ಸಿದ್ದರಾಮಯ್ಯಗೆ ಟಿಪ್ಪು ಐಕಾನ್, ಹಾಗೆಯೇ ಡಿಕೆ ಶಿವಕುಮಾರ್ ಒಬ್ಬ ಐಕಾನ್‌ನನ್ನು ಹುಡುಕಿಕೊಂಡಿದ್ದಾರೆ: ಬಿಜೆಪಿ
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯರಿಗೆ ಹೇಗೆ ಟಿಪ್ಪು ಎಂಬ ಒಬ್ಬ ಐಕಾನ್ ಇದ್ದನೋ, ಹಾಗೆಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸಹ ತಮಗೆ ಬೇಕಾದ ಒಬ್ಬ ಐಕಾನ್‌ನನ್ನು ಹುಡುಕಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ‘ಸಮುದಾಯಗಳ ಓಲೈಕೆಯಲ್ಲಿ ಕಾಂಗ್ರೆಸ್ ಯಾವ ಮಟ್ಟಕ್ಕೆ ಇಳಿದಿದೆಯೆಂದರೆ, ಉಗ್ರಗಾಮಿಗಳನ್ನೂ ಮಾವನ ಮಗನಂತೆ ನೋಡುತ್ತದೆ. ಕಾರಣ ಇಷ್ಟೇ ಉಗ್ರಗಾಮಿ ಮಸೂದ್ ಅಝರ್‌ನನ್ನು "ಜೀ" ಎಂದು ಗೌರವಿಸಿದ ರಾಹುಲ್ ಗಾಂಧಿಯನ್ನು ಖುಷಿಪಡಿಸಲು ಈಗ ಡಿಕೆಶಿ ಉಗ್ರಗಾಮಿಗೇ ಕ್ಲೀನ್‌ಚಿಟ್ ಕೊಡುತ್ತಿದ್ದಾರೆ’ ಅಂತಾ ಕುಟುಕಿದೆ.
ಸಿದ್ದರಾಮಯ್ಯರಿಗೆ ಹೇಗೆ ಟಿಪ್ಪು ಎಂಬ ಒಬ್ಬ ಐಕಾನ್ ಇದ್ದನೋ, ಹಾಗೆಯೇ ಡಿಕೆ ಶಿವಕುಮಾರ್ ಕೂಡ ತಮಗೆ ಬೇಕಾದ ಒಬ್ಬ ಐಕಾನ್‌ನನ್ನು ಹುಡುಕಿಕೊಂಡಿದ್ದಾರೆ. ಅವನೇ ಕುಕ್ಕರ್ ಬ್ಲಾಸ್ಟ್ ಆರೋಪಿ ಅಥವಾ ಡಿಕೆಶಿ ಬ್ರದರ್ ಶಾರಿಖ್! ಎಂದು ಲೇವಡಿ ಮಾಡಿದೆ.
ದಿನಬೆಳಗಾದರೆ ಎಣ್ಣೆ ಸೀಗೇಕಾಯಿಯಂತೆ ಒಬ್ಬರ ಮೇಲೊಬ್ಬರು ಸಿಡಿದು ಬೀಳುತ್ತಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಈಗ ಮತ್ತೆ ಒಂದಾಗಿರುವುದು ಒಂದೇ ಒಂದು ಉದ್ದೇಶಕ್ಕೆ. ಅದು ಶಾರಿಕ್ ಒಬ್ಬ ಅಮಾಯಕ ಎಂದು ತೋರಿಸಿ, ಅವರ ಮನೆಯ 4 ವೋಟುಗಳನ್ನು ತೆಗೆದುಕೊಳ್ಳುವುದು!
ಸಿದ್ದರಾಮಯ್ಯನವರ ತುಷ್ಟೀಕರಣದ ರಾಜಕಾರಣದಿಂದ ಪಿಎಫ್‌ಐನಂಥ ಉಗ್ರಗಾಮಿ ಸಂಘಟನೆ ಬೆಳೆದು ನಿಂತಿತ್ತು. ಈಗ ಡಿಕೆಶಿ ಶಾರಿಕ್‌ನಂಥವನನ್ನು ಬೆಂಬಲಿಸಿ ಪಿಎಫ್‌ಐ ಭಾಗ 2ನ್ನು ಬೆಳೆಸುವ ಆಲೋಚನೆಯೇನಾದ್ರೂ ಇದ್ದರೆ ಬಿಡುವುದು ಒಳ್ಳೆಯದು. ಏಕೆಂದರೆ ಸಿಎಂ ಬೊಮ್ಮಾಯಿಯವರ ಸರ್ಕಾರ ಅದನ್ನೂ ಬ್ಯಾನ್ ಮಾಡುತ್ತೆ’ ಎಂದು ಬಿಜೆಪಿ ಟ್ವೀಟ್ ಮಾಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ