ನ್ಯಾಚುರೋಪತಿ ಚಿಕಿತ್ಸೆ ಮೂಲಕ ಜೀವನಶೈಲಿ ಬದಲಿಸಿಕೊಂಡು ಹೊಸ ಹುರುಪಿನಲ್ಲಿ ಮರಳಿದ ಸಿದ್ದರಾಮಯ್ಯ!

ಕಳೆದ 10 ದಿನಗಳಿಂದ ಸಾರ್ವಜನಿಕ ಜೀವನದಿಂದ ದೂರ ಉಳಿದು, ಬೆಂಗಳೂರಿನ ಜಿಂದಾಲ್ ಪ್ರಾಕೃತಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೊಸ ಹುರುಪಿನಲ್ಲಿ ವಾಪಾಸಾಗಿದ್ದಾರೆ.
ಸಿದ್ದರಾಮಯ್ಯ
ಸಿದ್ದರಾಮಯ್ಯ

ಮೈಸೂರು: ಕಳೆದ 10 ದಿನಗಳಿಂದ ಸಾರ್ವಜನಿಕ ಜೀವನದಿಂದ ದೂರ ಉಳಿದು, ಬೆಂಗಳೂರಿನ ಜಿಂದಾಲ್ ಪ್ರಾಕೃತಿಕ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೊಸ ಹುರುಪಿನಲ್ಲಿ ವಾಪಾಸಾಗಿದ್ದಾರೆ.

ಮುಂಬರುವ ಚುನಾವಣೆಯಲ್ಲಿ ಹೋರಾಟಕ್ಕೆ ಸಿದ್ಧವಾಗುತ್ತಿರುವ ಸಿದ್ದರಾಮಯ್ಯ ಕೆಲವು ಕೆಜಿ ತೂಕ ಕಳೆದುಕೊಂಡು ಸಜ್ಜಾಗುತ್ತಿದ್ದಾರೆ. ನನ್ನ ಶುಗರ್ ಲೆವೆಲ್ ನಿಯಂತ್ರಣದಲ್ಲಿರಲಿಲ್ಲ, ಜೊತೆಗೆ ಬೊಜ್ಜಿನ ಸಮಸ್ಯೆ ಅಧಿಕವಾಗಿತ್ತು, ಹೀಗಾಗಿ ನಾನು ವಿರಾಮ ತೆಗೆದುಕೊಳ್ಳಲು ಬಯಸಿದ್ದೆ ಎಂದು ಅಹಿಂದ ನಾಯಕ್ ಸಿದ್ದರಾಮಯ್ಯ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ನಾನು ಬುಧವಾರ ಮನೆಗೆ ಮರಳಿದೆ. ಈ ಸಂಸ್ಥೆಯಲ್ಲಿ ಉಳಿದುಕೊಳ್ಳುವುದು ಒಂದು ಒಳ್ಳೆಯ ಪ್ರಪಂಚವನ್ನು ನೋಡಿದಂತೆ ತೋರುತ್ತದೆ, ಅವರು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಗಳಿಗೆ ಮುಂಚಿತವಾಗಿ ನನಗೆ ಪ್ರೆಶ್ ಆಗಿ ಎನರ್ಜಿಟಿಕ್ ಭಾವನೆ ಉಂಟಾಗುತ್ತಿದೆ ಎಂದು ಹೇಳಿದರು.

ಜಿಂದಾಲ್ ಸಂಸ್ಥೆಯಲ್ಲಿ, ರಾಗಿ, ಬಿಸಿಬೇಳೆ ಭಾತ್, ಮೊಳಕೆಕಾಳು, ಪಪ್ಪಾಯಿ ಮತ್ತು ಗ್ರೀನ್ ಟೀ ಮುಂತಾದ ಕಟ್ಟುನಿಟ್ಟಿನ ಆಹಾರ ನೀಡಿದರು. "ವೈದ್ಯರು ಸೂಚಿಸಿದ ಆಹಾರವನ್ನು ನಾನು ಅನುಸರಿಸಿದ್ದೇನೆ. ಆದರೆ, ವಿಐಪಿಯಾಗಿದ್ದರಿಂದ ನನಗೆ ಹೆಚ್ಚಿನ  ಹಣ್ಣುಗಳು, ಮೊಳಕೆಕಾಳು ಮತ್ತು ಜ್ಯೂಸ್‌ ಪಡೆದೆ ಎಂದು ಅವರು ನಗುತ್ತಾ ಹೇಳಿದರು. ನಿತ್ಯ ಬೆಳಗಿನ ವಾಕಿಂಗ್ ಮಾಡುವಂತೆ, ವರ್ಕೌಟ್ ನಿಯಮವನ್ನೂ ಹಾಕಲಾಯಿತು. ಆದರೆ, ಸಾರ್ವಜನಿಕ ಜೀವನದಲ್ಲಿ ಮತ್ತು ಆಗಾಗ್ಗೆ ರಾಜ್ಯದಾದ್ಯಂತ ಪ್ರವಾಸ ಮಾಡುತ್ತಿದ್ದರಿಂದ, ಜೀವನಶೈಲಿಯ ಬದಲಾವಣೆಗಳಿಗೆ ಅಂಟಿಕೊಳ್ಳುವುದು ಕಷ್ಟವಾಗಬಹುದು ಎಂದು ಅವರು ಭಾವಿಸಿದರು.

ತಮ್ಮ ಪ್ರವಾಸದಲ್ಲಿ ನಾಟಿ ಕೋಳಿ ಸಾರು ಮತ್ತು ರಾಗಿಮುದ್ದೆಯನ್ನು ಅತಿ ಹೆಚ್ಚು ಇಷ್ಟ ಪಟ್ಟು ಸವಿಯುತ್ತಿದ್ದ ಸಿದ್ದರಾಮಯ್ಯ ಇನ್ನು ಮುಂದೆ ಜಿಂದಾಲ್ ಸಂಸ್ಥೆಯಲ್ಲಿ ಸೂಚಿಸಿದ ಆಹಾರ ಕ್ರಮವನ್ನು ಅನುಸರಿಸುವುದಾಗಿ ಹೇಳಿದ್ದಾರೆ. ಬುಧವಾರ ಸಿದ್ದರಾಮಯ್ಯ ಅವರ ಜೊತೆಗಿದ್ದ ಅನೇಕ ಬೆಂಬಲಿಗರು ಕೂಡ ಹಣ್ಣುಗಳ ರುಚಿ ನೋಡಿದರು. ಈ ಹಿಂದೆ ಶ್ರೀ ಧರ್ಮಸ್ಥಳ ನ್ಯಾಚುರೋಪತಿ ಆಸ್ಪತ್ರೆಯಲ್ಲಿ ನ್ಯಾಚುರೋಪತಿ ಚಿಕಿತ್ಸೆಗೆ ಒಳಗಾಗಿದ್ದ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಈ ಬಾರಿ ಬೆಂಗಳೂರು ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com