ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಸರ್ಕಾರದ ದೀಪಾವಳಿ ಗಿಫ್ಟ್ ಏನೂ ಅಲ್ಲ, ಹೆಚ್ಚೇನು ದರ ಕಡಿಮೆಯಾಗಿಲ್ಲ: ಕಾಂಗ್ರೆಸ್, ಜೆಡಿಎಸ್ 

ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂಧನ ಬೆಲೆ ಏರಿಕೆಯನ್ನು ಸರ್ಕಾರ ತಗ್ಗಿಸಿದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕೆ ಮಾಡಿದೆ. 
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)
ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್(ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂಧನ ಬೆಲೆ ಏರಿಕೆಯನ್ನು ಸರ್ಕಾರ ತಗ್ಗಿಸಿದರೂ ಕೂಡ ಕಾಂಗ್ರೆಸ್ ಮತ್ತು ಜೆಡಿಎಸ್ ಟೀಕೆ ಮಾಡಿದೆ. 

ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಬ್ಯಾರಲ್ ಗೆ ಕಚ್ಚಾ ತೈಲ ಬೆಲೆ 125 ಡಾಲರ್ ಇತ್ತು. ಆಗ ಪೆಟ್ರೋಲ್ ಗೆ ಇದ್ದ ಬೆಲೆ 65 ರೂಪಾಯಿ. ಇಂದು ಪ್ರತಿ ಬ್ಯಾರಲ್ ಕಚ್ಚಾ ತೈಲ ಬೆಲೆ 82 ಡಾಲರ್ ಇದ್ದರೂ ಪೆಟ್ರೋಲ್ ದರವನ್ನು 100 ರೂಪಾಯಿಗೆ ಇಳಿಸಲಾಗಿದೆಯಷ್ಟೆ. ಹೀಗಿರುವಾಗ ಇದನ್ನು ದೊಡ್ಡ ಸಾಧನೆ ಎಂದು ಹೇಳಲು ಸಾಧ್ಯವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಸಿಎಂ ಬಸವರಾಜ ಬೊಮ್ಮಾಯಿ ಅಥವಾ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ ಇಂಧನ ಬೆಲೆ ಇಳಿಕೆಯನ್ನು ದೀಪಾವಳಿ ಗಿಫ್ಟ್ ಎಂದು ಹೇಳಲು ಸಾಧ್ಯವಿಲ್ಲ. ಒಬ್ಬರಿಂದ 40 ರೂಪಾಯಿ ಕಿತ್ತುಕೊಂಡು ಕೇವಲ 7 ರೂಪಾಯಿ ಕೊಟ್ಟರೆ ಅದು ಗಿಫ್ಟ್ ಹೇಗಾಗುತ್ತದೆ ಎಂದು ಪ್ರಶ್ನಿಸಿದ್ದಾರೆ.

ಇಂಧನ ಬೆಲೆ ಇಳಿಕೆ ಸಾಮಾನ್ಯ ಜನರ ಗೆಲುವಾಗಿದೆ. ಸರ್ಕಾರಕ್ಕೆ ಉಪ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ನಾಯಕ ಬಂಡೆಪ್ಪ ಕಾಶಂಪೂರ್, ಎಥೆನಾಲ್ ನಂತಹ ಬದಲಿ ಇಂಧನ ಬಳಕೆಯ ಬಗ್ಗೆ ಜವಾಬ್ದಾರಿಯುತವಾಗಿ ಸರ್ಕಾರ ಚಿಂತಿಸಬೇಕು ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com