ಬೆಂಗಳೂರು ನಗರ ಎಂಎಲ್ಸಿ ಅಭ್ಯರ್ಥಿ ಯೂಸಫ್ ಶರೀಫ್ ಆಸ್ತಿ ಮೌಲ್ಯ 1.7 ಸಾವಿರ ಕೋಟಿ ರೂ! ಯಾರ್ಯಾರ ಬಳಿ ಎಷ್ಟೆಷ್ಟು ಸಂಪತ್ತು ಇದೆ ನೋಡಿ!

ಡಿಸೆಂಬರ್ 10ರಂದು 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ 121 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಸ್ಪರ್ಧಾಳುಗಳು ಈಗಾಗಲೇ ತಮ್ಮ ಆಸ್ತಿ ಸಂಪತ್ತುಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ ಹಲವರು ಕೋಟ್ಯಧಿಪತಿಗಳಾಗಿದ್ದಾರೆ. ಶಾಸಕರು, ಸಚಿವರುಗಳಿಂದಲೂ ಸಂಪತ್ತಿನಲ್ಲಿ ಮುಂದಿದ್ದಾರೆ.
ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯೂಸಫ್ ಶರೀಫ್ ಡಿ ಕೆ ಶಿವಕುಮಾರ್ ಜೊತೆ
ಬೆಂಗಳೂರು ನಗರ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಯೂಸಫ್ ಶರೀಫ್ ಡಿ ಕೆ ಶಿವಕುಮಾರ್ ಜೊತೆ

ಬೆಂಗಳೂರು: ಡಿಸೆಂಬರ್ 10ರಂದು 25 ವಿಧಾನ ಪರಿಷತ್ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ 121 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು ಸ್ಪರ್ಧಾಳುಗಳು ಈಗಾಗಲೇ ತಮ್ಮ ಆಸ್ತಿ ಸಂಪತ್ತುಗಳನ್ನು ಘೋಷಣೆ ಮಾಡಿದ್ದಾರೆ. ಅದರಲ್ಲಿ ಹಲವರು ಕೋಟ್ಯಧಿಪತಿಗಳಾಗಿದ್ದಾರೆ. ಶಾಸಕರು, ಸಚಿವರುಗಳಿಂದಲೂ ಸಂಪತ್ತಿನಲ್ಲಿ ಮುಂದಿದ್ದಾರೆ.

ಬೆಂಗಳೂರು ನಗರದಿಂದ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಯೂಸಫ್ ಶರೀಫ್ ಬಾಬು ಆಯ್ಕೆಯಾಗಿ ಬಂದರೆ ರಾಜ್ಯದಲ್ಲಿರುವ ಅತಿ ಶ್ರೀಮಂತ ಶಾಸಕ ಎನಿಸಿಕೊಳ್ಳಲಿದ್ದಾರೆ. ಅವರು ಘೋಷಿಸಿಕೊಂಡಂತೆ ಆಸ್ತಿ ಮೌಲ್ಯ ಸಾವಿರದ 700 ಕೋಟಿ ರೂಪಾಯಿಗೂ ಅಧಿಕವಿದ್ದು ಈ ಹಿಂದೆ ಸಚಿವ ಎಂಟಿಬಿ ನಾಗರಾಜ್ ಅವರು ಘೋಷಿಸಿಕೊಂಡಿದ್ದ ಸಾವಿರದ 200 ಕೋಟಿ ರೂಪಾಯಿಗಿಂತಲೂ ಅಧಿಕವಾಗಿದೆ. 

ಈ ಬಾರಿ ವಿಧಾನ ಪರಿಷತ್ ಗೆ ಸ್ಪರ್ಧಿಸುತ್ತಿರುವ ಬಹುತೇಕ ಸ್ಪರ್ಧಿಗಳು ಕೃಷಿ ಹಿನ್ನೆಲೆಯವರೋ, ಸ್ವಂತ ಫ್ಯಾಕ್ಟರಿ, ಉದ್ದಿಮೆ ಹೊಂದಿರುವವರು, ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಹಲವು ಹೆಕ್ಟೇರ್ ಕೃಷಿ ಭೂಮಿ, ಹಲವು ಮನೆಗಳು, ಅಪಾರ್ಟ್ ಮೆಂಟ್ ಗಳು, ಕಾರುಗಳನ್ನು ಹೊಂದಿದ್ದಾರೆ. ಕೆಲವರು ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರಾಗಿದ್ದಾರೆ. ಉದಾಹರಣೆಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರ ಸೋದರ ಪ್ರದೀಪ್ ಶೆಟ್ಟರ್ ಬಿಜೆಪಿಯಿಂದ ಸ್ಪರ್ಧಿಸುತ್ತಿದ್ದು ಅವರ ಘೋಷಿತ ಆಸ್ತಿ 88.91 ಕೋಟಿ ರೂಪಾಯಿಯಾಗಿದೆ. ಇನ್ನು ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರ ಮಗ ಡಾ ಸೂರಜ್ ರೇವಣ್ಣ ಅವರ ಘೋಷಿತ ಆಸ್ತಿ 61.6 ಕೋಟಿ ರೂಪಾಯಿಗಳಾಗಿದೆ.

ಸಮಾಜ ಕಲ್ಯಾಣ ಸಚಿವ ಹಾಗೂ ಈಗಿನ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರ ಘೋಷಿತ ಆಸ್ತಿ ಮೌಲ್ಯ 1.4 ಕೋಟಿ ರೂಪಾಯಿಯಾಗಿದೆ. ಎಲ್ಲರಿಗಿಂತ ಕಡಿಮೆ ಆಸ್ತಿ ಸಂಪತ್ತು ಹೊಂದಿದವರಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಯೂಸಫ್ ಶರೀಫ್ ಓದಿರುವುದು ಕೇವಲ 5ನೇ ತರಗತಿ ಮಾತ್ರ ಆದರೆ ಅವರಲ್ಲಿ 4.5 ಕೆಜಿ ಚಿನ್ನ ಸೇರಿದಂತೆ ಸಾವಿರದ 741 ಕೋಟಿ ರೂಪಾಯಿ ಸಂಪತ್ತುಗಳಿದೆ. 

ಒಂದು ಕಾಲದಲ್ಲಿ ಸ್ಕ್ರ್ಯಾಪ್ ಡೀಲರ್ ಆಗಿದ್ದ ಯೂಸಫ್ ಶರೀಫ್ ಬಾಬು ಇಂದು ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದಾರೆ. ಅವರಲ್ಲಿ ಹಲವು ಐಷಾರಾಮಿ ಕಾರುಗಳಿವೆ. ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರನ್ನು ಹೊಂದಿದ್ದು ಅದನ್ನು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರಿಂದ ಖರೀದಿಸಿ ಈ ಹಿಂದೆ ಸುದ್ದಿಯಾಗಿದ್ದರು.

ಐಟಿ ಇಲಾಖೆ ಅಧಿಕಾರಿಗಳು ನನ್ನ ಮನೆಗೆ ಬಂದು ತಪಾಸಣೆ ಮಾಡಿದ್ದರು, 13.43 ಕೋಟಿ ರೂಪಾಯಿ ತೆರಿಗೆ ಬಾಕಿ ಇದೆ ಎಂದು ಮೌಲ್ಯಮಾಪನ ಮಾಡಿ ಹೋಗಿದ್ದರು. 

ಐಟಿ ಇಲಾಖೆ ಅಧಿಕಾರಿಗಳು ನಮ್ಮ ಮನೆಗೆ ಬಂದು ಶೋಧಿಸಿ ಒಟ್ಟು 13.43 ಕೋಟಿ ರೂ. ಐಟಿ ಬಾಕಿ ಇದೆ ಎಂದು ಮೌಲ್ಯಮಾಪನ ಮಾಡಿದ್ದರು. ನಾನು ಐಟಿ ಆಯುಕ್ತರ ಮುಂದೆ ಮೇಲ್ಮನವಿ ಸಲ್ಲಿಸಿದ್ದು ಇನ್ನೂ ವಿಚಾರಣೆಗೆ ಬಂದಿಲ್ಲ ಎಂದು ಶರೀಫ್ ತಮ್ಮ ಅಫಿಡವಿಟ್‌ನಲ್ಲಿ ಘೋಷಿಸಿದ್ದಾರೆ. 

ಮೈಸೂರಿನ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಅವರು ಬಿಎಂಡಬ್ಲ್ಯು, ಆಡಿ, ಟೊಯೊಟಾ ಫಾರ್ಚುನರ್ ಸೇರಿದಂತೆ ಎಂಟು ಅತ್ಯಾಧುನಿಕ ಕಾರುಗಳನ್ನು ಹೊಂದಿದ್ದಾರೆ. ಮಂಡ್ಯದ ಬಿಜೆಪಿ ಅಭ್ಯರ್ಥಿ ಬಿ ಸಿ ಮಂಜು ಅವರು ಕಾರು, ಲಾರಿ, ಜೀಪು, ದ್ವಿಚಕ್ರ ವಾಹನ ಸೇರಿದಂತೆ 50 ವಾಹನಗಳನ್ನು ಹೊಂದಿದ್ದಾರೆ.

ಯಾರ್ಯಾರ ಬಳಿ ಎಷ್ಟೆಷ್ಟು ಆಸ್ತಿ ಮೌಲ್ಯ?:

ಯೂಸುಫ್ ಶರೀಫ್ ಕಾಂಗ್ರೆಸ್ (ಬೆಂಗಳೂರು) 1741 ಕೋಟಿ ರೂ

ಬಿ ಸೋಮಶೇಖರ್ ಕಾಂಗ್ರೆಸ್ (ಚಿತ್ರದುರ್ಗ) 116.1 ಕೋಟಿ ರೂ

ಪ್ರದೀಪ ಶೆಟ್ಟರ್ ಬಿಜೆಪಿ (ಧಾರವಾಡ) 88.91 ಕೋಟಿ ರೂ

ಸೂರಜ್ ರೇವಣ್ಣ ಜೆಡಿಎಸ್ (ಹಾಸನ) 61.6 ಕೋಟಿ ರೂ

ಡಾ.ಬಿ.ಜಿ.ಪಾಟೀಲ ಬಿಜೆಪಿ (ಕಲಬುರಗಿ) 51.6 ಕೋಟಿ ರೂ

ಎನ್ ಅಪ್ಪಾಜಿಗೌಡ ಜೆಡಿಎಸ್ (ಮಂಡ್ಯ) 37.45 ಕೋಟಿ ರೂ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com