ನವೆಂಬರ್ 29 ರಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಜೀವನ ಚರಿತ್ರೆ ಬಿಡುಗಡೆ

ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಒಂದು ಸಾಮಾನ್ಯ ಹಳ್ಳಿಯಿಂದ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಮಟ್ಟಕ್ಕೆ ಬೆಳೆದಿದ್ದರು. ಅವರ 6 ದಶಕಗಳ ರಾಜಕೀಯ ಜೀವನದ ಏಳುಬೀಳುಗಳನ್ನು ದಾಖಲಿಸುವ ಅವರ ಜೀವನ ಚರಿತ್ರೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
ಎಚ್.ಡಿ ದೇವೇಗೌಡ
ಎಚ್.ಡಿ ದೇವೇಗೌಡ

ಬೆಂಗಳೂರು: ಮಾಜಿ ಪ್ರಧಾನ ಮಂತ್ರಿ ಹೆಚ್. ಡಿ. ದೇವೇಗೌಡರು ಒಂದು ಸಾಮಾನ್ಯ ಹಳ್ಳಿಯಿಂದ ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸುವ ಮಟ್ಟಕ್ಕೆ ಬೆಳೆದಿದ್ದರು. ಅವರ 6 ದಶಕಗಳ ರಾಜಕೀಯ ಜೀವನದ ಏಳುಬೀಳುಗಳನ್ನು ದಾಖಲಿಸುವ ಅವರ ಜೀವನ ಚರಿತ್ರೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.

ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸ್ ಅವರು ರಚಿಸಿರುವ ದೇವೇಗೌಡರ ಜೀವನ ಚರಿತ್ರೆಯನ್ನು ಪೆಂಗ್ವಿನ್ ಪ್ರಕಾಶನ ಪ್ರಕಟಿಸುತ್ತಿದೆ. 600 ಪುಟಗಳಿರುವ ಈ ಪುಸ್ತಕದಲ್ಲಿ ದೇವೇಗೌಡರ 6 ದಶಕಗಳ ರಾಜಕೀಯ ಜೀವನವನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಆಕ್ಸ್ ಫರ್ಡ್ ಪ್ರಾಧ್ಯಾಪಕರೂ ಈ ಗ್ರಂಥವನ್ನು ವಿಶ್ಲೇಷಿಸಿದ್ದಾರೆ.

ಸ್ವಾತಂತ್ರ್ಯೋತ್ತರ ಭಾರತದ ರಾಜಕೀಯದ ಇತಿಹಾಸವು ಕೆ ಹಲವರಿಗೆ ಕ್ರೂರವಾಗಿದೆ. ನನಗೆ, ಎಚ್‌.ಡಿ. ದೇವೇಗೌಡರ ಜೀವನ, ರಾಜಕೀಯ ಮತ್ತು ಸಮಯವನ್ನು ಅಧ್ಯಯನ ಮಾಡುವುದು ಸಮತೋಲನವನ್ನು ಮರುಸ್ಥಾಪಿಸುವಾಗ ನನಗೆ ಅನೇಕ ಅನುಭವಗಳುಂಟಾದವು. ನಾನು ಈ ಪುಸ್ತಕವನ್ನು ಬರೆಯುವಾಗ, ದೇವೇಗೌಡರ ಜೀವನವು ಸ್ಥಳೀಯ ಮತ್ತು ಸಾರ್ವತ್ರಿಕವಾದ ಒಂದು ಆಕರ್ಷಕವಾದ ಮಿಳಿತವಾಗಿ ನನಗೆ ಕಂಡಿತು ಎಂದು ಲೇಖಕ ಸುಗತ ಶ್ರೀನಿವಾಸರಾಜು ಹೇಳಿದ್ದಾರೆ.

ದೇವೇಗೌಡರ ಜೀವನ ಚರಿತ್ರೆ ಬರೆದು ಮುಗಿಸುವಾಗ ನನಗೆ ಸಿಕ್ಕ ಅಪಾರ ಅದೃಷ್ಟಕ್ಕೆ ನಾನು ಸಂತೋಷ ಪಟ್ಟೆ, ಪುಸ್ತಕದಲ್ಲಿ ದೇವೇಗೌಡರ ಶ್ರೀಮಂತ ಸಂಸದೀಯ ದಾಖಲೆ, ಅವರ ಜೀವನದ ವಿವಿಧ ಹಂತಗಳು, ಏಳು-ಬೀಳುಗಳ ಬಗ್ಗೆ ತಿಳಿಯಲು ಹಲವು ಸಂದರ್ಶನ ಮಾಡಿದ್ದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com