ಬಿಜೆಪಿ ಪಾಲಿಗೆ ರಾಜಕೀಯವೆಂದರೆ ಕಳ್ಳದಂಧೆ; ಮೋದಿ ಅಣತಿಯಂತೆ ಭ್ರಷ್ಟಾಚಾರ ನಡೆಯುತ್ತಿರುವುದು ಸ್ಪಷ್ಟ: ಕಾಂಗ್ರೆಸ್
ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಆಪರೇಷನ್ ಕಮಲಕ್ಕಾಗಿ ಹಣ ಹೂಡಿದ್ದೇಕೆ ಎಂದು ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
Published: 13th September 2021 03:17 PM | Last Updated: 13th September 2021 03:23 PM | A+A A-

ನರೇಂದ್ರ ಮೋದಿ
ಬೆಂಗಳೂರು: ಬಿಜೆಪಿ ವಿರುದ್ಧ ಕಾಂಗ್ರೆಸ್ ಹರಿಹಾಯ್ದಿದೆ, ಆಪರೇಷನ್ ಕಮಲಕ್ಕಾಗಿ ಹಣ ಹೂಡಿದ್ದೇಕೆ ಎಂದು ಭಾರತೀಯ ಜನತಾ ಪಕ್ಷವನ್ನು ಕಾಂಗ್ರೆಸ್ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ಸಿಪಿ ಯೋಗೀಶ್ವರ್ ಆಪರೇಷನ್ ಕಮಲಕ್ಕಾಗಿ 9 ಕೋಟಿ ಸಾಲ ಮಾಡಿದ್ದರು ಎಂಬ ಅಂಶ ಬಯಲಾಗಿತ್ತು, ಸಾಲ ಮಾಡಿದ್ದೇಕೆ? ಯಾಕಾಗಿ ಈ ಬಂಡವಾಳ ಹೂಡಿಕೆ? ಬಿಜೆಪಿ ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ.
ಈ ಎಲ್ಲಾ ಭ್ರಷ್ಟಾಚಾರಗಳು ಮೋದಿಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ. ಪೆಟ್ರೋಲ್ ಡೀಸೆಲ್‌ಗಳ ಬೆಲೆ ಏರಿಕೆಯಿಂದ ಇಡೀ ಅರ್ಥ ವ್ಯವಸ್ಥೆಯ ಮೇಲೆ ಪರಿಣಾಮ ಬೀರಲಿದೆ, ಬಹುತೇಕ ವಸ್ತುಗಳ ಬೆಲೆ ಏರಿಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಕಾರಣವಾಗಲಿದೆ. ಆರ್ಥಿಕ ಚಟುವಟಿಕೆಗಳು ಕುಂಠಿತಗೊಳ್ಳಲಿವೆ. ಆದರೆ ಬಿಜೆಪಿ ಸರ್ಕಾರ ತೆರಿಗೆ ಇಳಿಸುವ ಸಣ್ಣ ಮನಸ್ಸನ್ನೂ ಮಾಡದೆ ನಿರ್ದಯವಾಗಿ ನಡೆದುಕೊಳ್ಳುತ್ತಿದೆ ಭ್ರಷ್ಟ ಬಿಜೆಪಿ ಸರ್ಕಾರ ಎಂದು ಟಾಂಗ್ ನೀಡಿದೆ.
ಬಿಜೆಪಿಯ ಆಂತರಿಕ ಕಿತ್ತಾಟದಲ್ಲಿ ಸಿಪಿ ಯೋಗೀಶ್ವರ್ ಆಪರೇಷನ್ ಕಮಲಕ್ಕಾಗಿ 9 ಕೋಟಿ ಸಾಲ ಮಾಡಿದ್ದರು ಎಂಬ ಅಂಶ ಬಯಲಾಗಿತ್ತು, ಸಾಲ ಮಾಡಿದ್ದೇಕೆ? ಯಾಕಾಗಿ ಈ ಬಂಡವಾಳ ಹೂಡಿಕೆ?@BJP4Karnataka ಪಾಲಿಗೆ ರಾಜಕೀಯವೆಂದರೆ 'ಕಳ್ಳದಂಧೆ'ಯಾಗಿದೆ.
— Karnataka Congress (@INCKarnataka) September 13, 2021
ಈ ಎಲ್ಲಾ ಭ್ರಷ್ಟಾಚಾರಗಳು ಮೋದಿಯವರ ಅಣತಿಯಂತೆ ನಡೆಯುತ್ತಿರುವುದು ಸ್ಪಷ್ಟ.#ಭ್ರಷ್ಟಬಿಜೆಪಿ