ನಂಬಿದ ನಾಯಕರ ವಿಶ್ವಾಸ ದ್ರೋಹದ ನಡುವೆಯೂ ಜೆಡಿಎಸ್ ಕಟ್ಟುತ್ತಾ ಬಂದಿದ್ದೇವೆ: ಕುಮಾರಸ್ವಾಮಿ ಕಣ್ಣೀರು

2023ರ ಚುನಾವಣೆಗೆ ಮುನ್ನ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖವನ್ನು ಪರಿಚಯಿಸುವ ಮೂಲಕ ರಣತಂತ್ರದ ಹೋರಾಟ ನಡೆಸುತ್ತಿರುವ ಜೆಡಿಎಸ್ ನಾಯಕತ್ವ ಸೋಮವಾರ ಪ್ರಬಲ ಸಂದೇಶ ರವಾನಿಸಲು ಯತ್ನಿಸಿದೆ. 
ಎಚ್.ಡಿ ಕುಮಾರಸ್ವಾಮಿ
ಎಚ್.ಡಿ ಕುಮಾರಸ್ವಾಮಿ

ತುಮಕೂರು: 2023ರ ಚುನಾವಣೆಗೆ ಮುನ್ನ ಗುಬ್ಬಿ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಮುಖವನ್ನು ಪರಿಚಯಿಸುವ ಮೂಲಕ ರಣತಂತ್ರದ ಹೋರಾಟ ನಡೆಸುತ್ತಿರುವ ಜೆಡಿಎಸ್ ನಾಯಕತ್ವ ಸೋಮವಾರ ಪ್ರಬಲ ಸಂದೇಶ ರವಾನಿಸಲು ಯತ್ನಿಸಿದೆ. 

ಸೋಮವಾರ ನಡೆದ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಹಾಲಿ ಶಾಸಕ ಎಸ್‌ಆರ್‌ ಶ್ರೀನಿವಾಸ್‌ ಅವರನ್ನು ಬಿಟ್ಟು ಬಿಎಸ್‌ ನಾಗರಾಜು ಅವರನ್ನು ಪಕ್ಷದ ಅಭ್ಯರ್ಥಿ ಎಂದು ಪರಿಚಯಿಸಿದರು.

ಉತ್ತರ ಕರ್ನಾಟಕದ ಹಾನಗಲ್ ಮತ್ತು ಸಿಂದಗಿ ವಿಧಾನಸಭಾ ಉಪಚುನಾವಣೆಯ ಪ್ರಚಾರದಲ್ಲಿ ನಿರತರಾಗಿದ್ದ ಕುಮಾರಸ್ವಾಮಿ ಅವರು ಪಕ್ಷದ ಭದ್ರಕೋಟೆಯಾಗಿರುವ ಹಳೆ ಮೈಸೂರು ಭಾಗದಲ್ಲಿ ಪಕ್ಷದ ರ್ಯಾಲಿಯಲ್ಲಿ ಭಾಗವಹಿಸಲು ಬಿಡುವು ಮಾಡಿಕೊಂಡರು. ಪಕ್ಷದ ವರಿಷ್ಠ ಎಚ್‌ಡಿ ದೇವೇಗೌಡರು ಕೂಡ ಚುನಾವಣಾ ಪ್ರಚಾರದಿಂದ ವಾಪಸಾಗಿ ತುಮಕೂರು ವಿಶ್ವವಿದ್ಯಾನಿಲಯ (ಟಿಯು) ಅತಿಥಿ ಗೃಹದಲ್ಲಿ ವಿಶ್ರಾಂತಿ ಪಡೆದು ಗುಬ್ಬಿಯಲ್ಲಿನ ಬೆಳವಣಿಗೆಗಳ ಅವಲೋಕನ ನಡೆಸಿದರು. ಇಬ್ಬರೂ ಸಂಜೆಯ ನಂತರ ಚಾರ್ಟರ್ಡ್ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಹಿಂತಿರುಗಿದರು.

ಲೋಕಸಭೆ ಚುನಾವಣೆಯಲ್ಲಿ ಎಚ್‌.ಡಿ. ದೇವೇಗೌಡರ ಸೋಲಿಗೆ ಗುಬ್ಬಿ ಶಾಸಕ ಎಸ್‌.ಆರ್‌. ಶ್ರೀನಿವಾಸ್‌ ಅವರೇ ಕಾರಣ ಎಂದು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ತುಮಕೂರಿನಲ್ಲಿ ದೇವೇಗೌಡರಲು ಸೋಲಲು ಎಸ್‌.ಆರ್‌. ಶ್ರೀನಿವಾಸ್‌ ಅವರೇ ಕಾರಣ. ಯಾರ ಯಾರ ಜೊತೆಗೆ ಸೇರಿ ದೇವೇಗೌಡರನ್ನು ರಾಜಕೀಯವಾಗಿ ಮುಗಿಸಲು ಮಧ್ಯರಾತ್ರಿ ಚಿತಾವಣೆ ಮಾಡಿದ್ದಾರೆ ಅನ್ನೋದು ನಮ್ಮ ಕಾರ್ಯಕರ್ತರಿಗೆ ಗೊತ್ತು. ನಾನೇ ಅವರನ್ನು ಹೋಗಿ ಅಂತ ಹೇಳಿಲ್ಲ. ಅವರೇ ಹೋಗುವ ತೀರ್ಮಾನ ಮಾಡಿದ್ದಾರೆ. ನಮ್ಮಿಂದ ತಪ್ಪಾಗಿದೆ ಎಂದು ತೋರಿಸಲು ಶತಪ್ರಯತ್ನ ಮಾಡುತ್ತಿದ್ದಾರೆ.‌ ಅವರ ಬಗ್ಗೆ ನಾನು ಎಂದೂ ಮಾತನಾಡಿಲ್ಲ. ನನ್ನಿಂದ ಅವರಿಗೆ ಯಾವುದೇ ತೊಂದರೆಯಿಲ್ಲ. ಅವರು ಇರ್ತೀನಿ ಅಂದರೆ ಸಂತೋಷ ಎಂದರು.

ಮಾಜಿ ಸಚಿವ ದಿವಂಗತ ಬಿ.ಸತ್ಯನಾರಾಯಣ ಅವರ ಹಿರಿತನವನ್ನು ಕಡೆಗಣಿಸಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಶ್ರೀನಿವಾಸ್ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡಿದ್ದೇನೆ ಎಂದು  ಹೇಳಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ದೇವೇಗೌಡರನ್ನು ಸೋಲಿಸಲು ಶ್ರೀನಿವಾಸ್ ಬಂಡಾಯ ಕಾಂಗ್ರೆಸ್ ನಾಯಕ ಕೆ ಎನ್ ರಾಜಣ್ಣ ಅವರೊಂದಿಗೆ ಕೈಜೋಡಿಸಿದ್ದಾರೆ ಎಂದು ಅವರು ಆರೋಪಿಸಿದರು.

ನನ್ನ ಹೆತ್ತವರ ಆಶೀರ್ವಾದ ಇಲ್ಲದಿದ್ದರೆ ನಾನು ಇಸ್ರೇಲ್ ಪ್ರವಾಸದ ಸಮಯದಲ್ಲಿ ಸಾಯುತ್ತಿದ್ದೆ. ನನ್ನ ಆರೋಗ್ಯವನ್ನು ಕಡೆಗಣಿಸಿ ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿದ್ದೇನೆ ಮತ್ತು ದೇವೇಗೌಡರು ತಮ್ಮ ವಯಸ್ಸಿನಲ್ಲೂ ಶ್ರಮಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಭಾವುಕರಾಗಿ ನುಡಿದರು.

ಕಳೆದ ಮೂರು ವರ್ಷಗಳಿಂದ ಇಲ್ಲಿನ ಸ್ಥಳೀಯ ನಾಯಕರು ಪ್ರತಿದಿನ ಮಾಧ್ಯಮಗಳ‌ ಎದುರು ಏನೇನೋ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆಗಳನ್ನು ನಾನು ಗಮನಿಸಿದ್ದೇನೆ. ನಮ್ಮ ಇಮೇಜ್ ಕಡಿಮೆಯಾಗಿದೆ, ನಮ್ಮ ಜೊತೆಗೆ ಇದ್ದರೆ ಅವರಿಗೆ ಉಪಯೋಗ ಆಗಲ್ಲ ಅನ್ನೋ ಹೇಳಿಕೆ ಗಮನಿಸಿದ್ದೇನೆ. ಈ ಮೂಲಕ ಗೊಂದಲಗಳನ್ನು ಸೃಷ್ಟಿ ಮಾಡಿಕೊಂಡಿದ್ದಾರೆ. ಈಗ ಗೊಂದಲಗಳನ್ನು ಬಗೆಹರಿಸಿ ಅಂತ ಕೇಳಿಕೊಂಡಿದ್ದಾರೆ. ನಮ್ಮಿಂದ ಯಾವುದೇ ಗೊಂದಲ ಆಗಿಲ್ಲ ಎಂದು ಪರೋಕ್ಷವಾಗಿ ಎಸ್‌. ಆರ್‌. ಶ್ರೀನಿವಾಸ್‌ ಕುರಿತು ಮಾತನಾಡಿದ್ದಾರೆ.

ರಾಜಕಾರಣ ಮಾಡುವುದಾದರೆ ನೇರವಾಗಿ ಮಾಡಲಿ, ಹಿಂದೊಂದು ಮುದೊಂದು ಮಾತನಾಡುವುದು ಬೇಡ. ನನ್ನಿಂದ ಯಾರಿಗೂ ತಪ್ಪಾಗುವಂತೆ ನಡೆದುಕೊಂಡಿಲ್ಲ. ಎಲ್ಲರನ್ನು ಪ್ರೀತಿಯಿಂದ ನೋಡಿದ್ದೇನೆ. ಒಂದು ವಾರ ಜೆಡಿಎಸ್ ಕಾರ್ಯಗಾರ ಮಾಡಿ, ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಕರೆದಿದ್ದೆವು. ಆದರೆ, ಅವರು ಬರಲಿಲ್ಲ. ಇಲ್ಲಿ ಬೇರೆ ಬೇರೆ ರಾಜಕಾರಣ ನಡೆಯುತ್ತಿದೆ. ನಾವು ಅವರ ಭೇಟಿಯ ದಿನಾಂಕವನ್ನು ಮುಂದೂಡಿಲ್ಲ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com