ಸದನದಲ್ಲಿ ಮಾಜಿ ಸಿಎಂ ಯಡಿಯೂರಪ್ಪಗೆ ಮುಖ್ಯ ಸಚೇತಕರ ಪಕ್ಕದ ಆಸನ: ಸಿಎಂ ಬೊಮ್ಮಾಯಿ ಆಡಳಿತಕ್ಕೆ ಬಹುಪರಾಕ್!

ವಿಧಾನಸಭೆ ಅಧಿವೇಶನದಲ್ಲಿ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸದನದಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾರೆ, ಅವರಿಗೆ ಯಾವ ಸ್ಥಾನ ನೀಡಲಾಗುತ್ತದೆ, ಶಾಸಕ ಸೀಟಿನಲ್ಲಿ ಅವರು ಕೂರಬೇಕಾಗುತ್ತದೆ ಎಂಬಿತ್ಯಾದಿ ಹಲವು ಚರ್ಚೆಗಳು ಕೇಳಿಬಂದಿದ್ದವು.
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Updated on

ಬೆಂಗಳೂರು: ಕರ್ನಾಟಕದ 15ನೇ ವಿಧಾನಸಭೆಯ 10ನೇ ಅಧಿವೇಶನವು ಸೋಮವಾರದಿಂದ ಸೆಪ್ಟೆಂಬರ್ 24 ರವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಹಿಂದಿನ ನಿಕಟಪೂರ್ವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸದನದಲ್ಲಿ ಎಲ್ಲಿ ಕುಳಿತುಕೊಳ್ಳುತ್ತಾರೆ, ಅವರಿಗೆ ಯಾವ ಸ್ಥಾನ ನೀಡಲಾಗುತ್ತದೆ, ಶಾಸಕ ಸೀಟಿನಲ್ಲಿ ಅವರು ಕೂರಬೇಕಾಗುತ್ತದೆ ಎಂಬಿತ್ಯಾದಿ ಹಲವು ಚರ್ಚೆಗಳು ಕೇಳಿಬಂದಿದ್ದವು.

ಈ ಬಗ್ಗೆ ಇಂದು ವಿಧಾನಸೌಧಕ್ಕೆ ಕಲಾಪಕ್ಕೆ ಆಗಮಿಸಿದ ಯಡಿಯೂರಪ್ಪನವರು ಸುದ್ದಿಗಾರರೊಂದಿಗೆ ಮಾತನಾಡಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ, ಅವರಿಗೆ ನನ್ನ ಸಂಪೂರ್ಣ ಸಹಕಾರವಿದೆ ಎಂದು ಹೇಳಿದ್ದಾರೆ.

ಕಲಾಪದಲ್ಲಿ ಮುಖ್ಯ ಸಚೇತಕರ ಪಕ್ಕದ ಆಸನವನ್ನು ನೀಡಬೇಕೆಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು ಮನವಿ ಮಾಡಿಕೊಂಡಾಗ ಅವರು ಒಪ್ಪಿಕೊಂಡಿದ್ದಾರೆ. ಹೀಗಾಗಿ ಮುಖ್ಯ ಸಚೇತಕರ ಪಕ್ಕದ ಸೀಟಿನಲ್ಲಿ ಆಸೀನನಾಗುತ್ತೇನೆ ಎಂದಿದ್ದಾರೆ.

ಕಲಾಪ ಮುಗಿದ ಮೇಲೆ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಲಿದ್ದು ಮತ್ತೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ ಎಂದು ಯಡಿಯೂರಪ್ಪ ಹೇಳಿದ್ದಾರೆ.

ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ವಿಪ್ ಪಕ್ಕದ ಕುರ್ಚಿಯಲ್ಲಿ ಬಿ ಎಸ್ ಯಡಿಯೂರಪ್ಪ ಆಸೀನರಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com