ರಾಜಕೀಯ ಲಾಭಕ್ಕಾಗಿ ಮೇಕೆದಾಟು ಪಾದಯಾತ್ರೆ ಹೈಜಾಕ್: ಕಾಂಗ್ರೆಸ್ ವಿರುದ್ಧ ದೇವೇಗೌಡ ಕಿಡಿ!

ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಮಾಡಲು ಮುಂದಾಗಿದೆ. ಈ ಕುರಿತು ಮಾಜಿ ಪ್ರಧಾನಿ ದೇವೇಗೌಡ ಕಿಡಿ ಕಾರಿದ್ದಾರೆ. ಮೇಕೆದಾಟು ಯೋಜನೆ ಕುರಿತು ಜೆಡಿಎಸ್ ಈಗಾಗಲೇ ರಾಜ್ಯಪಾಲರಿಗೆ ಮನವಿ ನೀಡಿದೆ.
ಕುಮಾರಸ್ವಾಮಿ ಸಂಪಾದಕತ್ವದ 'ಜನತಾ ಪತ್ರಿಕೆ' ಲೋಕಾರ್ಪಣೆ
ಕುಮಾರಸ್ವಾಮಿ ಸಂಪಾದಕತ್ವದ 'ಜನತಾ ಪತ್ರಿಕೆ' ಲೋಕಾರ್ಪಣೆ

ಬೆಂಗಳೂರು: ಕಾಂಗ್ರೆಸ್ ಮೇಕೆದಾಟು ಯೋಜನೆ ಜಾರಿಗಾಗಿ ಪಾದಯಾತ್ರೆ ಮಾಡಲು ಮುಂದಾಗಿದೆ. ಈ ಕುರಿತು ಮಾಜಿ ಪ್ರಧಾನಿ ದೇವೇಗೌಡ ಕಿಡಿ ಕಾರಿದ್ದಾರೆ. ಮೇಕೆದಾಟು ಯೋಜನೆ ಕುರಿತು ಜೆಡಿಎಸ್ ಈಗಾಗಲೇ ರಾಜ್ಯಪಾಲರಿಗೆ ಮನವಿ ನೀಡಿದೆ. ಜೆಡಿಎಸ್ ಪಕ್ಷಕ್ಕೆ ಕ್ರೆಡಿಟ್ ಹೋಗಲಿದೆ ಎಂಬ  ಕಾರಣಕ್ಕೆ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದೆ ಎಂದು ದೇವೇಗೌಡರು ಆರೋಪಿಸಿದ್ದಾರೆ.

ಜೆಪಿ ಭವನದಲ್ಲಿಂದು ಜನತಾ ಪತ್ರಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೊದಲು ಪಾದಯಾತ್ರೆ ಮಾಡಿದರೆ ನಮಗೆ ಕ್ರೆಡಿಟ್ ಬರುತ್ತದೆ ಎಂದು ಕಾಂಗ್ರೆಸ್‍ವರು ಪಾದಯಾತ್ರೆ ಮಾಡುತ್ತಿದ್ದಾರೆ. ಅದರ ಕ್ರೆಡಿಟ್- ಡೆಬಿಟ್ ಬಗ್ಗೆ ಯಾರು ಯೋಚನೆ ಮಾಡಬೇಕಿಲ್ಲ ಎಂದರು.

ಎರಡು ತಿಂಗಳ ಹಿಂದೆ ಜೆಡಿಎಸ್ ಮೇಕೆದಾಟು ಯೋಜನೆ ಕುರಿತು ಪಾದಯಾತ್ರೆ ಮಾಡಲು ರಾಜ್ಯಪಾಲರಿಗೆ ಮನವಿ ನೀಡಿದೆ. ಇದೀಗ ಕಾಂಗ್ರೆಸ್ ಜೆಡಿಎಸ್ ಕಾರ್ಯಕ್ರಮವನ್ನು ಹೈಜಾಕ್ ಮಾಡಿದೆ. ಮುಖ್ಯಮಂತ್ರಿಗೂ ಮನವಿ ಮಾಡಲಾಗಿದೆ. ಇದೀಗ ದಿಢೀರ್ ಕಾಂಗ್ರೆಸ್ ಪಾದಯಾತ್ರೆಗೆ ಮುಂದಾಗಿದೆ ಎಂದು ಕಿಡಿ ಕಾರಿದ್ದಾರೆ.

ನಾವು ಈಗಾಗಲೇ ಯೋಜನೆ ಅನುಷ್ಠಾನಕ್ಕೆ ರಾಜ್ಯಪಾಲರಿಗೆ ಮನವಿ ಪತ್ರ ಕೊಟ್ಟಿದ್ದೇವೆ. ಕಾವೇರಿ ಹೋರಾಟದ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನಮ್ಮ ಮನೆಗೆ ಬಂದಿದ್ದನ್ನು ನಾನು ನೋಡಿದ್ದೇನೆ. ಹೀಗಾಗಿ ಸಮಯ ಬಂದಾಗ ನಾವು ಹೋರಾಟ ಮಾಡೋಣ. ಪಕ್ಷದ ಕಾರ್ಯಕರ್ತರು ನಿಷ್ಟೆಯಿಂದ ದುಡಿಬೇಕು. ಅಧಿಕಾರಕ್ಕಾಗಿ ಈ ಪಕ್ಷ ಸ್ಥಾಪನೆ ಮಾಡಿಲ್ಲ. ಜಯಪ್ರಕಾಶ್ ನಾರಾಯಣ ಅವರ ಹೋರಾಟದಿಂದ ಈ ಪಕ್ಷ ಬಂದಿದೆ ಹೇಳಿದರು.

ಸೋಲು-ಗೆಲುವು ಬರುತ್ತೆ ಹೋಗುತ್ತೆ. ಈಗಾಗಲೇ ಎಲ್ಲವನ್ನೂ ಎದುರಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಏಳು ದಿನ ಕಾರ್ಯಗಾರ ಮಾಡಿದ್ದರು. ನಾನು ಬೆಳಗ್ಗೆ ಯಿಂದ ಸಂಜೆವರೆಗೆ ಕುಳಿತಿದ್ದೆ. ಕಾರ್ಯಗಾರಕ್ಕೆ ಒಳ್ಳೆ ಇಮೇಜ್ ಕೂಡ ಬಂದಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com