ಆಪತ್ತು ತಂದ ಗುಸು-ಗುಸು ಮಾತು: ವಿ.ಎಸ್. ಉಗ್ರಪ್ಪಗೆ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿಯಿಂದ ನೊಟೀಸ್!

ಕೆಪಿಸಿಸಿ ಕಚೇರಿಯ ವೇದಿಕೆಯಲ್ಲಿ ಸುದ್ದಿಗೋಷ್ಠಿಗೆ ಮುನ್ನ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಅನಧಿಕೃತವಾಗಿ ಮಾತನಾಡಿದ್ದ ಗುಸುಗುಸು ಮಾತು ತಲ್ಲಣ ಉಂಟುಮಾಡಿದ್ದು ವಿ ಎಸ್ ಉಗ್ರಪ್ಪನವರನ್ನು ಸಂಕಷ್ಟಕ್ಕೀಡು ಮಾಡಿದೆ.
ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪಗೆ ನೊಟೀಸ್
ಕಾಂಗ್ರೆಸ್ ನಾಯಕ ವಿ ಎಸ್ ಉಗ್ರಪ್ಪಗೆ ನೊಟೀಸ್

ಬೆಂಗಳೂರು: ಕೆಪಿಸಿಸಿ ಕಚೇರಿಯ ವೇದಿಕೆಯಲ್ಲಿ ಸುದ್ದಿಗೋಷ್ಠಿಗೆ ಮುನ್ನ ಕಾಂಗ್ರೆಸ್ ಮಾಧ್ಯಮ ಸಂಯೋಜಕ ಸಲೀಂ ಜೊತೆ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿ ಅನಧಿಕೃತವಾಗಿ ಮಾತನಾಡಿದ್ದ ಗುಸುಗುಸು ಮಾತು ತಲ್ಲಣ ಉಂಟುಮಾಡಿದ್ದು ವಿ ಎಸ್ ಉಗ್ರಪ್ಪನವರನ್ನು ಸಂಕಷ್ಟಕ್ಕೀಡು ಮಾಡಿದೆ.

ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ವಿ ಎಸ್ ಉಗ್ರಪ್ಪನವರಿಗೆ ಹೇಳಿಕೆಯ ಕಾರಣ ಕೇಳಿ ನೊಟೀಸ್ ಜಾರಿ ಮಾಡಿದೆ. ಕೆಪಿಸಿಸಿ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ರೆಹಮಾನ್ ಖಾನ್ ಅವರು ವಿ ಎಸ್ ಉಗ್ರಪ್ಪನವರಿಗೆ ನೊಟೀಸ್ ಕಳುಹಿಸಿದ್ದಾರೆ.

ಡಿ ಕೆ ಶಿವಕುಮಾರ್ ಡೀಲ್ ಗಿರಾಕಿ, ಕೋಟಿ ಕೋಟಿ ಡೀಲ್ ನಡೆಸುತ್ತಾರೆ, ಅವರ ಜೊತೆ ಇರುವ ಹುಡುಗರೇ 50ರಿಂದ 100 ಕೋಟಿ ರೂಪಾಯಿಗಳಷ್ಟು ಅಕ್ರಮ ಹಣ ಗಳಿಸಿದ್ದಾರೆಂದರೆ ಇನ್ನು ಇವರು ಎಷ್ಟು ಭ್ರಷ್ಟ ಇರಬೇಕು, ಕೆದಕಿದರೆ ಎಲ್ಲ ಆಚೆಗೆ ಬರುತ್ತೆ ಎಂದು ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮ ಗೋಷ್ಠಿಗೆ ಮುನ್ನ ಅನಧಿಕೃತವಾಗಿ ಸಲೀಂ ವಿ ಎಸ್ ಉಗ್ರಪ್ಪನವರ ಕಿವಿಯಲ್ಲಿ ಹೇಳಿದ್ದರು. ಅದಕ್ಕೆ ವಿ ಎಸ್ ಉಗ್ರಪ್ಪನವರು ಅವರನ್ನು ಅಧ್ಯಕ್ಷ ಮಾಡಲು ಎಷ್ಟು ಕಷ್ಟಪಟ್ಟಿದ್ದೆವು ಎಂದು ಸಲೀಂಗೆ ಹೇಳಿದರು.

ಇದು ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲು ಸೇರಿದಂತೆ ಬಿಜೆಪಿ ನಾಯಕರು ಹಿಗ್ಗಾಮುಗ್ಗ ಡಿ ಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಭ್ರಷ್ಟ ಕಾಂಗ್ರೆಸ್ ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಸರಣಿ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com