ಕಾಂಗ್ರೆಸ್ ನಿಂದ ಕರ್ನಾಟಕದಲ್ಲಿ 21 ದಿನ 'ಭಾರತ್ ಜೋಡೋ' ಯಾತ್ರೆ, ಪ್ರತಿದಿನ 25 ಕಿಲೋ ಮೀಟರ್ ಸಂಚಾರ

ಕಾಂಗ್ರೆಸ್ ನಲ್ಲೀಗ ಭಾರತ್ ಜೋಡೋ ಯಾತ್ರೆಯ ತಯಾರಿಯಲ್ಲಿ ನಾಯಕರಿದ್ದಾರೆ. ಈ ಯಾತ್ರೆ ರಾಜ್ಯದಲ್ಲಿ 21 ದಿನಗಳ ಕಾಲ ಗುಂಡ್ಲುಪೇಟೆಯಿಂದ ರಾಯಚೂರಿನವರೆಗೆ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 
ಭಾರತ್ ಜೋಡೋ ಪತ್ರಿಕಾಗೋಷ್ಠಿ
ಭಾರತ್ ಜೋಡೋ ಪತ್ರಿಕಾಗೋಷ್ಠಿ
Updated on

ಬೆಂಗಳೂರು: ಕಾಂಗ್ರೆಸ್ ನಲ್ಲೀಗ ಭಾರತ್ ಜೋಡೋ ಯಾತ್ರೆಯ ತಯಾರಿಯಲ್ಲಿ ನಾಯಕರಿದ್ದಾರೆ. ಈ ಯಾತ್ರೆ ರಾಜ್ಯದಲ್ಲಿ 21 ದಿನಗಳ ಕಾಲ ಗುಂಡ್ಲುಪೇಟೆಯಿಂದ ರಾಯಚೂರಿನವರೆಗೆ ನಡೆಯಲಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 

ಯಾತ್ರೆಯಲ್ಲಿ ಭಾಗವಹಿಸುವವರು ನೋಂದಣಿ ಮಾಡಿಕೊಳ್ಳಲಿದ್ದು, ಬೆಳಗ್ಗೆ 11ರವರೆಗೆ ಮುಖಂಡರೊಂದಿಗೆ ಸಂವಾದ ನಡೆಸಿ ಬಳಿಕ ಸಂಜೆಯವರೆಗೂ ಪಾದಯಾತ್ರೆ ನಡೆಸುವ ಯೋಜನೆ ನಾಯಕರದ್ದಾಗಿದೆ. 

ಸಾಮಾಜಿಕ ಸಾಮರಸ್ಯಕ್ಕೆ ಇರುವ ಸವಾಲುಗಳನ್ನು ಪರಿಗಣಿಸಿ, ಕುವೆಂಪು ಅವರು ಹೇಳಿದಂತೆ "ನಮ್ಮ ಭೂಮಿ ಶಾಂತಿಯ ತೋಟವಾಗಬೇಕು", ಇಂದು ಪ್ರತಿ ಕುಟುಂಬದಲ್ಲಿ ಹಣದುಬ್ಬರ ನಿರುದ್ಯೋಗ ಸಮಸ್ಯೆಗಳಿಂದ ಜನ ಬಳಲಿ ಹೋಗಿದ್ದಾರೆ. ಯುವಕರಿಗೆ ಉದ್ಯೋಗ ಸಿಗಬೇಕು. ಕರ್ನಾಟಕದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ಬರಬೇಕು, ರೈತರು ಮತ್ತು ಕೂಲಿಕಾರ್ಮಿಕರ ಬದುಕನ್ನು ಸುಲಭಗೊಳಿಸಬೇಕು ಎಂಬುದು ಭಾರತ್ ಜೋಡೋ ಯಾತ್ರೆಯ ಉದ್ದೇಶ ಎಂದು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು. 

ಟರ್ ನಡೆಯಲಾಗುತ್ತದೆ. ಎಲ್ಲಾ ಜಿಲ್ಲೆಗಳ ಜನರಿಗೆ ಈ ಪಾದಯಾತ್ರೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೇಶಾದ್ಯಂತ ಸಂಪೂರ್ಣ 3,500 ಕಿ.ಮೀ ಸಂಚರಿಸಲಿದ್ದಾರೆ ಎಂದರು. 

ನಾಡಿದ್ದು ಭಾನುವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸೋಮವಾರ ಮತ್ತೊಂದು ಪದಾಧಿಕಾರಿಗಳ ಸಭೆ ನಡೆಯಲಿದೆ. ಪಾದಯಾತ್ರೆ ವೇಳೆ ಎಲ್ಲ ನಾಯಕರು ಜವಾಬ್ದಾರಿ ಹಂಚಿಕೊಳ್ಳಲಿದ್ದಾರೆ. ಕನ್ಯಾಕುಮಾರಿಯಲ್ಲಿ ಸೆಪ್ಟೆಂಬರ್ 19ರಂದು ನಡೆಯುವ ಈ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯದ ಪ್ರಮುಖ ನಾಯಕರು ಉಪಸ್ಥಿತರಿರಲಿದ್ದಾರೆ.

ಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರಿಗೆ ರಾಜ್ಯದಲ್ಲಿ ಪಾದಯಾತ್ರೆಯ ಉಸ್ತುವಾರಿ ನೀಡಲಾಗಿದ್ದು, ಕೆ.ಜೆ.ಜಾರ್ಜ್ ಮತ್ತು ಸಲೀಂ ಅಹಮದ್ ಅವರಿಗೆ ರಾಷ್ಟ್ರಮಟ್ಟದ ಸಮಿತಿಯಲ್ಲಿ ಪ್ರಮುಖ ಸ್ಥಾನ ನೀಡಿ ವಿವಿಧ ಜವಾಬ್ದಾರಿಗಳನ್ನು ವಹಿಸಲಾಗಿದೆ. ಮುಂದಿನ ದಿನಗಳಲ್ಲಿ 21 ದಿನಗಳ ಕಾಲ ಯಾರನ್ನು ಪಾದಯಾತ್ರೆ ಮಾಡಬೇಕು ಎಂದು ಸಭೆ ನಡೆಸಿ ನಂತರ ಆಯ್ಕೆ ಮಾಡಲಾಗುವುದು.

ಒಂದು ದಿನದ ಮಟ್ಟಿಗೆ ಬಳ್ಳಾರಿಯಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಮೈಸೂರಿನಲ್ಲಿ ಅಕ್ಟೋಬರ್ 4-5 ರಂದು ದಸರಾ ತಯಾರಿ ಹಿನ್ನೆಲೆಯಲ್ಲಿ ಯಾತ್ರೆಗೆ ಒಪ್ಪಿಗೆ ಸಿಗುವ ಸಾಧ್ಯತೆ ಕಡಿಮೆ, ಈ ಬಗ್ಗೆ ನಾಯಕರೊಂದಿಗೆ ಸಮಾಲೋಚಿಸಿ ನಿರ್ಧರಿಸಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com