ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ, ಪರೋಕ್ಷ ಹತ್ಯೆ ಆರೋಪ; ಎಂತಹ ನಾಟಕ!

ಸಂಸದ ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ, ಎಂತಹ ನಾಟಕ ಎಂದು ಕುಹಕವಾಡಿದೆ.

Published: 05th May 2021 09:59 AM  |   Last Updated: 05th May 2021 12:17 PM   |  A+A-


Tejaswi surya

ತೇಜಸ್ವಿ ಸೂರ್ಯ

Posted By : Shilpa D
Source : Online Desk

ಬೆಂಗಳೂರು: ಕೊರೋನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ದಂಧೆಯನ್ನು ಸಂಸದ ತೇಜಸ್ವಿ ಸೂರ್ಯ ಹಾಗೂ ಸರ್ಕಾರದ ಶಾಸಕರು ಬಯಲು ಮಾಡಿದ್ದು, ತಪ್ಪಿತ್ತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಈ ಸಂಬಂಧ ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, ಸಂಸದ ತೇಜಸ್ವಿ ಅವರು ಸಿಎಂ ಯಡಿಯೂರಪ್ಪ ಹಾಗೂ ಸಚಿವರ ವಿರುದ್ಧ ಭ್ರಷ್ಟಾಚಾರ ಹಾಗೂ ಪರೋಕ್ಷ ಹತ್ಯೆ ಆರೋಪ ಮಾಡಿದ್ದಾರೆ, ಎಂತಹ ನಾಟಕ ಎಂದು ಕುಹಕವಾಡಿದೆ.

ಸಂಸದ ತೇಜಸ್ವಿ ಸೂರ್ಯ ಮತ್ತು ಅವರ ಸಂಬಂಧಿ ಶಾಸಕ ಮತ್ತು ಮತ್ತಿಬ್ಬರು ಶಾಸಕರು  ಆಸ್ಪತ್ರೆಯಲ್ಲಿ ಹಾಸಿಗೆ ಹಗರಣದ ಬಗ್ಗೆ ಆರೋಪಿಸಿದ್ದಾರೆ. ರಾಜ್ಯದಲ್ಲೂ, ಕೇಂದ್ರದಲ್ಲೂ , ಬಿಬಿಎಂಪಿಯಲ್ಲೂ ಬಹುತೇಕ ಬೆಂಗಳೂರು ಎಂಪಿಗಳೂ ಎಲ್ಲರೂ ಬಿಜೆಪಿಯವರೇ! ಒಬ್ಬರಲ್ಲ ಎಂದು ಮೂರು ಡಿಸಿಎಂಗಳು. ಅಧಿಕಾರವೆಲ್ಲ ತಮ್ಮ ಕೈಲಿದ್ದು ಸಹ ಬಿಜೆಪಿಯ   ಎಂಪಿಗಳು, ಶಾಸಕರು ಪ್ರೆಸ್ ಮೀಟ್ ಮಾಡಿ ತಮ್ಮದೇ ಸರ್ಕಾರದ ವೈಫಲ್ಯತೆ, ಭ್ರಷ್ಟಾಚಾರವನ್ನು ಹೇಳುತ್ತಿದ್ದಾರೆ ಎಂದರೆ ಇದು ತೀರ ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದೆ.

ಸಂಸದ- ಶಾಸಕರ ಪತ್ರಿಕಾಗೋಷ್ಠಿ ಅಧಿಕಾರಿಗಳ ಮೇಲೆ ಆರೋಪ ಹೊರಿಸಿ ಹೊಣೆಗಾರಿಕೆಯಿಂದ ಜಾರಿಕೊಳ್ಳುವ ಯತ್ನ ಹಾಗೂ ಬಿಜೆಪಿ ಒಳಜಗಳದ ಭಾಗವಷ್ಟೇ. ಬೆಡ್‌ಗಳ ಅವ್ಯವಹಾರ ನಡೆಯುತ್ತಿದ್ದರೂ ಕಣ್ಮುಚ್ಚಿ ಕುಳಿತಿದ್ದೇಕೆ? ಪತ್ರಿಕಾಗೋಷ್ಠಿ ಬದಲು ಲೋಪ ಸರಿಪಡಿಸುವ ಪ್ರಯತ್ನ ಮಾಡಿಲ್ಲ ಏಕೆ? ಇಂತಹ ದುರಿತ ಕಾಲದಲ್ಲೂ ಗಾಂಭೀರ್ಯತೆ ಇಲ್ಲವೇಕೆ? ಎಂದು ಪ್ರಶ್ನಿಸಿದೆ.


Stay up to date on all the latest ರಾಜಕೀಯ news
Poll
kangana ranaut

ಗುಲಾಮರು ಇಟ್ಟಿರುವ 'ಇಂಡಿಯಾ' ಹೆಸರನ್ನು 'ಭಾರತ್' ಎಂದು ಬದಲಾಯಿಸುವಂತೆ ಕಂಗನಾ ರಣಾವತ್ ಹೇಳಿದ್ದಾರೆ. ನೀವು ಏನಂತೀರಿ?


Result
ಹೌದು, ಅವರು ಹೇಳಿದ್ದು ಸರಿ.
ಇಲ್ಲ, ಇದು ತುಂಬಾ ಸಿಲ್ಲಿ.
flipboard facebook twitter whatsapp