ಜೆಡಿಎಸ್ ಜಾತ್ಯತೀತ ಪಕ್ಷವಲ್ಲ, ಕೋಮುವಾದಿ ಪಕ್ಷ: ಮಾಜಿ ಸಿಎಂ ಸಿದ್ದರಾಮಯ್ಯ

ರಾಜ್ಯದ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣಾ ಸಮರದಲ್ಲಿ ಜೆಡಿ(ಎಸ್) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ...
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
Updated on

ಬೆಂಗಳೂರು: ರಾಜ್ಯದ ಎರಡು ವಿಧಾನಸಭಾ ಸ್ಥಾನಗಳಿಗೆ ನಡೆಯಲಿರುವ ಉಪಚುನಾವಣಾ ಸಮರದಲ್ಲಿ ಜೆಡಿ(ಎಸ್) ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ನೇತೃತ್ವದ ಪಕ್ಷ ಜಾತ್ಯತೀತ ಪಕ್ಷ ಅಲ್ಲ. ಅದು ಕೋಮುವಾದಿ ಪಕ್ಷ ಎಂದು ಗುರುವಾರ ಆರೋಪಿಸಿದ್ದಾರೆ.

"ಜೆಡಿ(ಎಸ್) ಹಿಂದೆ ಬಿಜೆಪಿ ಜೊತೆ ಸರ್ಕಾರವನ್ನು ರಚಿಸಿತ್ತು(2006 ರಲ್ಲಿ), ಅವರು ಮೈಸೂರು ಕಾರ್ಪೋರೇಶನ್ ನಲ್ಲಿ ಬಿಜೆಪಿ ಜೊತೆ ಕೈಜೋಡಿಸಿದ್ದಾರೆ. ಜೆಡಿ(ಎಸ್) ಯಾವ ಬಲವಾದ ಸಿದ್ಧಾಂತವನ್ನು ಹೊಂದಿದೆ? ಅವರು ಮುಸ್ಲಿಂ ಮತಗಳಿಗಾಗಿ ಯಾವತ್ತೂ ಅಲ್ಪಸಂಖ್ಯಾತರನ್ನು ಸಮಾಧಾನಪಡಿಸಲು ಪ್ರಯತ್ನಿಸಬಹುದು. ಆದರೆ ಮತದಾರರು ಬುದ್ಧಿವಂತರು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಜೆಡಿ(ಎಸ್) ಬಿಜೆಪಿಯ ನಡುವೆ "ಒಳ ಒಪ್ಪಂದ" ಇದೆ. ಅದಕ್ಕಾಗಿಯೇ ಅವರು ಉಪ ಚುನಾವಣೆಗೆ ಎದುರಿಸುತ್ತಿರುವ ಹಾನಗಲ್ ಮತ್ತು ಸಿಂದಗಿ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗಳನ್ನು ನಿಲ್ಲಿಸಿದ್ದಾರೆ. 

"ಬಿಜೆಪಿಯೊಂದಿಗೆ ಸರ್ಕಾರ ರಚಿಸಿದರೂ ಜೆಡಿ(ಎಸ್) ಜಾತ್ಯತೀತವಾಗುತ್ತದೆಯೇ?... ನಾನು ಜೆಡಿ(ಎಸ್) ಜಾತ್ಯತೀತ ಪಕ್ಷವಲ್ಲ. ಅದು ಪ್ರಾದೇಶಿಕ ಪಕ್ಷ, ಆದರೆ ಜಾತ್ಯತೀತವಲ್ಲ ಎಂದು ಹೇಳಬಹುದು. ಅವರ ಪಕ್ಷದ ಹೆಸರಲ್ಲಿ ಮಾತ್ರ ಜಾತ್ಯತೀತತೆ ಇದೆ. ಆದರೆ ನಡವಳಿಕೆಯಲ್ಲಿ ಅವರು ಜಾತ್ಯತೀತರಲ್ಲ, ಅವರು ಕೋಮುವಾದಿಗಳು”ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿದ ಜೆಡಿ(ಎಸ್) ನಾಯಕ ಎಚ್ ಡಿ ಕುಮಾರಸ್ವಾಮಿ, ತಮ್ಮ ಪಕ್ಷಕ್ಕೆ ಸಿದ್ದರಾಮಯ್ಯನವರು ಜಾತ್ಯತೀತ ಎಂದು ಯಾವುದೇ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ. ಏಕೆಂದರೆ ಅವರು ತಮ್ಮ ಬೇರುಗಳನ್ನು ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com