ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಇಲ್ಲ, ನಾಯಕತ್ವ ವಹಿಸಿಕೊಳ್ಳುವುದಿಲ್ಲ: ವರಸೆ ಬದಲಿಸಿದ ಎಂಬಿ ಪಾಟೀಲ್

ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರು ಪಕ್ಷದ ನಾಯಕರ ಸೂಚನೆ ಮೇರೆಗೆ ತಮ್ಮ ವರಸೆ ಬದಲಿಸಿದ್ದಾರೆ.
ಎಂ ಬಿ ಪಾಟೀಲ್
ಎಂ ಬಿ ಪಾಟೀಲ್

ಬೆಂಗಳೂರು: ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಎಂ.ಬಿ.ಪಾಟೀಲ್ ಅವರು ಪಕ್ಷದ ನಾಯಕರ ಸೂಚನೆ ಮೇರೆಗೆ ತಮ್ಮ ವರಸೆ ಬದಲಿಸಿದ್ದಾರೆ.

ಒಂದೆರಡು ದಿನಗಳ ಹಿಂದೆ ಮತ್ತೆ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗಿಗೆ ಚಾಲನೆ ನೀಡಿದ್ದ ಎಂ.ಬಿ.ಪಾಟೀಲ್, ಇದೀಗ ವರಸೆ ಬದಲಿಸಿ ಪ್ರತ್ಯೇಕ ಧರ್ಮದ ಕೂಗು ಇಲ್ಲ ಎಂದಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ನಗರದಲ್ಲಿಂದು ಮಾತನಾಡಿದ ಎಂ.ಬಿ.ಪಾಟೀಲ್, ವೀರಶೈವ ಲಿಂಗಾಯಿತ ಒಂದೇ. ಎಲ್ಲರೂ ಸೇರಿ ಒಂದಾಗಿ ಹೋರಾಟ ಮಾಡಬೇಕು ಎಂಬುದು ನನ್ನ ಅಭಿಪ್ರಾಯ. ಏಕೆ ಇದರಲ್ಲಿ ತಪ್ಪು ತಿಳುವಳಿಕೆ ಬಂದಿತೋ ಗೊತ್ತಿಲ್ಲ. ಪ್ರತ್ಯೇಕ ಧರ್ಮ ಹೋರಾಟ ಎಂದಿಲ್ಲ ಎಂದಿದ್ದಾರೆ.

ಕಳೆದರಡು ದಿನಗಳ ಹಿಂದ ಪಂಚಮಸಾಲಿ ಸಮುದಾಯದವರು ಹಿಂದುಳಿದ ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹೀಗಾಗಿ ವೀರಶೈವ ಲಿಂಗಾಯತ ಎರಡನ್ನೂ ಸೇರಿಸಿ ಪ್ರತ್ಯೇಕ ಧರ್ಮ ಮಾಡಬೇಕೆಂಬ ಹಿಂದಿನ ಧ್ವನಿಯನ್ನು ಮತ್ತೆ ಮೊಳಗಿಸಿ, ಅಲ್ಪಸಂಖ್ಯಾತ ಸ್ಥಾನಮಾನಕ್ಕಾಗಿ ಮತ್ತೆ ಒತ್ತಾಯಿಸಿದ್ದರು.

ಎಂ.ಬಿ.ಪಾಟೀಲರ ಈ ಒತ್ತಾಯದಿಂದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಇರುಸುಮುರುಸುಗೊಂಡಿದ್ದಾರೆ. ಕಾಂಗ್ರೆಸ್ ಗೆ ಕಳೆದ ಬಾರಿಯ ಸಾರ್ವತ್ರಿಕ ಚುನಾವಣೆಯಲ್ಲಾದ ಏಟಿನಂತೆ ಮತ್ತೆ ಈ ಧ್ವನಿ ಎಲ್ಲಿ ಸಂಕಷ್ಟ ತಂದೊಡ್ಡಬಹುದೆಂಬ ಮುನ್ನೆಚರಿಕೆಯಿಂದ ಈ ರೀತಿ ಹೇಳಿಕೆ ನೀಡದಂತೆ ಎಂ.ಬಿ.ಪಾಟೀಲರಿಗೆ ಸೂಚಿಸಿದ್ದಾರೆನ್ನಲಾಗಿದೆ. 

ಹೀಗಾಗಿ ವರಸೆ ಬದಲಿಸಿದ ಎಂ.ಬಿ.ಪಾಟೀಲ್, ಎಲ್ಲರೂ ಸೇರಿ ಸಮುದಾಯಕ್ಕೆ ಉದ್ಯೋಗ, ಶಿಕ್ಷಣಕ್ಕೆ ಒಳ್ಳೆಯದಾಗಬೇಕು ಎಂದು ಹೇಳಿದ್ದೆ. ಈಗ ಪ್ರತ್ಯೇಕ ಧರ್ಮದ ಹೋರಾಟ ಇಲ್ಲ. ನಾನು ನಾಯಕತ್ವ ವಹಿಸಿಕೊಳ್ಳುವ ಪ್ರೆಶ್ನೆಯೇ ಇಲ್ಲ. 99 ಉಪ ಪಂಗಡ ಗಳಿಗೆ ಒಳ್ಳೆಯದಾಗಬೇಕು. ಎಲ್ಲರೂ ಜತೆಗೂಡಿ ಹೋಗಬೇಕು ಎಂಬುದಷ್ಟೇ ನನ್ನ ಅನಿಸಿಕೆ.`ಅಲ್ಪಸಂಖ್ಯಾತ ಮಾನ್ಯತೆ ಸಿಕ್ಕಿದ್ದರೆ ಒಳ್ಳೆಯದಾಗುತ್ತಿತ್ತು. ಆದರೀಗ ಇದು ಈಗ ಮುಗಿದ ಅಧ್ಯಾಯ ಎಂದರು.

ಮಾಜಿ ಸಿಎಂ ಯಡಿಯೂರಪ್ಪ ದೊಡ್ಡ ನಾಯಕರು. ಅವರೊಂದಿಗೆ ನನ್ನ ಹೋಲಿಕೆ ಬೇಡ. ನಾವು ಎರಡನೇ ಹಂತದ ನಾಯಕರು ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಎಂ.ಬಿ.ಪಾಟೀಲ್ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com