ಹಾನಗಲ್ ಉಪಚುನಾವಣೆ: ಮುಸ್ಲಿಮರು ಮತ್ತು ಗಂಗಾ ಮತಸ್ಥ ಮತದಾರರೇ ಅಭ್ಯರ್ಥಿಗಳ ಭವಿಷ್ಯ ನಿರ್ಣಾಯಕರು!

ಅಕ್ಟೋಬರ್ 30 ರಂದು ನಡೆಯಲಿರುವ ಹಾನಗಲ್ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
ಹಾನಗಲ್ ನಲ್ಲಿ ಸಿದ್ದರಾಮಯ್ಯ ಪ್ರಚಾರ
ಹಾನಗಲ್ ನಲ್ಲಿ ಸಿದ್ದರಾಮಯ್ಯ ಪ್ರಚಾರ

ಬೆಂಗಳೂರು: ಅಕ್ಟೋಬರ್ 30 ರಂದು ನಡೆಯಲಿರುವ ಹಾನಗಲ್ ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಮುಸ್ಲಿಂ ಸಮುದಾಯದ ಮತಗಳ ವಿಭಜನೆ ಮತ್ತು ಹಿಂದುಳಿದ ವರ್ಗವಾದ ಗಂಗಾಮತಸ್ಥರು ನಿರ್ಣಾಯಕರಾಗಿದ್ದಾರೆ. 

2 ಲಕ್ಷಕ್ಕೂ ಅಧಿಕ ಮತದಾರರಿರುವ ಈ ಕ್ಷೇತ್ರದಲ್ಲಿ ಮುಸ್ಲಿಮರು ಸುಮಾರು 35,000 ಮತಗಳನ್ನು ಹೊಂದಿದ್ದಾರೆ,  ಜೆಡಿಎಸ್‌ನಿಂದ ನಿಯಾಜ್ ಶೇಕ್ ಮತ್ತು ನಜೀರ್ ಅಹ್ಮದ್ ಸವಣೂರ್ (ಸ್ವತಂತ್ರ)   ಸಮುದಾಯದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಎರಡು ಅಭ್ಯರ್ಥಿಗಳು ಮತ್ತು ಕಾಂಗ್ರೆಸ್ ನಡುವೆ ಮತಗಳನ್ನು ಮೂರು ರೀತಿಯಲ್ಲಿ ವಿಭಜಿಸಲಾಗುವುದು. 

ಹಾನಗಲ್‌ ಪುರಸಭೆ ಮಾಜಿ ಅಧ್ಯಕ್ಷ ನಜೀರ್‌ ಅವರು ನಿಯಾಜ್‌ ಅವರಿಗಿಂತ ಹೆಚ್ಚು ಮತ ಗಳಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎಂದು ಸಮುದಾಯದ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.  ನಾಮಪತ್ರವನ್ನು ಹಿಂತೆಗೆದುಕೊಳ್ಳುವಂತೆ ನಜೀರ್ ಮನವೊಲಿಸಲು ಕಾಂಗ್ರೆಸ್ ನಡೆಸಿದ ಪ್ರಯತ್ನ ವ್ಯರ್ಥವಾಯಿತು.

25,000 ಮತಗಳನ್ನು ಹೊಂದಿರುವ ಹಿಂದುಳಿದ  ವರ್ಗಕ್ಕೆ ಸೇರಿರುವ ‘ಗಂಗಾಮತ’ ಸಮುದಾಯಕ್ಕೂ ಸಾಕಷ್ಟು ಹಿಡಿತ ಹೊಂದಿದೆ. 2018 ರ ವಿಧಾನಸಭಾ ಚುನಾವಣೆಯಲ್ಲಿ, ಸಮುದಾಯದ ನಾಯಕ ಚಂದ್ರಪ್ಪ ಜಲಗಾರ ಸ್ವತಂತ್ರವಾಗಿ ಸ್ಪರ್ಧಿಸಿ 4,000 ಮತಗಳನ್ನು ಪಡೆದಿದ್ದರು.

ಆದರೆ, ಈ ಬಾರಿ ಶ್ರೀನಿವಾಸ್ ಮಾನೆ ಜಲಗಾರ ಅವರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂತ್ರಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಗಂಗಮತಸ್ಥ ಸಮುದಾಯದ ಎಂಎಲ್ ಸಿ ಎನ್ ರವಿಕುಮಾರ್ ಅವರನ್ನು ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಶಿವರಾಜ್ ಸಜ್ಜನರ್ ಪರ ಪ್ರಚಾರ ಮಾಡಲು ತೊಡಗಿಸಿದ್ದಾರೆ.    

ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಅಂಬಿಗರ ಚೌಡಯ್ಯ ಪೀಠಕ್ಕೆ ದೊಡ್ಡ ಮೊತ್ತದ ಹಣವನ್ನು ಮಂಜೂರು ಮಾಡಿದರು, ಅದು ಸಜ್ಜನ್ ಗೆಲುವಿಗೆ ಸಹಾಯ ಮಾಡುತ್ತದೆ" ಎಂದು  ಸಮುದಾಯದ ಮತ್ತೊಬ್ಬ ಮುಖಂಡ ಹಣ್ಣಪ್ಪ ಹೇಳಿದ್ದಾರೆ.  ಹೀಗಿದ್ದರೂ ಮತಗಳು ಮೂರು ಪಕ್ಷಗಳ ನಡುವೆ ವಿಭಜನೆಯಾಗಲಿಗದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ನಿರೀಕ್ಷೆಯಂತೆ ಲಿಂಗಾಯತ ಸಮುದಾಯ ಬಿಜೆಪಿ ಜತೆ ಹೋಗುವ ಸಾಧ್ಯತೆ ಇದೆ. ಪಂಚಮಶಾಲಿಗಳ 33,000 ಮತಗಳನ್ನು ಗಳಿಸಲು ಮಧ್ಯಮ ಮತ್ತು ಬೃಹತ್ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರನ್ನು ನಿಯೋಜಿಸಲಾಗಿದೆ.  5,000  ಮತದಾರರಿರುವ ನೊಳಂಬ ಲಿಂಗಾಯತರನ್ನು ಓಲೈಸಲು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆಸಿ ಮಾಧುಸ್ವಾಮಿ ಅವರಿಗೆ ಹೊಣೆಗಾರಿ ನೀಡಲಾಗಿದೆ. ಶಿವರಾಜ್ ಸಜ್ಜನರ್ ಸ್ವತಃ 5,000 ಗಾಣಿಗ ಲಿಂಗಾಯತರನ್ನು ಮನವೊಲಿಸಿದ್ದಾರ. ಸಿಎಂ  ಬೊಮ್ಮಾಯಿ 10,000 ಕ್ಕೂ ಹೆಚ್ಚು ಸದಾ ಲಿಂಗಾಯತರನ್ನು ತಮ್ಮತ್ತ ಸೆಳೆಯಲು ಮುಂದಾಗಿದ್ದಾರೆ.

28,000 ಪರಿಶಿಷ್ಟ ಜಾತಿ ಮತಗಳು ಅಭ್ಯರ್ಥಿಗಳ ನಡುವೆ ವಿಭಜನೆಯಾಗಬಹುದಾದರೂ, ಗೋವಿಂದ್ ಕಾರಜೋಳ ಅವರ ಪರಿಣಾಮಕಾರಿ ಪ್ರಚಾರದಿಂದ ಹೆಚ್ಚಿನ ಭಾಗವು ಬಿಜೆಪಿಯೊಂದಿಗೆ ಹೋಗುವ ಸಾಧ್ಯತೆಯಿದೆ. ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರ ಕಾರಣದಿಂದ ಕೇವಲ 8,000 ಕುರುಬ ಮತದಾರರು ಕಾಂಗ್ರೆಸ್ ಪರವಾಗಿ ನಿಲ್ಲುವ ನಿರೀಕ್ಷೆಯಿದೆ ಎಂದು ಹೇಳಲಾಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com