ಬಿಜೆಪಿ ಮನೆಯೊಂದು ಮೂರು ಬಾಗಿಲಾಗಿರುವುದನ್ನು ಬಹಿರಂಗವಾಗೇ ಒಪ್ಪಿದ್ದಾರೆ: ಕಾಂಗ್ರೆಸ್ ವ್ಯಂಗ್ಯ

ವಿಧಾನಸಭೆ ಚುನಾವಣೆ ಸನ್ನಿಹಿತವಾಗುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಕೂಡ ಗುಂಪುಗಾರಿಕೆ, ಪ್ರಮುಖ ನಾಯಕ ಬಿ ಎಸ್ ಯಡಿಯೂರಪ್ಪನವರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ವಿಧಾನಸಭೆ ಚುನಾವಣೆ ಸನ್ನಿಹಿತವಾಗುವ ಹೊತ್ತಿನಲ್ಲಿ ಕರ್ನಾಟಕದಲ್ಲಿ ಬಿಜೆಪಿಯಲ್ಲಿ ಕೂಡ ಗುಂಪುಗಾರಿಕೆ, ಪ್ರಮುಖ ನಾಯಕ ಬಿ ಎಸ್ ಯಡಿಯೂರಪ್ಪನವರನ್ನು ಕಡೆಗಣಿಸಲಾಗುತ್ತಿದೆಯೇ ಎಂಬ ಅನುಮಾನ ಕಾಡುತ್ತಿದೆ.

ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗವಾಗಿದೆ. ಇದಕ್ಕೆ ಪುಷ್ಠ ನೀಡುವಂತೆ ನಿನ್ನೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ಕೆ ಎಸ್ ಈಶ್ವರಪ್ಪನವರು ಕೂಡ ಬಿಜೆಪಿಯಲ್ಲಿ ಕೂಡ ಮುನಿಸಿದೆ ಎಂದು ಒಪ್ಪಿಕೊಂಡಿದ್ದರು. ಇಂದು ರಾಜ್ಯದಲ್ಲಿ 10 ಬಿಜೆಪಿ ಜಿಲ್ಲಾ ಕಚೇರಿಗಳನ್ನು ರಾಷ್ಟ್ರೀಯ ಅಧ್ಯಕ್ಷ ಜೆಪಿ. ನಡ್ಡಾ ಅವರು ವರ್ಚುವಲ್ ಮೂಲಕ ಉದ್ಘಾಟಿಸಲಿದ್ದಾರೆ. ಅವರ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಮುನಿಸಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪನವರನ್ನು (BS Yediyurappa) ಕೊನೆಗೂ ಬಿಜೆಪಿ ನಾಯಕರು ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೆಹಲಿ ನಾಯಕರ ಕರೆ ಮೇರೆಗೆ ಯಡಿಯೂರಪ್ಪನವರ ಕೋಪ ಶಮನವಾಗಿದ್ದು, ಇಂದು ಕೊಪ್ಪಳ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಕೊಂಡಿದ್ದಾರೆ.

ಇಷ್ಟು ಸಮಯ ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಭಿನ್ನಮತದ ಬಗ್ಗೆ ಬಿಜೆಪಿ ನಾಯಕರು ಪದೇ ಪದೇ ಹಲವು ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಿದ್ದರು. ಇದೀಗ ಬಿಎಸ್ ವೈ ವಿಷಯ ಸಿಕ್ಕಿರುವುದು ಕಾಂಗ್ರೆಸ್ ಗೆ ಟಾನಿಕ್ ಸಿಕ್ಕಂತಾಗಿದೆ. ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಈ ಬಗ್ಗೆ ಟೀಕಿಸಿದ್ದಾರೆ. ಬಿಜೆಪಿಯಲ್ಲಿನ ಒಳಜಗಳ ಎಷ್ಟು ತೀವ್ರವಾಗಿದೆ ಎಂದರೆ ಅವರೇ ಒಪ್ಪಿಕೊಳ್ಳುವ ಒತ್ತಡಕ್ಕೆ ಬೀಳುವಷ್ಟು!

ಕಿತ್ತಾಟದಲ್ಲಿ ಬಿಜೆಪಿ ಮನೆಯೊಂದು ಮುನ್ನೂರು ಬಾಗಿಲಾಗಿರುವುದನ್ನು ಈಶ್ವರಪ್ಪನವರೇ ಬಹಿರಂಗವಾಗೇ ಒಪ್ಪಿದ್ದಾರೆ. ಇತರರತ್ತ ಬೆರಳು ತೋರಿಸುತ್ತಾ ನಿಂತ ಬಿಜೆಪಿಗೆ ತನ್ನ ನೆಲ ಕುಸಿದಿರುವುದು ತಿಳಿದಿಲ್ಲ ಎಂದಿದೆ.

ಹೆಲಿಕಾಪ್ಟರ್ ಮೂಲಕ ಕೊಪ್ಪಳಕ್ಕೆ

ದೆಹಲಿ ನಾಯಕರ ಕರೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಒಪ್ಪಿಕೊಂಡಿರುವ ಯಡಿಯೂರಪ್ಪ, ಕೊನೆ ಕ್ಷಣದಲ್ಲಿ ಕೊಪ್ಪಳಕ್ಕೆ ತೆರಳುವುದು ಖಚಿತವಾಗಿದ್ದು, ಹೆಚ್​ಎಎಲ್​ ಏರ್​ಪೋರ್ಟ್​ನಿಂದ ಹೆಲಿಕಾಪ್ಟರ್ ಮೂಲಕ ಕೊಪ್ಪಳಕ್ಕೆ ತೆರಳಲಿದ್ದಾರೆ.

ಯಡಿಯೂರಪ್ಪ ಅವರನ್ನು ಕಡೆಗಣಿಸುತ್ತಿರುವುದು ಇದೊಂದೇ ಕಾರ್ಯಕವಲ್ಲ. ಈ ಹಿಂದೆ ಪಕ್ಷದ ಕಾರ್ಯಚಟುವಟಿಕೆಗಳ ಬ್ಯಾನರ್​ಗಳಲ್ಲೂ ಸಹ ಯಡಿಯೂರಪ್ಪನವರ ಫೋಟೋ ಹಾಕಿಲ್ಲದಿರುವ ಉದಾಹರಣೆಗಳು ಇವೆ. ಅಲ್ಲದೇ ಈ ಬಗ್ಗೆ ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು ಉಂಟು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com