'ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ?'
ಹಾನಗಲ್ -ಸಿಂದಗಿ ಉಪಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ, ಇದೇ ವೇಳೆ ಆರೋಪ, ಪ್ರತ್ಯಾರೋಪಗಳ ಜೊತೆಗೆ ಜಾತಿ ನಿಂದನೆಯು ಪ್ರಮುಖ ಅಸ್ತ್ರವಾಗಿದೆ.
Published: 27th October 2021 08:26 AM | Last Updated: 27th October 2021 01:36 PM | A+A A-

ಸಿದ್ದರಾಮಯ್ಯ ಮತ್ತು ರೋಷಮ್ ಬೇಗ್
ಬೆಂಗಳೂರು: ಹಾನಗಲ್ -ಸಿಂದಗಿ ಉಪಚುನಾವಣೆಗೆ ದಿನಾಂಕ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ಪ್ರಚಾರದ ಅಬ್ಬರ ಜೋರಾಗಿದೆ, ಇದೇ ವೇಳೆ ಆರೋಪ, ಪ್ರತ್ಯಾರೋಪಗಳ ಜೊತೆಗೆ ಜಾತಿ ನಿಂದನೆಯು ಪ್ರಮುಖ ಅಸ್ತ್ರವಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹರಿಹಾಯ್ದಿದ್ದಾರೆ. ಕಂಬಳಿ ಹಾಕುವ ಸಂಬಂಧ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ಸಿಿಟಿ ರವಿ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಗೆ ನನ್ನನ್ನು ಕಂಡರೆ ಭಯ, ರಾಜಕೀಯವಾಗಿ ಮುಗಿಸಲು ನನ್ನ ವಿರುದ್ಧ ಪಿತೂರಿ: ಸಿದ್ದರಾಮಯ್ಯ
ಈ ಸಂಬಂಧ ಟ್ವೀಟ್ ಮಾಡಿರುವ ಅವರು , ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? ಎಂದು ಪ್ರಶ್ನಿಸಿದ್ದಾರೆ.
ಕಂಬಳಿ ಹಾಕಲು ಕುರುಬ ಜಾತಿಯವರೆ ಆಗಬೇಕು ಅನ್ನುವ ನಿಮ್ಮ ವಾದದ ಪ್ರಕಾರ
— C T Ravi
ಈ ಟೊಪ್ಪಿ ಹಾಕಲು ಯಾರಿಗೆ ಹುಟ್ಟಿರಬೇಕು ಮಾಜಿ ಮುಖ್ಯಮಂತ್ರಿಗಳೆ? pic.twitter.com/2VAD7qL5xJ