ನಗರ ಪಾಲಿಕೆ ಚುನಾವಣೆಗಳಲ್ಲಿ ಸಣ್ಣ ಪಕ್ಷಗಳ ಗಮನಾರ್ಹ ಸಾಧನೆ!

ನಗರ ಪಾಲಿಕೆ ಚುನಾವಣೆಗಳಲ್ಲಿ ಸಣ್ಣ ಪಕ್ಷಗಳಾದ ಎಎಪಿ, ಎಐಎಂಐಎಂ ಮತ್ತು ಬಿಎಸ್ ಪಿ ಗಳು ಗಮನಾರ್ಹ ಸಾಧನೆ ಮಾಡಿವೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ನಗರ ಪಾಲಿಕೆ ಚುನಾವಣೆಗಳಲ್ಲಿ ಸಣ್ಣ ಪಕ್ಷಗಳಾದ ಎಎಪಿ, ಎಐಎಂಐಎಂ ಮತ್ತು ಬಿಎಸ್ ಪಿ ಗಳು ಗಮನಾರ್ಹ ಸಾಧನೆ ಮಾಡಿವೆ.

ಇದೇ ಟ್ರೆಂಡ್ ಮುಂದುವರಿದರೇ ಈ ಪಕ್ಷಗಳು ತಳಮಟ್ಟದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಬಹುದು, ಮತ್ತು ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ.

ಕಲಬುರಗಿಯ ಎರಡು ವಾರ್ಡ್ ಗಳಲ್ಲಿ ಎಎಪಿ ಎರಡನೇ ಸ್ಥಾನ ಪಡೆದಿದೆ.ಅವುಗಳಲ್ಲಿ ಒಂದನ್ನು 83 ಮತಗಳ ಅಲ್ಪ ಅಂತರದಿಂದ ಕಳೆದುಕೊಂಡಿದೆ. ಇನ್ನೂ ಬೆಳಗಾವಿ ನಗರ ಪಾಲಿಕೆ ಚುನಾವಣೆಯಲ್ಲಿಯೂ ಎರಡನೇ ಸ್ಥಾನ ಪಡೆಯುವಲ್ಲಿ ಸಫಲವಾಗಿದೆ.

ಹುಬ್ಬಳ್ಳಿ-ಧಾರವಾಡದಲ್ಲಿ ಪಕ್ಷವು ಒಂದು ವಾರ್ಡ್‌ನಲ್ಲಿ ಶೇಕಡಾ 12 ರಷ್ಟು ಮತಗಳನ್ನು ಗಳಿಸಿತು. ಒಟ್ಟಾರೆಯಾಗಿ, ಎಎಪಿ ತಾನು ಸ್ಪರ್ಧಿಸಿದ್ದ 41 ವಾರ್ಡ್‌ಗಳಲ್ಲಿ ಶೇಕಡಾ 3.5 ರಷ್ಟು ಮತಗಳನ್ನು ಗಳಿಸಿದೆ.

ನಾವು ಜನರ ಹೃದಯ ಗೆದ್ದಿದ್ದೇವೆ. ನಾವು ಉತ್ತಮ ಪ್ರಣಾಳಿಕೆಯನ್ನು ಹೊಂದಿದ್ದೇವೆ, ಆದರೆ ಬೂತ್ ಮಟ್ಟದಲ್ಲಿ ಪ್ರಬಲವಾದ ಸಂಘಟನೆಯಿಲ್ಲ. ನಾವು ಭವಿಷ್ಯದಲ್ಲಿ ಜನರ ಬೆಂಬಲವನ್ನು ಮತಗಳಾಗಿ ಪರಿವರ್ತಿಸಿ, ಜಿಲ್ಲಾ  ಮತ್ತು ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ಉತ್ತಮ ಯಶಸ್ಸು ಸಾಧಿಸಲಿದ್ದೇವೆ ಎಂದು ಎಎಪಿ ಕರ್ನಾಟಕ ಸಂಚಾಲಕ ಪೃಥ್ವಿ   ರೆಡ್ಡಿ ಹೇಳಿದ್ದಾರೆ.

ಅಸದುದ್ದೀನ್ ಓವೈಸಿ ಅವರ ಎಐಎಂಐಎಂ ಕೂಡ ಬೆಳಗಾವಿಯಲ್ಲಿ ತನ್ನ ಖಾತೆಯನ್ನು ತೆರೆಯುವ ಮೂಲಕ ಉತ್ತಮ ಸಾಧನ ಮಾಡಿದೆ.12 ವಾರ್ಡ್‌ಗಳಿಂದ ಸ್ಪರ್ಧಿಸಿದ್ದ ಹುಬ್ಬಳ್ಳಿ-ಧಾರವಾಡದಲ್ಲಿ  ಏಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು, ಅದರಲ್ಲಿ ಮೂರು ಸ್ಥಾನಗಳನ್ನು ಗೆಲ್ಲುವ ಮೂಲಕ ಪ್ರಾಬಲ್ಯ ತೋರಿದೆ ಎಲ್ಲಾ ನಾಲ್ಕು ಸ್ಥಾನಗಳಲ್ಲಿ, ಎಐಎಂಐಎಂ ಕಣಕ್ಕೆ ಇರದಿದ್ದರೆ ಕಾಂಗ್ರೆಸ್ ಗೆ ಲಾಭವಾಗುತ್ತಿತ್ತು.

ಓವೈಸಿಯನ್ನು ತಮ್ಮ ಸಮುದಾಯದ ನಾಯಕರಾಗಿ ಸ್ವಾಗತಿಸಿದರೂ, ಕಲಬುರಗಿಯ ಅಲ್ಪಸಂಖ್ಯಾತರು ಓವೈಸಿ ಪಕ್ಷಕ್ಕೆ ಸಾಮೂಹಿಕವಾಗಿ ಮತ ಚಲಾಯಿಸದ ಕಾರಣ, ಅಂತಿಮವಾಗಿ ಬಿಜೆಪಿಗೆ ಸಹಾಯವಾಗಲಿದೆ ಎಂದು ಸ್ಥಳೀಯ ನಾಯಕರೊಬ್ಬರು ಹೇಳಿದರು.

ನಾವು ಸಣ್ಣ ಪಕ್ಷಗಳ ಬಗ್ಗೆ ಕಾಳಜಿ ಹೊಂದಿದ್ದೇವೆ, ನಮ್ಮಂತೆಯೇ ಒಂದು ಸಿದ್ಧಾಂತವನ್ನು ಹೊಂದಿದ್ದು ನಮ್ಮ ಮತಗಳನ್ನು ಕಡಿತಗೊಳಿಸಿವೆ. ಆದರೆ ಓವೈಸಿ ಪಕ್ಷ  ಉತ್ತಮ ಪ್ರಗತಿ ಸಾಧಿಸದ ಕಾರಣ ಚುನಾವಣೆಯ ಫಲಿತಾಂಶವು ನಮಗೆ ಲಾಭವಾಯಿತು ಎಂದು ಚಿತ್ತಾಪುರ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ., ಪ್ರತಿ ಮತ ಎಣಿಕೆಯಲ್ಲಿಯೂ,   ನಮ್ಮ ಸಾಂಪ್ರದಾಯಿಕ ಮತಗಳನ್ನು ಎಲ್ಲಿ ಕಳೆದುಕೊಂಡೆವು ಎಂಬುದನ್ನು ನಾವು ಪರಿಶೀಲಿಸಬೇಕು ಎಂದು ಅವರು ಒತ್ತಿ ಹೇಳಿದರು.

ಹುಬ್ಬಳ್ಳಿ-ಧಾರವಾಡದಲ್ಲಿ ಏಳು ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಬಿಎಸ್‌ಪಿ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಮುಸ್ಲಿಂ ಮತ್ತು ಎಸ್‌ಸಿ ಜನಸಂಖ್ಯೆಯು ಗಣನೀಯವಾಗಿರುವ ವಾರ್ಡ್‌ಗಳಲ್ಲಿ ಬಿಎಸ್ ಪಿ ಅಭ್ಯರ್ಥಿಗಳು ಉತ್ತಮ ಸಂಖ್ಯೆಯ ಮತಗಳನ್ನು ಪಡೆದಿದ್ದಾರೆ. ಕಲಬುರಗಿಯಲ್ಲಿ ಪಕ್ಷವು ಆರು ವಾರ್ಡ್‌ಗಳಿಂದ ಸ್ಪರ್ಧಿಸಿತ್ತು.ಎಎಪಿ ಮೂರು ನಗರ ನಿಗಮಗಳಲ್ಲಿ 94 ವಾರ್ಡ್‌ಗಳಲ್ಲಿ ಸ್ಪರ್ಧಿಸಿತ್ತು, ಎಲ್ಲಾ ಮೂರು ನಿಗಮಗಳ ಚುನಾವಣೆಗಳಲ್ಲಿ ನಮ್ಮ ಅಭ್ಯರ್ಥಿಗಳು ಗಣನೀಯ ಸಂಖ್ಯೆಯ ಮತಗಳನ್ನು ಪಡೆದಿದ್ದಾರೆ ಮತ್ತು ನಾವು ಕೆಲವು ಸ್ಥಾನಗಳನ್ನು ಕಡಿಮೆ ಅಂತರದಿಂದ  ಕಳೆದುಕೊಂಡಿದ್ದೇವೆ  ಎಂದು ಪೃಥ್ವಿ ರೆಡ್ಡಿ ಫಲಿತಾಂಶವನ್ನು ವಿಶ್ಲೇಷಿಸಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com