂದು ಬಿಂಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಬೆಂಗಳೂರಿನಲ್ಲಿರುವ ವಾರ್ ರೂಂನಲ್ಲಿ ಮದರಸ ಮಾಡಲು ಹೊರಟಿದ್ದೀರಾ ಅಂತ ಆ ಸಂಸದ ಪ್ರಶ್ನೆ ಮಾಡಿದ್ದಾನೆ. ಇಲ್ಲಿ ಜನಗಳು ಸಾಯುತ್ತಿದ್ದಾರೆ. ಅಲ್ಲಿ ಹೋಗಿ ಇವರುಗಳು ರಾಜಕೀಯ ಮಾಡುತ್ತಿದ್ದಾರೆ. ಜಾತಿ ಇಲ್ಲಿ ಕೆಲಸ ಮಾಡಲ್ಲ, ಪ್ರಾಮಾಣಕತೆ ಮುಖ್ಯ ಎಂದರು.






