ಸಿದ್ದರಾಮಯ್ಯ ಏಕೆ ಶ್ರೀಕಿಯನ್ನು ಆಗಲೇ ಬಂಧಿಸಲಿಲ್ಲ: ಅರಗ ಜ್ಞಾನೇಂದ್ರ

ಬಿಟ್ ಕಾಯಿನ್‌ನಲ್ಲಿ ಪ್ರಭಾವಿಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ತಿರುಗೇಟು ನೀಡಿದ್ದಾರೆ.
ಆರಗ ಕ್ಷಾನೇಂದ್ರ
ಆರಗ ಕ್ಷಾನೇಂದ್ರ

ಬೆಂಗಳೂರು: ಬಿಟ್ ಕಾಯಿನ್‌ನಲ್ಲಿ ಪ್ರಭಾವಿಗಳನ್ನು ರಕ್ಷಣೆ ಮಾಡುತ್ತಾರೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಸಿದ್ದರಾಮಯ್ಯಗೆ ವಿಧಾನಸೌಧದಲ್ಲಿ ತಿರುಗೇಟು ನೀಡಿದ್ದಾರೆ.

2018ರಲ್ಲಿಯೇ ಯುಬಿಸಿಟಿ ಗಲಾಟೆಯಲ್ಲಿ ಈ ಶ್ರೀಕಿ ಸಿಕ್ಕಿದ್ದಾಗ ಸಿದ್ದರಾಮಯ್ಯ ಏಕೆ ಆತನನ್ನು ಬಂಧಿಸಲಿಲ್ಲ. ಸಿದ್ದರಾಮಯ್ಯ ಏಕೆ ಆತನನ್ನು ಬಂಧಿಸುವ ಕೆಲಸ ಸಿದ್ದರಾಮಯ್ಯ ಮಾಡಿಲ್ಲ.
ಇಬ್ಬರು ಕಾಂಗ್ರೆಸ್ ನಾಯಕರ ಮಕ್ಕಳ ಜೊತೆ ಸಿಕ್ಕಿಬಿದ್ದಾಗ ಏಕೆ ಅರೆಸ್ಟ್ ಮಾಡಿ ತನಿಖೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

ನಾವೂ ಗಾಂಜಾ, ಡ್ರಗ್ಸ್ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಿ ತನಿಖೆ ಮಾಡಿದಾಗ ಬಿಟ್ ಕಾಯಿನ್ ವಿಚಾರದಲ್ಲೂ ಈತನ ಪಾತ್ರ ಇರುವುದು ಗೊತ್ತಾಗಿದೆ. ಹೀಗಾಗಿ ನಾವೂ ಇಡಿ ಮತ್ತು ಇಂಟರ್ ಪೋಲ್ ಗೆ ಶಿಫಾರಸ್ಸು ಮಾಡಿದ್ದೇವೆ.

ನಮ್ಮಲ್ಲಿ ಯಾವ ಘಟಾನುಘಟಿ ನಾಯಕರೂ ಸಂಪರ್ಕದಲ್ಲಿಲ್ಲ.ಆತನ ಜೊತೆಗೆ ಯಾರ ಸಂಪರ್ಕದಲ್ಲಿದ್ದಾರೆ ಎನ್ನುವುದನ್ನು ಸ್ಪಷ್ಟವಾಗಿ ಸಿದ್ದರಾಮಯ್ಯನವರು ಹೇಳಲಿ.ಆತನ ಸಂಪರ್ಕದಲ್ಲಿ ಕಾಂಗ್ರೇಸ್‌ನವರೇ ಇರುವುದುಯಾರನ್ನು ರಕ್ಷಣೆ ಮಾಡುವ ಕೆಲಸ ನಾವೂ ಮಾಡುವುದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ಸಿದ್ದರಾಮಯ್ಯ‌ಗೆ ಅರಗ ತಿರುಗೇಟು ನೀಡಿದರು.

ಹಾನಗಲ್‌ನಲ್ಲಿ ಬಿಜೆಪಿಗೆ ಆರಂಭದಲ್ಲಿ ಸದ್ಯ ಅಲ್ಪಸ್ವಲ್ಪ ಹಿನ್ನಡೆಯಿದ್ದರೂ ಮತ ಎಣಿಕೆ ಮುಗಿದ ಬಳಿಕ ಬಿಜೆಪಿಗೆ ಗೆಲುವಾಗುವ ನಿರೀಕ್ಷೆಯಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಹೇಳಿದ್ದಾರೆ.

ಸಿಂಧಗಿ ಹಾಗೂ ಹಾನಗಲ್‌ನಲ್ಲಿ ನಾವೇ ಗೆಲ್ಲುತ್ತೇವೆ.ಹಾನಗಲ್ ಕ್ಷೇತ್ರದಲ್ಲಿ ಬಿಜೆಪಿಗೆ ಅಲ್ಪಸ್ವಲ್ಪ ಹಿನ್ನಡೆ ಇದ್ದರೂ ಇನ್ನೂ ಮತ ಎಣಿಕೆ ಬಾಕಿ ಇದೆ.ಮುಂದಿನ ಸುತ್ತುಗಳಲ್ಲಿ ಬಿಜೆಪಿಗೆ ಮುನ್ನಡೆಯಾಗಲಿದೆ. ನಾನು ಕೂಡ ಹಾನಗಲ್ ಹೋಗಿ ಬಂದಿದ್ದೇನೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪ್ರಚಾರ ಮಾಡಿದ್ದಾರೆ.ಉದಾಸಿ ಕುಟುಂಬವೂ ಸಾಕಷ್ಟು ಕೆಲಸ ಮಾಡಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com