ಸ್ಕೌಂಡ್ರಲ್ ಯಾರು? ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು: ಸ್ಪೀಕರ್ ಕಾಗೇರಿಗೆ ರಮೇಶ್ ಕುಮಾರ್ ಪ್ರಶ್ನೆ  

ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ.
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(ಸಂಗ್ರಹ ಚಿತ್ರ)
ಮಾಜಿ ಸ್ಪೀಕರ್ ರಮೇಶ್ ಕುಮಾರ್ ಮತ್ತು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ(ಸಂಗ್ರಹ ಚಿತ್ರ)

ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಗಂಭೀರ ಚರ್ಚೆ, ವಿಷಯ ಮಂಡನೆಗಳ ಹೊರತಾಗಿಯೂ ಆಗಾಗ್ಗೆ ಹಲವಾರು ರಸವತ್ತಾದ ಮಾತುಕತೆಗಳೂ ನಡೆಯುತ್ತವೆ.

ಅಂತೆಯೇ ಇಂದಿನ ಕಲಾಪದಲ್ಲಿಯೂ ಮಾಜಿ ಸ್ವೀಕರ್, ಕಾಂಗ್ರೆಸ್ ಶಾಸಕ “ಸ್ಕೌಂಡ್ರಲ್ಸ್” ಪ್ರಸಂಗವೊಂದನ್ನು ಹಂಚಿಕೊಂಡು ಸಭೆ ನಕ್ಕು ಹಗುರಾಗುವಂತೆ ಮಾಡಿದರು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಖ್ಯಾತ ವಕೀಲ ರಾಮ್ ಜೇಠ್ಮಲಾನಿಯವರನ್ನು ಕರೆಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿದ್ದವರು ರಮೇಶ್ ಕುಮಾರ್.

“ನಾನು ಅಧ್ಯಕ್ಷನಾಗಿದ್ದ ಕಾರಣ ನನ್ನ ಭಾಷಣ ಕಡೆಯಲ್ಲಿತ್ತು. ಈ ನಡುವೆ ರಾಮ್ ಜೇಠ್ಮಲಾನಿ ತಮ್ಮ ಮುಖ್ಯ ಭಾಷಣದಲ್ಲಿ “ಆಲ್ ದಿಸ್ ಸ್ಕೌಂಡ್ರಲ್ಸ್ ಆಫ್ ಕಾಂಗ್ರೆಸ್ ಪಾರ್ಟಿ” ಎಂದು ಮಾತು ಶುರು ಮಾಡಿ ಪಕ್ಷವನ್ನು ಸಾಕಷ್ಟು ಬಣ್ಣಿಸಿದರು. “ನನಗೆ ಲಾ ಪಾ ಏನೂ ಗೊತ್ತಿಲ್ಲ. ಹೀಗಾಗಿ ಎಲ್ಲ ಪಕ್ಷಗಳಲ್ಲೂ ಸ್ಕೌಂಡ್ರಲ್ಸ್ ಇರುತ್ತಾರೆ. ಈ ಎಲ್ಲಾ ಸ್ಕೌಂಡ್ರಲ್ಸ್ ಗಳಿಗೆ ಅಡ್ವೊಕೇಟ್ ಆಗಿ ತಾವು ಲಭ್ಯವಿದ್ದೀರಿ ಎಂದೆ” ಎಂದರು. ಈ ಮಾತಿಗೆ ಸದಸ್ಯರೆಲ್ಲರ ಮೊಗದಲ್ಲಿ ನಗೆ ಚಿಮ್ಮಿತ್ತು.

ಬಳಿಕ, “ಸ್ಕೌಂಡ್ರಲ್ ಯಾರು, ಲುಮಿನರಿ ಯಾರು ಎಂಬುದು ನನಗಿನ್ನೂ ಸ್ಪಷ್ಟವಾಗಿಲ್ಲ. ತಮಗಿರುವ ವಿದ್ವತ್ತಿನಿಂದ ಇದಕ್ಕೆ ಉತ್ತರಿಸಬೇಕು” ಎಂದು ಸ್ಪೀಕರ್ ಕಾಗೇರಿಯವರನ್ನು ಕೇಳಿದರು. ಆಗಲಿ. ಸದನದ ಹೊರತಾಗಿ ಹೊರಗೆ ನಾವಿಬ್ಬರೂ ಸಿಕ್ಕಾಗ ಈ ಬಗ್ಗೆ ಚರ್ಚಿಸೋಣವಂತೆ ಎಂದು ಕಾಗೇರಿ ಹೇಳಿದಾಗ ರಮೇಶ್ ಕುಮಾರ್ ಸುಮ್ಮನಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com